ಶಿಕ್ಷಣದ ಆರಂಭಿಕ ಮೆಟ್ಟಿಲು ಕನ್ನಡ ಸ್ಪಷ್ಟ ಓದು, ಬರಹವಾಗಿದೆ: ಕೃಷ್ಣೇಗೌಡ

KannadaprabhaNewsNetwork |  
Published : Dec 26, 2025, 01:45 AM IST
25ಕೆಎಂಎನ್ ಡಿ17 | Kannada Prabha

ಸಾರಾಂಶ

ರಾಜ್ಯದಲ್ಲೇ ಕನ್ನಡವನ್ನು ಹೆಚ್ಚು ಮಾತನಾಡುವ ಜಿಲ್ಲೆ ಮಂಡ್ಯ. ಆದರೂ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅಂಕಗಳಿಕೆ ನಿರಾಸದಾಯಕವಾಗಿದೆ. ಮಕ್ಕಳಿಗೆ ಭಾಷಾಜ್ಞಾನ ಹೆಚ್ಚಿಸಲು ಈ ಕಲಿಕೆ ಹಬ್ಬ ವಿಶೇಷವಾಗಿದೆ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಮೊದಲು ಮಾತೃ ಭಾಷೆ ಕನ್ನಡದಲ್ಲಿ ಸ್ಪಷ್ಟವಾಗಿ ಮಕ್ಕಳು ಓದು, ಬರಹ ಕಲಿತರೆ ಜ್ಞಾನರ್ಜನೆ ಹೆಚ್ಚಲಿದೆ ಎಸ್‌ಡಿಎಂಸಿ ಅಧ್ಯಕ್ಷ ಐಕನಹಳ್ಳಿ ಕೃಷ್ಣೇಗೌಡ ಹೇಳಿದರು.

ಪಟ್ಟಣದ ಕೆಪಿಎಸ್ ಸರ್ಕಾರಿ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಕಲಿಕಾ ಹಬ್ಬದಲ್ಲಿ ಮಾತನಾಡಿ, ರಾಜ್ಯದಲ್ಲೇ ಕನ್ನಡವನ್ನು ಹೆಚ್ಚು ಮಾತನಾಡುವ ಜಿಲ್ಲೆ ಮಂಡ್ಯ. ಆದರೂ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಅಂಕಗಳಿಕೆ ನಿರಾಸದಾಯಕವಾಗಿದೆ. ಮಕ್ಕಳಿಗೆ ಭಾಷಾಜ್ಞಾನ ಹೆಚ್ಚಿಸಲು ಈ ಕಲಿಕೆ ಹಬ್ಬ ವಿಶೇಷವಾಗಿದೆ ಎಂದರು.

ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ ಮಾತನಾಡಿ, ಮಕ್ಕಳಿಗೆ ಅರಂಭಿಕ ಸಂಖ್ಯಾಜ್ಞಾನ ಹಾಗೂ ಬೂನಾದಿ ಸಾಮಾರ್ಥ್ಯ (ಎಫ್‌ಎಲ್‌ಎನ್)ವನ್ನು ಪತ್ತೆಹಚ್ಚಿ ಮಕ್ಕಳಿಗೆ ಕೂಡುವುದು, ಕಳೆಯುವುದು, ದಿನನಿತ್ಯ ಬಳಕೆಯಲ್ಲಿ ಗಣಿತ ಲೆಕ್ಕಾಚಾರವನ್ನು ಸುಲಲಿತವಾಗಿ ಕಲಿಸುವಿಕೆ ಉದ್ದೇಶ ಉತ್ತಮಕರವಾಗಿದೆ ಎಂದರು.

ಸಿಆರ್‌ಪಿ ಆಶಾರಾಣಿ ಕಾರ್ಯಕ್ರಮದ ಉದ್ದೇಶ ತಿಳಿಸಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ವಿನಂತಿಸಿದರು. ಇದೇ ವೇಳೆ ವಿವಿಧ ಮಳಿಗೆಗಳಲ್ಲಿ ಮಕ್ಕಳು ಗಟ್ಟಿಯಾಗಿ ಓದುವಿಕೆ, ಬರೆಯುವಿಕೆ, ಗಣಿತದ ಲೆಕ್ಕಾಚಾರ, ಆಹಾರ ಮೇಳೆ, ಪಾಲಕರೊಂದಿಗೆ ಸೇರಿಕೊಂಡು ಕತೆಕಟ್ಟುವಿಕೆ, ಒಗಟು ಬಿಡಿಸುವಿಕೆ, ರಸಪ್ರಶ್ನೆ, ಆಹಾರಮೇಳದಲ್ಲಿ ಲವಲವಿಕೆಯಿಂದ ಭಾಗವಹಿಸಿ ಸಂಭ್ರಮಿಸಿದರು.

ಮೇಳದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಗಾಂಧೀಜಿ, ಸುಭಾಷ್‌ ಚಂದ್ರ ಬೋಸ್, ಕಾಡು ಮನುಷ್ಯ ಮತ್ತಿತರ ವೇಷಭೂಷಣ ತೊಟ್ಟು ಮಕ್ಕಳು ರಂಜಿಸಿದರು.

ಅಜಿತ್ ಪ್ರೇಮ್‌ ಜೀ ಫೌಂಡೇಷನ್ ಶಿವಕುಮಾರ್, ಪ್ರಾಂಶುಪಾಲ ಸಹದೇವು, ತಾಲೂಕು ದೈಹಿಕ ಪರಿವೀಕ್ಷಕ ಪ್ರಭುಕುಮಾರ್, ಇಸಿಒ ನವೀನ್‌ಕುಮಾರ್, ಪ್ರೌಢಶಾಲಾ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷ ಎಸ್.ಎಂ.ಬಸವರಾಜು, ಎನ್‌ಎಸ್‌ಎಸ್‌ ಯೋಜನಾಧಿಕಾರಿ ಕುಮಾರಸ್ವಾಮಿ, ಭಾರತಿ, ಸುರೇಶ್, ಸತೀಶ್, ಪ್ರಜ್ವಲಾ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಸರ್ಕಸ್‌ ಮಧ್ಯೆ ಇಂದು ಸಿದ್ದು ದೆಹಲಿಗೆ - ನಾಳೆ ಸಿಡಬ್ಲುಸಿ ಸಭೆಯಲ್ಲಿ ಸಿಎಂ ಭಾಗಿ
ಭೂಪರಿವರ್ತನೆ ಇನ್ನು ಅತಿ ಸರಳ