ಗದಗ: ತೋಂಟದ ಡಾ. ಸಿದ್ದಲಿಂಗ ಸ್ವಾಮಿಗಳು ಕಟ್ಟಿದ ಸಂಸ್ಥೆಗಳು ಸಾರ್ವಕಾಲಿಕವಾಗಿವೆ. ಇಂದು ಅವು ಹೆಮ್ಮರವಾಗಿ ಬೆಳೆದು ಸಮಾಜಮುಖಿಯ ಅತ್ಯುನ್ನತ ಕಾಯಕ ಗೈಯುತ್ತಿವೆ ಎಂದು ಜ.ತೋ. ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರಿ ಸಂಘದ ಸಂಸ್ಥಾಪಕ ಅಧ್ಯಕ್ಷ ಪ್ರೊ ಎಸ್.ಎಸ್. ಪಟ್ಟಣಶೆಟ್ಟಿ ಹೇಳಿದರು.
ನಗರದ ಬಸವೇಶ್ವರ ಪ್ರಥಮ ದಜೆ೯ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2014-25ನೇ ಸಾಲಿನ ಶ್ರೀ ಜ.ತೋಂ.ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರಿ ಸಂಘದ 24ನೇ ವಾಷಿ೯ಕ ಸರ್ವ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಶ್ರೀಗಳವರ ಅಮೃತಹಸ್ತದಿಂದ 2021ರಲ್ಲಿ ಗದುಗಿನಲ್ಲಿ ಉದ್ಘಾಟನೆಗೊಂಡಿರುವ ಶ್ರೀ ಜ. ತೋಂ.ಶಿಕ್ಷಣ ಸಂಸ್ಥೆಗಳ ನೌಕರರ ಪತ್ತಿನ ಸಹಕಾರಿ ಸಂಘ ಪಾರದರ್ಶಕ ಆಡಳಿತದಿಂದ ನೌಕರರ ವಿಶ್ವಾಸಾರ್ಹತೆಯ ನಿಖರತೆಯನ್ನು ಸ್ಪಷ್ಟವಾಗಿ ಸೃಷ್ಟಿಸಿದೆ. ಈ ಬೆಳವಣಿಗೆಯ ಹಿಂದಿನ ಶಕ್ತಿ ಈಗ ತೋಂಟದ ಡಾ.ಸಿದ್ದರಾಮ ಸ್ವಾಮಿಗಳು ಆಗಿದ್ದಾರೆ. ಸಾಮಾಜಿಕ ಕಾಳಜಿಯೇ ಉಭಯ ಶ್ರೀಗಳವರ ಮುಖ್ಯ ಗುರಿಯಾಗಿದ್ದು ಅವು ಸದಾಕಾಲವೂ ಸ್ಮರಣೀಯವಾಗಿವೆ. ನಮ್ಮ ವಿದ್ಯಾಸಂಸ್ಥೆಗಳ ನೌಕರರ ಬಾಳಿಗೆ ಆಸರೆ ಒದಗಿಸಿವೆ. ಶ್ರೀಗಳವರು ಸಂಸ್ಥೆಯ ನೌಕರರ ಮೇಲೆ ಕರುಣಾಭಾವ ಅಪಿ೯ಸಿದ್ದಾರೆ. ಆ ಹಿನ್ನೆಲೆಯಲ್ಲಿ ತೋಂಟದ ಶ್ರೀಗಳವರು ನಿತ್ಯ ಸ್ಮರಣಾರ್ಹ ಮಹಾತ್ಮರು ಎಂದರು.
