ಕನ್ನಡಪ್ರಭ ವಾರ್ತೆ ಹನೂರು
ಏ. 26ರಂದು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಇಂಡಿಗನತ್ತ ಗ್ರಾಮದಲ್ಲಿ ಮೆಂದರೆ ಗ್ರಾಮಸ್ಥರ ಮೇಲೆ ನಡೆದ ಹಲ್ಲೆಯಿಂದ ಸಮುದಾಯದ ಜನಾಂಗಕ್ಕೆ ಧಕ್ಕೆ ಉಂಟಾಗಿದೆ ಎಂದು ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ದಯ್ಯ ವಿಷಾಧ ವ್ಯಕ್ತಪಡಿಸಿದರು. ತಾಲೂಕಿನ ಮಲೆ ಮಹದೇಶ್ವರ ಬೆಟ್ಟ ಗ್ರಾಪಂ ವ್ಯಾಪ್ತಿಯ ಮೆಂದರೆ ಗ್ರಾಮಕ್ಕೆ ಸಮುದಾಯದ ಮುಖಂಡರು, ಸಾಹಿತಿಗಳು, ಪ್ರಗತಿಪರ ಚಿಂತಕರು, ಸಮಾಜದ ಕಾರ್ಯಕರ್ತರು ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.ಗ್ರಾಮದಲ್ಲಿ ನಡೆದ ಮತದಾನ ವೇಳೆಯಲ್ಲಿ ಇಂಡಿಗನತ್ತ ಗ್ರಾಮದಲ್ಲಿ ಸಂವಿಧಾನದಲ್ಲಿ ಮತದಾನದ ಹಕ್ಕು ಚಲಾಯಿಸಿದ್ದ ನಿವಾಸಿಗಳಿಗೆ ಮುಳುವಾಗಿ ಪರಿಣಮಿಸಿದೆ. ಯಾರ ತಂಟೆಗೂ ಹೋಗದೆ ನಮ್ಮಿಷ್ಟಕ್ಕೆ ನಾವು ಕೂಲಿನಾಲಿ ಮಾಡಿ ಜೀವನ ನಡೆಸುತ್ತಿದ್ದೇವೆ, ಈ ಘಟನೆಯಿಂದ ಮೆಂದರೆ ಗ್ರಾಮದಲ್ಲಿ ನಿವಾಸಿಗಳು ಜೀವ ಭಯದಿಂದಲೇ ಕ್ಷಣಕ್ಷಣಕ್ಕೂ ಬದುಕುವಂತಾಗಿದೆ. ಹೀಗಾಗಿ ಮತದಾನ ಮಾಡಲು ಹೋಗಿದ್ದ ನಿವಾಸಿಗಳ ಮೇಲೆ ದೈಹಿಕ ಅಲ್ಲೇ ದೌರ್ಜನ ಮಾಡಿರುವುದು ನೋವಿನಿಂದ ಇಲ್ಲಿನ ಜನತೆ ನರಳುವಂತಾಗಿದೆ. ಈ ಕೃತ್ಯ ಎಸಗಿದವರ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸುವ ಬದಲು ಸೋಲಿಗ ಸಮುದಾಯದವರನ್ನೇ ತಪ್ಪಿತಸ್ಥರೆಂದು ಬಿಂಬಿಸುವ ಕೆಲಸ ನಡೆಯುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ರಾಜ್ಯ ಸೋಲಿಗ ಸಮುದಾಯದ ಕಮಿಟಿ ಕಾರ್ಯದರ್ಶಿ ಮುತ್ತಯ್ಯ ಮಾತನಾಡಿ, ಆದಿವಾಸಿಗಳು ಕೂಲಿ ಕಾರ್ಮಿಕರಾಗಿ ಶತಮಾನಗಳಿಂದ ಅರಣ್ಯ ಸಂರಕ್ಷಣೆ ಮಾಡುತ್ತಾ ಕನಿಷ್ಠ ಸೌಕರ್ಯಗಳು ಇಲ್ಲದಿದ್ದರೂ ಸಹ ಕಷ್ಟದ ಜೀವನ ಸಾಗಿಸುತ್ತಿದ್ದಾರೆ. ನಡೆದಿದ್ದ ಘಟನೆಯಿಂದ ಇಲ್ಲಿನ ನಿವಾಸಿಗಳು ಬೇಸತ್ತಿದ್ದಾರೆ ಆದುದರಿಂದ ಬುಡಕಟ್ಟು ಸಮುದಾಯದ ಜನಾಂಗದವರಿಗೆ ರಕ್ಷಣೆಯ ಜೊತೆ ಸೌಲಭ್ಯ ನೀಡಬೇಕಾಗಿದೆ ಎಂದು ತಿಳಿಸಿದರು.ಚಾಮರಾಜನಗರದ ಹಿರಿಯ ರಂಗಕರ್ಮಿ ಹಾಗೂ ಚಿಂತಕ ವೆಂಕಟರಾಜು ಮಾತನಾಡಿ, ಈ ಘಟನೆಯಿಂದ ಸೋಲಿಗ ಸಮುದಾಯದ ಜನಾಂಗಕ್ಕೆ ಹಾಗೂ ಇಂಡಿಗನತ್ತ ಗ್ರಾಮದ ಜನರ ನಡುವೆ ಶಾಂತಿ, ಸೌದಾರ್ಹತೆ ಮೂಡಿಸಲು ಸರ್ಕಾರ ಹಾಗೂ ಜಿಲ್ಲಾಡಳಿತ ಮಾಡಬೇಕಾಗಿದೆ ಎಂದರು. ಸಭೆಯಲ್ಲಿ ಹಿರಿಯ ಪತ್ರಕರ್ತ ಅಬ್ರಹಾಂ ಡಿಸಿಲ್ವ, ಮಲೆ ಮಹದೇಶ್ವರ ಬೆಟ್ಟ ಸೋಲಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ಗಿರಿಯ, ಸಣ್ಣ ಮಾದ, ದೇವ, ಯೂತ್ ಸಮುದಾಯದ ಫೋರಮ್ ಗುಳ್ಯದ ಬೈಲು ಚಂದು, ಸಂಘದ ಕಾರ್ಯಕರ್ತ ಗಿರೀಶ್, ಮಾದಯ್ಯ, ಪಡಗಲ ಸಣ್ಣ , ಶಿವಕುಮಾರ ಹಾಗೂ ಮಹಿಳೆಯರು ಮಕ್ಕಳು ಇದ್ದರು.10ಸಿಎಚ್‌ಎನ್
ಹನೂರು ತಾಲೂಕಿನ ಮಲೆಮಹದೇದ್ವರ ಬೆಟ್ಟ ವ್ಯಾಪ್ತಿಯ ಮೆಂದರೆ ಗ್ರಾಮದ ಸ್ಥಿತಿಗತಿಯ ಬಗ್ಗೆ ತಿಳಿಯಲು ಪ್ರಗತಿಪರ ಚಿಂತಕರು ಭೇಟಿ ನೀಡಿರುವುದು.