ಹೊರಟ್ಟಿ ದಂಪತಿ ಈ ಭಾಗದ ಜ್ಯೋತಿಬಾ ಫುಲೆ: ಡಾ.ಎ.ಎಚ್. ಬರಗಿ

KannadaprabhaNewsNetwork |  
Published : May 17, 2026, 02:45 AM IST
ಪೊಟೋ ಮೇ.16ಎಂಡಿಎಲ್ 1. ಡಾ.ಎ.ಎಚ್.ಬರಗಿ ಅವರನ್ನು ಯಡಹಳ್ಳಿಯ ಸರ್ಕಾರಿ ಪ್ರಥಮ ಧರ್ಜೆ ಕಾಲೇಜಿನಲ್ಲಿ ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿಯವರು ತಾಲೂಕಿನ ಸುತ್ತಮುತ್ತಲಿನ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಸ್ವಂತ ಊರು ಯಡಹಳ್ಳಿಯಲ್ಲಿ ಕೆಪಿಎಸ್ ಸಂಸ್ಥೆ ಸ್ಥಾಪಿಸಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆರಂಭಿಸಿ ಈ ಭಾಗದ ಹೆಣ್ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿದ್ದಾರೆ ಎಂದು ಮುಧೋಳ ಆರ್.ಎಂ.ಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಇತಿಹಾಸ ವಿಷಯದ ಉಪನ್ಯಾಸಕ ಡಾ.ಎ.ಎಚ್. ಬರಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಧೋಳ

ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿಯವರು ತಾಲೂಕಿನ ಸುತ್ತಮುತ್ತಲಿನ ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಸ್ವಂತ ಊರು ಯಡಹಳ್ಳಿಯಲ್ಲಿ ಕೆಪಿಎಸ್ ಸಂಸ್ಥೆ ಸ್ಥಾಪಿಸಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಆರಂಭಿಸಿ ಈ ಭಾಗದ ಹೆಣ್ಮಕ್ಕಳ ಶಿಕ್ಷಣಕ್ಕೆ ಅನುಕೂಲ ಕಲ್ಪಿಸಿದ್ದಾರೆ ಎಂದು ಮುಧೋಳ ಆರ್.ಎಂ.ಜಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಇತಿಹಾಸ ವಿಷಯದ ಉಪನ್ಯಾಸಕ ಡಾ.ಎ.ಎಚ್. ಬರಗಿ ಹೇಳಿದರು.

ತಾಲೂಕಿನ ಯಡಹಳ್ಳಿ ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡಾ, ಎನ್.ಎಸ್.ಎಸ್, ರೆಡ್‌ಕ್ರಾಸ್, ಪ್ಲೆಸ್ಮೆಂಟ್, ರೆಂಜರ್ಸ್ ಹಾಗೂ ಇತರೆ ಘಟಕಗಳ ವಾರ್ಷಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಪ್ರಾಚಾರ್ಯ ರವಿ ಕಟ್ಟಿಮನಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಸವರಾಜ ಹೊರಟ್ಟಿ ದಂಪತಿ ತನು, ಮನ, ಧನವನ್ನು ಈ ಸಂಸ್ಥೆಯ ಕಟ್ಟಲು ಧಾರೆ ಎರೆದಿದ್ದಾರೆ. ಹೆಣ್ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಹುಟ್ಟೂರು ಯಡಹಳ್ಳಿ ಗ್ರಾಮದಲ್ಲಿ ಸರ್ಕಾರಿ ಮಹಿಳಾ ಪದವಿ ಕಾಲೇಜು ಆರಂಭಿಸಿದ್ದಾರೆ ಎಂದರು.

ಪ್ರೌಢವಿಭಾಗದ ಉಪಪ್ರಾಚಾರ್ಯ ವಿಜಯಲಕ್ಷ್ಮೀ ಹಸರಡ್ಡಿ ಮಾತನಾಡಿ, ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಿ ಎಂದರು.

ಪ್ರಾಥಮಿಕ ವಿಭಾಗದ ಮುಖ್ಯಸ್ಥ ವೀರಣ್ಣ ಕೊಡಣ್ಣವರ ಸಾಂದರ್ಭಿಕವಾಗಿ ಮಾತನಾಡಿದರು. ಯಡಹಳ್ಳಿ ಅಡವೇಶ್ವರ ಮಠದ ಚಂದ್ರಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ವಿದ್ಯಾರ್ಥಿನಿಯರು ಶ್ರದ್ಧೆ ಮತ್ತು ಭಕ್ತಿಯಿಂದ ಅಭ್ಯಾಸ ಮಾಡಿದರೆ ಉತ್ತಮ ಭವಿಷ್ಯವಿದೆ ಎಂದು ಹೇಳಿದರು.

