ಸಮಾಜದಲ್ಲಿ ಜಾತಿಯತೆ, ಮೌಢ್ಯತೆ, ಕಂದಾಚಾರ, ಅಂಧಶ್ರದ್ಧೆ, ಶೋಷಣೆ, ಅನೀತಿ, ಅಧರ್ಮ, ಅನ್ಯಾಯ ಮುಂತಾದ ಸಾಮಾಜಿಕ ರೋಗಗಳಿಗೆ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ನೀಡಿರುವ ಸಂದೇಶ ಔಷಧದಂತೆ ಕಾರ್ಯ ಮಾಡುತ್ತದೆ
ಶಿರಹಟ್ಟಿ: ಜಾತಿ ವ್ಯವಸ್ಥೆ ಹೋಗಲಾಡಿಸಿ, ಸಮಾನತೆ ಸಮಾಜ ನಿರ್ಮಾಣಕ್ಕೆ ದಾಸಶ್ರೇಷ್ಠ ಕನಕದಾಸರ ಕೀರ್ತನೆಗಳು ದಾರಿದೀಪವಾಗಿವೆ. ನಕದಾಸರು ಈ ನಾಡು ಕಂಡ ಅಪರೂಪದ ಸಂತರು ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ಕರೆ ನೀಡಿದರು.
ಶುಕ್ರವಾರ ಮೇಗೇರಿ ಓಣಿಯ ಕನಕದಾಸ ವೃತ್ತದಿಂದ ನಡೆದ ಭವ್ಯ ಮೆರವಣಿಗೆ ನಂತರ ತಹಸೀಲ್ದಾರ್ ಕಾರ್ಯಾಲಯದ ಆವರಣದಲ್ಲಿ ನಡೆದ ಕನಕದಾಸ ಜಯಂತಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕುಲಕುಲ ಕುಲವೆಂದು ಸಮಾಜದಲ್ಲಿ ಜನಸಾಮಾನ್ಯರು ಬಡಿದಾಡುತ್ತಿರುವ ಸಂದರ್ಭದಲ್ಲಿ ಜಾತಿರಹಿತ ಸಮಾಜ ನಿರ್ಮಾಣ ಕನಸು ಕಂಡು ಅದಕ್ಕೆ ಪೂರಕವಾಗಿ ಸಮಾಜಕ್ಕೆ ತಮ್ಮ ಕೀರ್ತನೆಗಳ ಮೂಲಕ ಕುಲದ ನೆಲೆ ಹೇಳಿದರು ಎಂದರು.ಸಮಾಜದಲ್ಲಿ ಜಾತಿಯತೆ, ಮೌಢ್ಯತೆ, ಕಂದಾಚಾರ, ಅಂಧಶ್ರದ್ಧೆ, ಶೋಷಣೆ, ಅನೀತಿ, ಅಧರ್ಮ, ಅನ್ಯಾಯ ಮುಂತಾದ ಸಾಮಾಜಿಕ ರೋಗಗಳಿಗೆ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ನೀಡಿರುವ ಸಂದೇಶ ಔಷಧದಂತೆ ಕಾರ್ಯ ಮಾಡುತ್ತದೆ. ಇವರ ಸಂದೇಶಗಳನ್ನು ವಿಶ್ವಕ್ಕೆ ಪರಿಚಯಿಸಬೇಕು. ಜನಮಾನಸಕ್ಕೆ ಸಾಹಿತ್ಯದ ಸವಿ ಉಣಬಡಿಸಿದ ಕ ಎಂದು ಬಣ್ಣಿಸಿದರು.
ಎಚ್.ಡಿ. ಮಾಗಡಿ, ಮಂಜುನಾಥ ಘಂಟಿ ಮಾತನಾಡಿ, ಮೂಢನಂಬಿಕೆ, ಮೌಢ್ಯತೆಗಳನ್ನು ತಮ್ಮ ದಾಸ ಸಾಹಿತ್ಯದ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿ ಅಳಿಸಿಹಾಕುವಲ್ಲಿ ಶ್ರೇಷ್ಠತೆ ಮೆರೆದ ಹಾಗೂ ಆಧ್ಯಾತ್ಮಿಕ ಅನುಭೂತಿ ನೀಡಿದ ಭಕ್ತ ಕನಕದಾಸರು ಜನರ ಜನಮಾನಸದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಶ್ರೀಮಂತಿಕೆಯನ್ನು ತ್ಯಜಿಸಿ ಮನುಕುಲದ ಉದ್ಧಾರಕ್ಕೆ ಶ್ರಮಿಸಿದ ಧೀಮಂತ ವ್ಯಕ್ತಿ ಕನಕದಾಸರ ತತ್ವಾದರ್ಶಗಳು ಎಂದಿಗೂ ಸಾರ್ವಕಾಲಿಕ ಎಂದರು.ಮಹೇಶ ಹಾರೂಗೇರಿ ಉಪನ್ಯಾಸ ನೀಡಿದರು. ತಹಸೀಲ್ದಾರ್ ಕೆ. ರಾಘವೇಂದ್ರ ರಾವು, ವೀರಯ್ಯ ಮಠಪತಿ, ಕೃಷಿ ಇಲಾಖೆಯ ಶಿವಕುಮಾರ ಕಾಶಪ್ಪನವರ, ತಾಪಂ ಇಒ ರಾಮಣ್ಣ ದೊಡ್ಡಮನಿ, ಪಿಎಸ್ಐ ಈರಪ್ಪ ರಿತ್ತಿ, ಬಿಇಒ ಶಿವರಾಜ ಶಿಮಿಕೇರಿ, ಪಪಂ ಮುಖ್ಯಾಧಿಕಾರಿ ಎನ್.ಎಂ. ಹಾದಿಮನಿ, ನಾಗರಾಜ್ ಲಕ್ಕುಂಡಿ, ಜಾನು ಲಮಾಣಿ, ಸಂದೀಪ ಕಪ್ಪತ್ತನವರ, ಅಜ್ಜುಗೌಡ್ರ ಪಾಟೀಲ, ಶಿವನಗೌಡ್ರ ಪಾಟೀಲ, ರಾಮಣ್ಣ ಕಂಬಳಿ, ಫಕ್ಕಿರೇಶ ರಟ್ಟಿಹಳ್ಳಿ, ಸಂತೋಷ ಕುರಿ, ಎಂ.ಕೆ. ಲಮಾಣಿ, ಹೇಮಂತ ಕೆಂಗೊಂಡ, ಸೋಮನಗೌಡ್ರ ಮರಿಗೌಡ್ರ, ಬಸವರಾಜ ತುಳಿ, ಗೂಳಪ್ಪ ಕರಿಗಾರ, ಎನ್.ಎನ್. ಸಾವಿರಕುರಿ ಇದ್ದರು.