ಕನ್ನಡಪ್ರಭವಾರ್ತೆ ವಿರಾಜಪೇಟೆ
ಶೋಷಿತ ದೀನ ದಲಿತರ ಆಶಾಕಿರಣರಾಗಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರು ತತ್ವಜ್ಞಾನಿಗಳು ಸಂವಿಧಾನದ ಶಿಲ್ಪಿಗಳ ಆದರ್ಶಗಳು ಸಮಾಜದ ಪ್ರತಿಯೊಬ್ಬರು ಪರಿಪಾಲನೆ ಮಾಡುವಂತಾಗಬೇಕು ಎಂದು ವಿರಾಜಪೇಟೆ ತಾಲೂಕು ತಹಸೀಲ್ದಾರ್ ಎಚ್.ಎಸ್. ರಾಮಚಂದ್ರ ಅವರು ಹೇಳಿದರು.ಸಮಾಜ ಕಲ್ಯಾಣ ಇಲಾಖೆ ಪೊನ್ನಂಪೇಟೆ, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ತಾಲೂಕು ಆಡಳಿತ ವಿರಾಜಪೇಟೆ ಸಂಯುಕ್ತ ಆಶ್ರಯದಲ್ಲಿ ತಾಲೂಕು ಕಚೇರಿಯ ಸಭಾಂಗಣದಲ್ಲಿ 68 ನೇ ಡಾ. ಬಿ.ಆರ್. ಅಂಬೇಡ್ಕರ್ ಮಹಾಪರಿನಿರ್ವಾಣ ಕಾರ್ಯಕ್ರಮ ನಡೆಯಿತು.
ದೀಪ ಬೆಳಗಿಸಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ರಾಮಚಂದ್ರ ಅವರು ಶೋಷಿತ ಸಮುದಾಯವನ್ನು ಹೋರಾಟದ ಮೂಲಕ ಸಮಾಜದಲ್ಲಿ ಸಮಾನತೆಯಿಂದ ಬದುಕುವ ಮಾರ್ಗವನ್ನು ಕರುಣಿಸಿದರು. ಜಾತಿ, ಮತ, ಪಂಥ, ಧರ್ಮದ ಪರಿಕಲ್ಪನೆ ಪೂರ್ವ ಇತಿಹಾಸದಿಂದ ಬಂದರೂ ಎಲ್ಲ ವರ್ಗ ಒಂದೇ ಎಂದು ಹೋರಾಟದ ಮೂಲಕ ಪ್ರತಿಪಾದಿಸಿದವರು. ಅವರು ದೇಶಕ್ಕೆ ದೇಶ ನೀಡಿರುವ ಕೊಡುಗೆ ಆದರ್ಶಗಳು ಮುಂದಿನ ಪೀಳಿಗೆಗಳು ಅನುಸರಿಸುವಂತಾಗಬೇಕು ಎಂದು ಹೇಳಿದರು.ಕಾರ್ಯಕ್ರಮದ ಮೊದಲಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಪೊನ್ನಂಪೇಟೆ ಸಹಾಯಕ ನಿರ್ದೇಶಕರು ಪ್ರೀತಿ ಚಿಕ್ಕಮಾದಯ್ಯ ಅವರು ಮಾತನಾಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳಿಂದ ಸಮಾಜವು ಪ್ರೇರೇಪಣೆ ಪಡೆದಿದೆ. ಸರಿಸುಮಾರು ಒಂದು ವರ್ಷಗಳ ಕಾಲ ಬೌದ್ಧ ಧರ್ಮವನ್ನು ಅಧ್ಯಯನ ಮಾಡಿದ ನಂತರದಲ್ಲಿ ತಮ್ಮ ಅಸಂಖ್ಯಾತ ಅನುಯಾಯಿಗಳೊಂದಿಗೆ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು. ಸಮಾಜದ ಒಡಕುಗಳಿಗೆ ಸರಿಯಾದ ಮಾರ್ಗದರ್ಶನ ನೀಡಿದ ಮಹಾನ್ ಚಿಂತಕರಾಗಿದ್ದರು ಅವರು ಮಾಡಿರುವ ಸಾಧನೆಗಳು ಪ್ರಸ್ತುತ ಸಮಾಜ ಮತ್ತು ಮುಂಬರುವ ಪೀಳಿಗೆಯು ಸದಾ ಸ್ಮರಿಸುವಂತಾಗಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಉಪ ತಹಸೀಲ್ದಾರ್ ಪ್ರದೀಪ್ ಕುಮಾರ್, ಅರಣ್ಯ ಇಲಾಖೆ ಅಧಿಕಾರಿಗಳು, ಕಂದಾಯ ಪರಿವೀಕ್ಷಕರು, ತಾಲೂಕು ಕಚೇರಿಯ ಸಿಬ್ಬಂದಿ ಮತ್ತು ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿ ಹಾಗು ದಲಿತ ಸಂಘರ್ಷ ಸಮಿತಿ ಸದಸ್ಯರು ಪದಾಧಿಕಾರಿಗಳು ಹಾಜರಿದ್ದರು.