ಸಿಬ್ಬಂದಿ ಕಾರ್ಯದರ್ಶಿ ಸವಿತಾ ಹಲಸಿಗಿ, ಸಾಂಸ್ಕೃತಿಕ ಸಂಯೋಜಕಿ ಜಾನಕಿ ಕೊಳಚಿ, ಪ್ಲೇಸ್ಮೆಂಟ್ ಸೆಲ್ ಸಂಯೋಜಕಿ ಸವಿತಾ ಎಸ್.ಆರ್, ಅತಿಥಿ ಉಪನ್ಯಾಸಕರ ಸಂಘದ ಸಂಯೋಜಕ ಡಾ. ರಮೇಶ, ಐಕ್ಯೂಎಸಿ ಸಂಯೋಜಕ ಪ್ರಶಾಂತ, ವಿದ್ಯಾರ್ಥಿ ಕಲ್ಯಾಣ ಘಟಕದ ಸಂಯೋಜಕ ಸುರೇಶ ಪಟೇಲ್, ರೆಡ್ ಕ್ರಾಸ್ ಸಂಯೋಜಕ ಉದಯ್ ಡಿ.ಎಂ, ಅಧೀಕ್ಷಕಿ ಜಯಶ್ರೀ, ಗ್ರಂಥಪಾಲಕ ಸಂಜು ಕುಂಬಾರ, ಎನ್ಎಸ್ಎಸ್ ಸಂಯೋಜಕಿ ಪವಿತ್ರ ಬಿ.ಸಿ, ರೇಂಜರ್ ಸಂಯೋಜಕಿ ಡಾ.ಅಶ್ವಿನಿ ಶಿಂಧೆ ಹಾಗೂ ಸಿಡಿಸಿ ಸದಸ್ಯರಾದ ವಸಂತ್ ಹೊರಟ್ಟಿ, ಸುರೇಶ ಕೋಲೂರ, ಮಲ್ಲಪ್ಪ ಕೆಂಪಲಿಂಗನ್ನವರ, ಹನುಮಂತ ಉದುಪುಡಿ, ಕೃಷ್ಣ ಪಾಟೀಲ, ಶ್ರೀನಿವಾಸ ದೀಪಕ ಪಾಟೀಲ, ಯಲ್ಲಪ್ಪ ಡೊಳ್ಳಿನ, ಅಶೋಕ ಲಕ್ಷಾಣಿ, ಯಲ್ಲಪ್ಪ ಬಾರ್ಕಿ, ಮಲ್ಲಪ್ಪ ನೀರೂಗಿ, ತುಂಗಾಬಾಯಿ ಪಾಟೀಲ ಇತರರು ವೇದಿಕೆ ಮೇಲಿದ್ದರು.

ಸುಶ್ಮಿತಾ ಸ್ವಾಗತಿಸಿದರು, ಪ್ರಶಾಂತ್ ವರದಿ ವಾಚನ ಮಾಡಿದರು. ಸುಶ್ಮಿತಾ ಜಾಧವ ಪ್ರಶಸ್ತಿ ಕಾರ್ಯಕ್ರಮ ನಡೆಸಿಕೊಟ್ಟರು. ಲಕ್ಷ್ಮಿ ಅಂಬಿ ವಂದಿಸಿದರು. ಸುನಿತಾ ನಿರೂಪಿಸಿದರು. ಡಾ.ಎ.ಎಚ್.ಬರಗಿ ಹಾಘೂ ಅತಿಥಿಗಳು, ಪೂಜ್ಯರನ್ನು ಸನ್ಮಾನಿಸಲಾಯಿತು.

ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಭಾಗದ ಸುತ್ತಮುತ್ತಲಿನ ಹೆಣ್ಣು ಮಕ್ಕಳಿಗಾಗಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆರಂಬಿಸುವ ಮೂಲಕ ಬಸವರಾಜ ಹೊರಟ್ಟಿ ದಂಪತಿ ಈ ಭಾಗದ ಜ್ಯೋತಿಬಾ ಫುಲೆಯಂತೆ ಶಿಕ್ಷಣ ಕ್ರಾಂತಿ ಮಾಡಿದ್ದಾರೆ.

- ಡಾ.ಎ.ಎಚ್. ಬರಗಿ ಉಪನ್ಯಾಸಕರು ಮುಧೋಳ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಾಂಗ್ರೆಸ್ಸಿಗರಂತೆ ಮೋದಿ ಚಿನ್ನದ ತುಲಾಭಾರ ಮಾಡಿಸಿಕೊಂಡಿಲ್ಲ
ಐತಿಹಾಸಿಕ ಮಹಾಲಕ್ಷ್ಮೀದೇವಿ ಜಾತ್ರೆ ಯಶಸ್ಸಿಗೆ ಸಿದ್ಧತೆ