ಹಾವೇರಿ: ಹಿಂದಿನಿಂದಲೂ ಸತ್ಯ ಶುದ್ಧ ಕಾಯಕ ನಿಷ್ಠೆ, ಜಂಗಮ ಪ್ರೇಮಕ್ಕೆ ಬಣಜಿಗ ಸಮಾಜದವರು ಆದರ್ಶ ಉದಾಹರಣೆಯಾಗಿದ್ದಾರೆ ಎಂದು ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.
ಈ ಸಮಾಜದ ಅನೇಕ ಮಹಾನ್ ವ್ಯಕ್ತಿಗಳು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡಿ ಸ್ಮರಣೀಯರಾಗಿರುತ್ತಾರೆ. ಬಣಜಿಗ ಸಮುದಾಯವು ಬಸವಣ್ಣನವರ ಹಾಗೂ ಶಿವಶರಣರ ಆಚಾರ, ವಿಚಾರ, ತತ್ವಗಳ ಪಾಲಕರಾಗಿ ಕಾಯಕ ಮತ್ತು ದಾಸೋಹ ಸೇವೆಯನ್ನು ಅಂದಿನಿಂದಲೂ ಮುಂದುವರೆಸಿಕೊಂಡು ಮಾದರಿಯ ಸೇವೆಯನ್ನು ನೀಡುತ್ತಾ ಬಂದಿದ್ದಾರೆ. ಪ್ರತಿಭಾನ್ವಿತ ವಿದ್ಯಾರ್ಥಿ ಸಮೂಹವನ್ನು ಗುರುತಿಸಿ ಅವರನ್ನು ಪುರಸ್ಕರಿಸಿ ಗೌರವಿಸುವ ಕಾರ್ಯ ಶ್ಲಾಘನೀಯ ಎಂದರು.
ಉಪಾಧ್ಯಕ್ಷ ಕೆ.ಸಿ. ಪಾವಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಧ್ಯೇಯೋದ್ದೇಶ ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ತಿಳಿಸಿ, ನಮ್ಮ ಧರ್ಮದ ಆಚರಣೆಗಳು ನಶಿಸುತ್ತಿರುವ ಈ ಕಾಲಘಟ್ಟದಲ್ಲಿ ಅವುಗಳ ಪುನರ್ ಸ್ಥಾಪನೆ ಅನಿವಾರ್ಯವಾಗಿದೆ ಎಂದರು.ರಾಣಿಬೆನ್ನೂರು ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಜಿ.ವಿ. ಕೋರಿ ಉಪನ್ಯಾಸ ನೀಡಿ, ನಮ್ಮ ಸಮಾಜದ ಮಹನೀಯರು ನೀಡಿದ ಶ್ರೇಷ್ಠ ಕೊಡುಗೆಗಳನ್ನು ಇಂದಿನ ಯುವಜನಾಂಗಕ್ಕೆ ತಿಳಿಸುವ, ಅದರಂತೆ ನಡೆಯುವ ಮಾರ್ಗದರ್ಶನಗಳನ್ನು ಅವರಿಗೆ ನೀಡುವ ಮಹತ್ಕಾರ್ಯ ಆಗಬೇಕಿದೆ ಎಂದರು.
ಬಸವಾದಿ ಶಿವಶರಣರ ತತ್ವಗಳು ಅತ್ಯಮೂಲ್ಯವಾಗಿದ್ದು ಅವುಗಳನ್ನು ಜನಮಾನಸಕ್ಕೆ ಬಿತ್ತುವ ನಿಟ್ಟಿನಲ್ಲಿ ಹಾವೇರಿ ನಗರದಲ್ಲಿ ಬಸವ ಧ್ಯಾನ ಮಂದಿರವನ್ನು ನಿರ್ಮಿಸುವುದು ಸರ್ವರ ಮಹದಾಸೆಯಿದ್ದು ಅದಕ್ಕಾಗಿ ಎಲ್ಲರ ಸಹಕಾರ ಅವಶ್ಯಕತೆ ಎಂದರು.
ಮಹಿಳಾ ಘಟಕಕ್ಕೆ ಸಲಹಾ ಸಮಿತಿ ಸದಸ್ಯರನ್ನಾಗಿ ಮೀನಾಕ್ಷಿ ಮಾಗಾವಿ, ಗಿರಿಜಕ್ಕ ಯಳವತ್ತಿ, ಸುಮಾ ಹೇರೂರು, ರೇಖಾ ಮಾಗನೂರ, ಸ್ಮಿತಾ ಕುರುಬಗೊಂಡ ಶೆಟ್ಟರ, ಅವರನ್ನು ಗೌರವಾಧ್ಯಕ್ಷರಾಗಿ ವಿಮಲಾ ವರ್ತೂರ, ಅಧ್ಯಕ್ಷರಾಗಿ ವಿಮಲ್ ಹಿಂಚಿಗೇರಿ, ಉಪಾಧ್ಯಕ್ಷರಾಗಿ ಮಮತಾ ಬಾಲೆಹೊಸೂರ, ಸುಧಾ ಆನೂರಶೆಟ್ಟರ್, ಕಾರ್ಯದರ್ಶಿಯಾಗಿ ರುದ್ರಾಕ್ಷಿ ಬೆಂಬಳಗಿ , ಸಹ ಕಾರ್ಯದರ್ಶಿಯಾಗಿ ಅನುಪಮಾ ವಾಲಿಶೆಟ್ಟರ್, ಅನ್ನಪೂರ್ಣ ಹತ್ತಿ ಅವರನ್ನು ನೇಮಕಗೊಳಿಸಲಾಯಿತು.ಕಾರ್ಯಕ್ರಮದಲ್ಲಿ ಗಿರೀಶ್ ಶೆಟ್ಟರ್, ಶಿವಣ್ಣ ಶೆಟ್ಟರ್, ಶಿವಲಿಂಗಪ್ಪ ಗುಂಜಟ್ಟಿ, ಪ್ರಭು ಬೆನ್ನೂರ, ದಯಾನಂದ ಯಡ್ರಾಮಿ, ನಿರಂಜನ ತಾಂಡೂರ್, ವಿ.ಜಿ. ಎಳಗೇರಿ, ವಿಭೂತಿ, ಕುಮಾರ್ ಹತ್ತಿ, ಸಂತೋಷ್ ಮಾಗಾವಿ, ಮಂತಣ್ಣ ಮಾಸೂರ್ ಮಹೇಶ್ ಚಿನ್ನಿಕಟ್ಟಿ, ಸಂತೋಷ್ ಮಾಸೂರ, ರಾಜಣ್ಣ ಮಾಗನೂರ, ಚಂದ್ರಶೇಖರ್ ತುರಕಾಣಿ, ಬಸವರಾಜ ಯಳವತ್ತಿ ಗಂಗಾಧರ್ ಮಳಗಿ, ವಿಜಯ ಕುಮಾರ ಕೂಡ್ಲಪ್ಪನವರ ಪ್ರಕಾಶ ಹಂದ್ರಾಳ, ನಾಗರಾಜ್ ವಿಭೂತಿ, ಬಸವರಾಜ ಬೆಲ್ಲದ, ಲೀಲಾವತಿ ಮಾಗಾವಿ, ಲಲಿತಕ್ಕ ಹೊರಡಿ ಅನೇಕರು ಭಾಗವಹಿಸಿದ್ದರು.