ಭಾರತದ ಸಂವಿಧಾನ ಇಡೀ ಪ್ರಪಂಚದಲ್ಲೇ ಅತ್ಯಂತ ವಿಶಿಷ್ಟವಾದುದು ಎಂದು ವಕೀಲ ಪಿ.ಒ.ಪ್ರಕಾಶ ತಿಳಿಸಿದರು.
ಗ್ರಾಮದ ಕಲ್ಯಾಣದುರ್ಗ ರಸ್ತೆಯ ಎಸ್ಸಿಕಾಲನಿಯ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘ, ವಿವಿಧ ದಲಿತ ಸಂಘಟನೆಗಳ ವತಿಯಿಂದ ಶುಕ್ರವಾರ ಕೈಗೊಂಡಿದ್ದ ಅಂಬೇಡ್ಕರ್ ದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರದ ಮೆರವಣಿಗೆಯ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು.
ಭಾರತದಲ್ಲಿ ನಮ್ಮೆಲ್ಲರ ಪವಿತ್ರ ಗ್ರಂಥ ಭಾರತದ ಸಂವಿದಾನ ಈ ಸಂವಿದಾನದಲ್ಲಿ ಕಾನೂನು ಮತ್ತು ನಿಯಮಾವಳಿಗಳ ಜತೆಗೆ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಬಹು ವಿವರವಾಗಿ ತಿಳಿಸಿದ್ದಾರೆ.
ನಾವಿಂದು ನಮ್ಮ ಹಕ್ಕುಗಳನ್ನು ಮಾತ್ರ ಕೇಳುತ್ತೇವೆ ಹೊರತು ಕರ್ತವ್ಯಗಳನ್ನು ಪಾಲಿಸುವಲ್ಲಿ ಹಿಂದೇಟು ಹಾಕುತ್ತಿದ್ದೇವೆ ಎಂದರು.
ಅಮೆರಿಕ ಸೇರಿದಂತೆ ವಿದೇಶಗಳಲ್ಲಿ ಅಲ್ಲಿನ ಜನರು ತಮ್ಮ ರಾಷ್ಟದ ಹಿತಾಸಕ್ತಿಯಿಂದ ದೇಶದ ಏಳಿಗೆಗೆ ದುಡಿಯುತ್ತಾರೆ ಆದರೆ ನಮ್ಮಲ್ಲಿ ದೇಶದ ಹಿತದೃಷ್ಟಿಯನ್ನು ಗಮನಿಸುತ್ತಿಲ್ಲ, ಇದು ಸಲ್ಲದು ನಾವೆಲ್ಲರೂ ಕೂಡ ಅಂಬೇಡ್ಕರ್ ಅವರ ಆಶಯದಂತೆ ಸದಾ ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮೂಲಕ ಮುಖ್ಯವಾಹಿನಿಗೆ ಬಂದು ನಮ್ಮ ದೇಶದ ಏಳಿಗೆಗೆ ಶ್ರಮಿಸಬೇಕಿದೆ ಎಂದರು.
ಗ್ರಾಮದ ಎಸ್‌ಸಿ ಕಾಲನಿಯ ಬಳಿ ಸಾರೋಟನ್ನು ವಿವಿಧ ಹೂವುಗಳಿಂದ ಸಿಂಗರಿಸಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಪ್ರತಿಷ್ಠಾಪಿಸಿ ಪೂಜಿಸಿ ನಂತರ ಅಲ್ಲಿನ ಪ್ರತಿಬಾವಂತ ವಿದ್ಯಾರ್ಥಿಗಳನ್ನ ಪುರಸ್ಕರಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳೀಯ ಪೊಲೀಸ್ ಠಾಣಾ ಪಿಎಸ್‌ಐ ಮಾರುತಿ, ಗ್ರಾಪಂ ಮಾಜಿ ಸದಸ್ಯ ಟಿ.ಎಂ.ನಿಜಲಿಂಗಪ್ಪ, ಟ್ರಾಕ್ಟರ್ ತಿಮ್ಮಯ್ಯ, ಗುಂಡುತೋಪು ಚನ್ನಕೇಶವಣ್ಣ, ಗ್ರಾಪಂ ಮಾಜಿ ಸದಸ್ಯ ಪಿ.ಒ.ಪ್ರಕಾಶ, ಓಬಳೇಶ, ತಿಪ್ಪೇರುದ್ರಪ್ಪ, ಅಂಜಿನಪ್ಪ, ಆಂಜನೇಯ, ಮಲ್ಲಿಕಾರ್ಜುನ, ಬಸವರಾಜು, ಬಜ್ಜಪ್ಪ, ಇಂದ್ರಕುಮಾರ, ನಿರ್ಮಲಾ, ಚನ್ನಮಲ್ಲಪ್ಪ, ಲೋಹಿತ್, ಲಕ್ಷಿದೇವಿ, ದುರುಗೇಶ, ಚನ್ನಕೇಶವ, ಪಾಲಾಕ್ಷಿ, ಗ್ರಾಮದ ದಲಿತ ಸಂಘಟನೆಗಳ ಪದಾಧಿಕರಿಗಳು ಗ್ರಾಮಸ್ಥರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.