ಸಹಕಾರಿ ಪತ್ತಿನ ಸಂಘವು ಮುಂದಿನ ವರ್ಷ ಬೆಳ್ಳಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿಕೊಳ್ಳುತ್ತಿದೆ. ತೋಂಟದ ಸಿದ್ದಲಿಂಗ ಶ್ರೀಗಳವರ ಆಶಯದಂತೆ ಪರಿಶ್ರಮದಿಂದ ಸ್ಥಾಪನೆಯಾದ ಜೆ.ಟಿ.ಎಸ್.ಎಸ್.ಇ ಸಹಕಾರಿ ಸಂಘವನ್ನು ಬ್ಯಾಂಕ್ ಆಗಿ ಪರಿವರ್ತಿಸುವ ಚಿಂತನೆ ನಡೆದಿದೆ ಎಂದರು.ಸದಸ್ಯರ ನಂಬಿಕೆ, ವಿಶ್ವಾಸದಿಂದ ಸಹಕಾರಿ ಪತ್ತಿನ ಸಂಘವು ಪ್ರಗತಿ ಪಥದಲ್ಲಿಂದು ಮುನ್ನಡೆಯುತ್ತಿದೆ. ನೌಕರರಿಗೆ ವೇತನಾಧಾರಿತ ತುತು೯ಸಾಲ, ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀಘಾ೯ವಧಿ ಸಾಲಗಳನ್ನು ನೀಡಲಾಗುತ್ತಿದೆ. ಸಹಕಾರಿ ತತ್ವವನ್ನು ಪಾರದರ್ಶಕವಾಗಿ ಪಾಲಿಸುತ್ತಾ ಬಂದಿದೆ ಎಂದರು.ಸಂಘದ ಕಾರ್ಯದರ್ಶಿ ದೊಡ್ಡಬಸಪ್ಪ ಚಿತ್ರಗಾರ, ಉಪನ್ಯಾಸಕ ಎಸ್.ಎಚ್.ಪಾಟೀಲ, ಬಿ.ಎಸ್.ಪಾಟೀಲ, ಭೋಜರಾಜ ಸೊಪ್ಪಿಮಠ, ಅಶ್ವಿನಿ ಅರಳಿ ಹಾಗೂ ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಮಾತನಾಡಿದರು. ಉತ್ತಮ ಆದರ್ಶ ಶಿಕ್ಷಕ ರಾಜ್ಯ ಪ್ರಶಸ್ತಿ ಪುರಸ್ಕೃತ ಕೆ.ಸಿ.ಪಟ್ಟಣಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.
ಆಡಳಿತ ಮಂಡಳಿ ನಿದೇ೯ಶಕರಾದ ಶಿವರಾಚಯ್ಯ ಎಸ್.ಎಂ., ವಿಜಯಕುಮಾರ ಮಾಲಗಿತ್ತಿ, ಯೋಗೇಶಕುಮಾರ ಮತ್ತೂರ, ಲಚಮಪ್ಪ ಬಸಾಪೂರ, ಎಚ್.ಎನ್.ಕೆಲೂರ, ಉಮೇಶ ಉಪ್ಪಿನಬೆಟಗೇರಿ, ಮಂಜುನಾಥ ಉತ್ತರಕರ, ಬಸವರಾಜ ಗೆದಗೇರಿ, ಸರಸ್ವತಿ ಗಾಣಿಗೇರ ಹಾಗೂ ಮಹೇಶ.ಸಿ.ಉಪ್ಪಿನ ಇದ್ದರು. ಕಾರ್ಯಕ್ರಮಕ್ಕೂ ಮುನ್ನ ಲಿಂ.ತೋಂಟದ ಡಾ. ಸಿದ್ದಲಿಂಗ ಶ್ರೀಗಳ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ನಮನ ಸಲ್ಲಿಸಲಾಯಿತು. ಪ್ರಭುಸ್ವಾಮಿ ಹೇಮಗಿರಿಮಠ ಸ್ವಾಗತಿಸಿದರು. ವೀರನಗೌಡ ಮರಿಗೌಡರ ನಿರೂಪಿಸಿದರು. ಆರ್.ಜೆ. ಕೊರ್ಲಹಳ್ಳಿ ವಂದಿಸಿದರು.