ಕನಕದಾಸರ ಆದರ್ಶಗಳು ಸಾರ್ವಕಾಲಿಕ: ಗಾಲಿ ಜನಾರ್ದನ ರೆಡ್ಡಿ

KannadaprabhaNewsNetwork |  
Published : Nov 28, 2026, 02:15 AM IST
ಗಂಗಾವತಿ ನಗರದ ಶ್ರೀ ಕನಕದಾಸರ ವೃತ್ತದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಭಕ್ತ ಕನಕದಾಸರ ಜಯಂತಿ ಸಂದರ್ಭದಲ್ಲಿ ಪುತ್ಥಳಿಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಪುಷ್ಪಗುಚ್ಛ ಸಮರ್ಪಿಸಿದರು. | Kannada Prabha

ಸಾರಾಂಶ

ಗಂಗಾವತಿ ನಗರದ ಶ್ರೀ ಕನಕದಾಸರ ವೃತ್ತದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಭಕ್ತ ಕನಕದಾಸರ ಜಯಂತಿಯಲ್ಲಿ ಪುತ್ಥಳಿಗೆ ಶಾಸಕ ಗಾಲಿ ಜನಾರ್ದನ ರೆಡ್ಡಿ ಪುಷ್ಪಗುಚ್ಛ ಸಮರ್ಪಿಸಿದರು.

ಗಂಗಾವತಿ: ಕನಕದಾಸರ ಆದರ್ಶಗಳು, ಪದ-ಪದ್ಯಗಳು ಸರ್ವಕಾಲಿಕವಾದದ್ದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

ನಗರದ ಶ್ರೀ ಕನಕದಾಸರ ವೃತ್ತದಲ್ಲಿ ತಾಲೂಕು ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಭಕ್ತ ಕನಕದಾಸರ ಜಯಂತಿ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಮಹಾನ್ ಸಂತಕವಿ, ದಾರ್ಶನಿಕ ಹಾಗೂ ಸಮಾಜ ಸುಧಾರಕರಾದ ಶ್ರೀ ಭಕ್ತ ಕನಕದಾಸರು ತಮ್ಮ ಕೀರ್ತನೆಗಳು, ತತ್ವಪದಗಳು ಹಾಗೂ ಸಾಹಿತ್ಯದ ಮೂಲಕ ಸಮಾಜಕ್ಕೆ ಸಮಾನತೆ, ಮಾನವೀಯತೆ, ಭಕ್ತಿ ಮತ್ತು ಸಾಮಾಜಿಕ ಸಾಮರಸ್ಯದ ಮಹತ್ವವನ್ನು ಸಾರಿದ್ದಾರೆ. ಜಾತಿ, ಮತ, ಪಂಥಗಳ ಭೇದ-ಭಾವವನ್ನು ಮೀರಿ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿದ ಕನಕದಾಸರ ಬದುಕು ಹಾಗೂ ಚಿಂತನೆಗಳು ಇಂದಿಗೂ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಸ್ಮರಿಸಿದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ತಾವು ಈ ಹಿಂದೆ ಶಾಸಕರಾಗಿದ್ದ ಸಂದರ್ಭದಲ್ಲಿ ಕನಕದಾಸ ವೃತ್ತ ನವೀಕರಣದ ಜತೆಗೆ ಪುತ್ಥಳಿ ಅನಾವರಣಗೊಳಿಸಲಾಗಿದೆ. ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಅವರು ಕನಕದಾಸರ ಜಯಂತಿ ಜತೆಗೆ ರಜೆ ಘೋಷಣೆ ಮಾಡಿದ್ದರು ಎಂದು ಹೇಳಿದರು.

ಮಾಜಿ ಸಚಿವ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ಸಂಸದ ಶಿವರಾಮಗೌಡ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ವಿರೂಪಾಕ್ಷಪ್ಪ ಸಿಂಗನಾಳ ಮಾತನಾಡಿದರು. ರಾಜವಂಶಸ್ಥೆ ಲಲಿತರಾಣಿ ಶ್ರೀರಂಗದೇವರಾಯಲು, ಮನೋಹರಗೌಡ, ಯಮನಪ್ಪ ವಿಠಲಾಪುರ, ಡಿ.ಕೆ. ಆಗೋಲಿ, ಉಪನ್ಯಾಸಕ ಚಂದ್ರು ಹಿರೂರು, ನವಲಿ ಯಮನಪ್ಪ, ಎನ್.ಎಚ್. ಪೂಜಾರ್, ಡಿವೈಎಸ್ಪಿ ನ್ಯಾಮಗೌಡರ್, ಪ್ರಕಾಶ ಯಾತನೂರು, ಜೋಗದ ನಾರಾಯಣಪ್ಪನಾಯಕ, ನಗರಸಭೆ ಮಾಜಿ ಅಧ್ಯಕ್ಷ ಕೆ. ವೆಂಕಟೇಶ, ನಾಗೇಶ ಇದ್ದರು. ಕಾರ್ಯಕ್ರಮದ ಹಾಲುಮತ ಸಮಾಜದ ಗುರುಗಳಾದ ಸಿದ್ದರಾಮಯ್ಯ ತಾತಾ ಹಾಗೂ ಸಿದ್ದಯ್ಯ ತಾತಾ ಸಾನ್ನಿಧ್ಯ ವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಕನಕದಾಸರು
ಸಮಾಜದ ಅಂಕುಡೊಂಕು ತಿದ್ದಿದ ಕನಕದಾಸರು: ಚಂದ್ರಶೇಖರ ಗಾಳಿ