ಧಾರವಾಡ:
ಕರ್ನಾಟಕ ವಿದ್ಯಾವರ್ಧಕ ಸಂಘವು 71ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶಿ ನೆಲಮೂಲದ ಸಾಕಷ್ಟು ಪೌಷ್ಟಿಕಾಂಶಗಳುಳ್ಳ ಹಣ್ಣು-ಹಂಪಲು, ಡೈರಿ ಉತ್ಪನ್ನ ಇತ್ಯಾದಿ ಕೃಷಿ ಉತ್ಪನ್ನಗಳಿವೆ. ಅವುಗಳನ್ನು ಯುವಜನಾಂಗ ಬಳಸಿ ಆರೋಗ್ಯಯುತ ಜೀವನ ಶೈಲಿ ರೂಢಿಸಿಕೊಳ್ಳಬೇಕು. ಇದರಿಂದ ಕೃಷಿಕರಿಗೂ ಉತ್ತೇಜನ ನೀಡಿದಂತಾಗುತ್ತದೆ. ಜತೆಗೆ ಭಾರತೀಯ ಸಂಸ್ಕೃತಿ ಕಾಪಾಡಿದಂತಾಗುತ್ತದೆ. ಈ ನಿಟ್ಟಿನಲ್ಲಿ ಯುವಜನಾಂಗ ಮುಂದಾಗಲು ಮನವಿ ಮಾಡಿದರು.
ಕನ್ನಡವು ಕರ್ನಾಟಕದಲ್ಲಿ ಆಡಳಿತದ ಮತ್ತು ಅನ್ನದ ಭಾಷೆ. ಜಾಗತಿಕರಣ ಪರಿಣಾಮದಿಂದ ಬ್ಯಾಂಕುಗಳಲ್ಲಿ ಕನ್ನಡ ಮಾತನಾಡುವ ಅಧಿಕಾರಿಗಳು ಮತ್ತಿತರ ಸಿಬ್ಬಂದಿಗಳ ಕೊರತೆ ಎದ್ದು ಕಾಣುತ್ತದೆ. ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬ ಕನ್ನಡೇತರ ಅಧಿಕಾರಿಗಳಿಗೆ ಕನ್ನಡ ಭಾಷಾ ತರಬೇತಿ ನೀಡುವಂತಾಗಬೇಕು. ಮತ್ತು ಈ ದಿಸೆಯಲ್ಲಿ ಸರ್ಕಾರದ ನೀತಿ, ಧೋರಣೆಗಳು ಬದಲಾಗಬೇಕಾಗಿದೆ ಎಂದರು.ವೈದ್ಯಕೀಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸುತ್ತಿರುವ ಹುಬ್ಬಳ್ಳಿಯ ವೈದ್ಯ ಡಾ. ಮಹಾಂತೇಶ ತಪಶೆಟ್ಟಿ ಅವರಿಗೆ ಹಾಗೂ ಪರಿಸರ ಕ್ಷೇತ್ರದ ಸೇವೆಗಾಗಿ ಚನ್ನಬಸಪ್ಪ ಹೊಸಮನಿ ಅವರನ್ನು ಇದೇ ಸಂದರ್ಭದಲ್ಲಿ ಪುರಸ್ಕಾರ ಫಲಕ ನೀಡಿ ಗೌರವಿಸಲಾಯಿತು. ಆರಂಭದಲ್ಲಿ ನಿನಾದ ಟ್ರಸ್ಟ್‌ನ ಶಿಲ್ಪಾ ನವಲಿಮಠ ಸುಗಮ ಸಂಗೀತ, ಜಾನಪದ ಸಂಶೋಧನ ಕೇಂದ್ರದ ನಾಗಭೂಷಣ ಹಿರೇಮಠ ಅವರಿಂದ ತತ್ವಪದ ಹಾಗೂ ಶಿರಸಿಯ ಡಾ. ಗುರುಪ್ರಸಾದ ಹೆಗಡೆ ಅವರಿಂದ ಸಾರಂಗಿ ವಾದನ ನಡೆಯಿತು.