ಕನಕದಾಸರ ಮಾನವೀಯ ಮೌಲ್ಯ ಪ್ರಸ್ತುತ

KannadaprabhaNewsNetwork |  
Published : Nov 28, 2026, 01:00 AM IST
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಡಾ. ಎಮ್,ಡಿ, ಒಕ್ಕುಂದ ಮಾತನಾಡಿದರು.   | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯದ ನಂತರ ಬಂದಿರುವ ದಾಸ ಸಾಹಿತ್ಯವು ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿದೆ.

ಅಳ್ನಾವರ:

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಮಾಜ ಸುಧಾರಕರಾದ ಕನಕದಾಸರ ಜಯಂತಿ ಅಂಗವಾಗಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಎಂ.ಡಿ. ಒಕ್ಕುಂದ ಮಾತನಾಡಿ, "ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಚನ ಸಾಹಿತ್ಯದ ನಂತರ ಬಂದಿರುವ ದಾಸ ಸಾಹಿತ್ಯವು ಜನಸಾಮಾನ್ಯರ ನಿತ್ಯ ಬದುಕಿನಲ್ಲಿ ಹಾಸುಹೊಕ್ಕಾಗಿದೆ. ಇಂದಿಗೂ ಜನರ ಬಾಯಲ್ಲಿ ದಾಸವಾಣಿಗಳು ಪ್ರಚಲಿತದಲ್ಲಿವೆ. ಅದರಲ್ಲೂ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಜಾತಿ ಪದ್ಧತಿ ಮತ್ತು ಅಸಮಾನತೆ ಹೋಗಲಾಡಿಸಲು ಶ್ರಮಿಸಿದರು. ''''ಕುಲ ಕುಲವೆಂದು ಹೊಡೆದಾಡದಿರಿ'''' ಎಂಬ ಅವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ " ಎಂದರು.

"ಕನಕದಾಸರು ಕೇವಲ ಭಕ್ತರಷ್ಟೇ ಅಲ್ಲ, ಶ್ರೇಷ್ಠ ದಾರ್ಶನಿಕರು ಮತ್ತು ಸಮಾಜ ಸುಧಾರಕರಾಗಿದ್ದರು. ವಿದ್ಯಾರ್ಥಿಗಳು ಅವರ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಕನಕದಾಸರ ಸರಳತೆ ಹಾಗೂ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು " ಎಂದು ಕರೆ ನೀಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಐ.ಬಿ. ಸಾತಿಹಾಳ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ವೇಳೆ ಡಾ. ಪರ್ವೀನ್ ಶೇಖ, ಡಾ. ಸುರೇಶ್ ದೊಡ್ಡಮನಿ, ದೇವೇಂದ್ರ ತಳವಾರ, ಡಾ. ವಿನಯಾ ನಾಯಕ್, ರಜಾಕ ಸೋನೆಖಾನ, ಶಿವಾನಂದ ಹರಿಜನ ಮತ್ತಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸ್ವಯಂ ರಕ್ಷಣೆಗೆ ಕರಾಟೆ ಅತ್ಯವಶ್ಯ: ಶಾಸಕ ದಿನಕರ ಶೆಟ್ಟಿ
ಕನಕದಾಸರು ನಾಡು ಕಂಡ ಅಪರೂಪದ ಸಂತ