ಅಲ್ಲಮಪ್ರಭು ಅನುಭವ ಮಂಟಪದ ಮೇರು ಶಿಖರ: ಡಾ. ಗುರುಬಸವ ಮಹಾಸ್ವಾಮಿಗಳು

KannadaprabhaNewsNetwork | Published : Apr 2, 2025 1:05 AM

ಸಾರಾಂಶ

ತಾಲೂಕಿನ ಕಮ್ಮತ್ತಹಳ್ಳಿ ಗ್ರಾಮದ ವಿರಕ್ತಮಠದಲ್ಲಿ ಅಲ್ಲಮ್ಮಪ್ರಭು ದೇವರ 55ನೇ ಜಯಂತಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಹರಪನಹಳ್ಳಿ

ತಾಲೂಕಿನ ಕಮ್ಮತ್ತಹಳ್ಳಿ ಗ್ರಾಮದ ವಿರಕ್ತಮಠದಲ್ಲಿ ಅಲ್ಲಮ್ಮಪ್ರಭು ದೇವರ 55ನೇ ಜಯಂತಿ ಆಚರಿಸಲಾಯಿತು. ಕಮ್ಮತ್ತಹಳ್ಳಿ ಪಾಂಡೋಮಟ್ಟಿ ವಿರಕ್ತಮಠದ ಡಾ. ಗುರುಬಸವ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿ ಮಾತನಾಡಿ, ಅಲ್ಲಮಪ್ರಭು ದೇವರಿಗೆ ಅನುಭವ ಮಂಟಪದಲ್ಲಿ ಧರ್ಮದ ಪ್ರಸಾರ, ವೈಚಾರಿಕ ಚಿಂತನೆ, ಸಮ ಸಮಾಜದ ದೃಷ್ಟಿಕೋನವಿತ್ತು ಎಂದು ಹೇಳಿದರು.

ಬಸವಣ್ಣನವರು ಅನುಭವ ಮಂಟಪ ಸೃಷ್ಟಿ ಮಾಡಿದವರು. ಶೂನ್ಯ ಪೀಠದ ಅಧ್ಯಕ್ಷರಾಗಿ ಅಲ್ಲಮ್ಮಪ್ರಭುಗಳ ಜ್ಞಾನ ಹಾಗೂ ಬೆಡಗಿನ ಬಗ್ಗೆ ವಿಚಾರವಂತರಾಗಿದ್ದರು, ಹಲವಾರು ವಚನಗಳನ್ನು ನೀಡಿದ್ದಾರೆ. ಅದಕ್ಕೆ ಅವರಿಗೆ ಅನುಭವ ಮಂಟಪದ ಮೇರು ಶಿಖರ ಎಂದು ಕರೆಯುತ್ತಾರೆ.

ವಿಚಾರ ವಾದಿವೀಣಾ ಬನ್ನಂಜೆ ಇತ್ತೀಚಿನ ಪತ್ರಿಕೆಗಳಲ್ಲಿ ಅನುಭವ ಮಂಟಪ ಇರಲಿಲ್ಲ ಎಂಬ ಮಾತನ್ನು ಹೇಳಿದ್ದಾರೆ, ಇದನ್ನು ಎಲ್ಲರೂ ಗಮನಿಸಿರಬಹುದು,12 ನೇ ಶತಮಾನದಿಂದ ಇಲ್ಲಿಯ ತನಕ ಎಲ್ಲರು ಅನುಭವ ಮಂಟಪವನ್ನು ಒಪ್ಪಿಕೊಂಡಿದ್ದಾರೆ.ವೀಣಾ ಬನ್ನಂಜೆಯವರು ಪ್ರತಿಪಾದಿಸಿರುವುದನ್ನು ತೀರ್ವ ಹಾಗೂ ಉಗ್ರವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ಬಸವ ತತ್ವ ಚಿಂತಕ ಡಿ.ಷಬ್ರೀನ ಮಹಮ್ಮದ್ ಅಲಿ, ಮಾತನಾಡಿ, 12 ನೇ ಶತಮಾನದ ಅನುಭವ ಮಂಟಪದಲ್ಲಿ ಶರಣರ ಹಾಗೂ ಬಸವ ತತ್ವಗಳು ಮಾನವರ ಹಿತಕ್ಕಾಗಿವೆ. ನಮ್ಮಲ್ಲಿರುವ ಎಲ್ಲಾ ಮೌಢ್ಯತೆಗಳನ್ನು ತೊರೆದರೆ ನಮ್ಮ ಮನಸ್ಸು ಶುದ್ಧವಾಗುತ್ತದೆ ಎಂದು ಹೇಳಿದರು.

ನೈಸರ್ಗಿಕ ಕೃಷಿ ತಜ್ಞ ಎಚ್.ವಿ. ಸಜ್ಜನ್ ಮಾತನಾಡಿ, ರೈತರು ಅನ್ನದ ಜೊತೆಗೆ ಉಸಿರು ನೀಡುತ್ತಾರೆ, ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಸಿಗುತ್ತಿಲ್ಲ, ರೈತರು ಹೀನಾಯ ಸ್ಥಿತಿ ಅನುಭವಿಸುತ್ತಿದ್ದಾರೆ. ಕೂಡಲೇ ಸರ್ಕಾರಗಳು ರೈತರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಿ ಎಂದು ಹೇಳಿದರು.

ಉತ್ತಂಗಿಯ ಸೋಮಶಂಕರ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿದರು.

ಈ ಸಂದರ್ಭ ಹೊಳಲ್ಕೆರೆ, ತಿಪ್ಪೇರುದ್ರ ಮಹಾಸ್ವಾಮಿಗಳು, ಚಿತ್ರದುರ್ಗದ ಸಿದ್ದಲಿಂಗ ಮಹಾಸ್ವಾಮಿಗಳು, ಕಲ್ಕೆರೆ ಪೂಣಾನಂದ ಮಹಾಸ್ವಾಮಿಗಳು ಬೇವಿನಹಳ್ಳಿ ಕೆಂಚನಗೌಡ, ಬಸವ ಭಜನಾ ಸಂಘ, ಗೆಳೆಯರ ಬಳಗದವರು, ಗಂಗಾವತಿಯ ಕಲಾ ತಂಡ ಹಾಗೂ ಭಕ್ತಾಧಿಗಳು ಹಾಜರಿದ್ದರು.

Share this article