-ದಕ್ಷಿಣ ಭಾರತದ ಸದರನ್ ಇಂಡಿಯಾ ಸೈನ್ಸ್ ಫೇರ್ ನಲ್ಲಿ 4ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ
ಕನ್ನಡಪ್ರಭ ವಾರ್ತೆ ಯಾದಗಿರಿ
ರಾಷ್ಟ್ರೀಯ ಮಟ್ಟದ ವಿಜ್ಞಾನ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುವುದು ಗ್ರಾಮೀಣ ಭಾಗದ ಸಂಸ್ಥೆಯ ಮಹತ್ವ ಹೆಚ್ಚಾಗಿದೆ ಎಂದು ಮುಖ್ಯಗುರು ಲಿಂಗಾರೆಡ್ಡಿ ನಾಯಕ ಹೇಳಿದರು.ತಾಲೂಕಿನ ಸೈದಾಪುರ ಪಟ್ಟಣದ ವಿದ್ಯಾವರ್ಧಕ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಈಚೆಗೆ ಪುದುಚೆರಿಯಲ್ಲಿ ನಡೆದ ದಕ್ಷಿಣ ಭಾರತದ ಸದರನ್ ಇಂಡಿಯಾ ಸೈನ್ಸ್ ಫೇರ್ 2025 ಸ್ಪರ್ಧೆಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ, 4ನೇ ಸ್ಥಾನ ಗಳಿಸಿದ ಅಯಾನ್ ಅಲಿ ಮತ್ತು ಮಲ್ಲಪ್ಪ ಚವ್ಹಾಣ ಅವರನ್ನು ಪ್ರೌಢ ಶಾಲಾ ವತಿಯಿಂದ ಸನ್ಮಾನಿಸಿ ಅವರು ಮಾತನಾಡಿದರು.
ಡಯಟ್ ಪ್ರಾಂಶುಪಾಲ ವೃಷಬೇಂದ್ರಯ್ಯ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡುವ ಮೂಲಕ ಜಿಲ್ಲೆಯ ಮಹತ್ವ ಹೆಚ್ಚಾಗಿದೆ ಎಂದರು. ಡಯಟ್ ಹಿರಿಯ ಉಪನ್ಯಾಸಕ ಶೇಖರಪ್ಪ ಮಾತನಾಡಿದರು. ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಗೂಳಪ್ಪ ಎಸ್. ಮಲ್ಹಾರ, ವಿಜ್ಞಾನ ಶಿಕ್ಷಕ ರಾಚಯ್ಯ ಸ್ವಾಮಿ ಬಾಡಿಯಾಳ. ಭೀಮಣ್ಣ ನಾಯಕ, ಸಂಗಾರೆಡ್ಡಿ ಪಾಟೀಲ್, ವೆಂಕಟೇಶ ಸಗರ ಸೇರಿದಂತೆ ಇತರರಿದ್ದರು.
-----31ವೈಡಿಆರ್6:
ಯಾದಗಿರಿ ತಾಲೂಕಿನ ಸೈದಾಪುರ ವಿದ್ಯಾವರ್ಧಕ ಪ್ರೌಢ ಶಾಲಾ ವಿದ್ಯಾರ್ಥಿಗಳು ಪುದುಚೆರಿಯಲ್ಲಿ ನಡೆದ ದಕ್ಷಿಣ ಭಾರತದ ಸದರನ್ ಇಂಡಿಯಾ ಸೈನ್ಸ್ ಫೇರ್ 2025ರಲ್ಲಿ ಭಾಗವಹಿಸಿ 4ನೇ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾಸಲಾಯಿತು.