ಬೇಡಿಕೆ ಈಡೇರದಿದ್ದರೆ ಮಂಗಳವಾರದಿಂದ ಹೋರಾಟ ತೀವ್ರ । ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸಲ್ಲ । ರಾಜ್ಯ ವಕೀಲರ ಅಧ್ಯಕ್ಷ ವಿಶಾಲ್ ರಘು
ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿರುವ ಪಿಎಸ್ಸೈ ತನ್ವೀರ್ ಹುಸೇನ್ ಅಮಾನತಿಗೆ ಒತ್ತಾಯಿಸಿ ಸೋಮವಾರದ ನಂತರ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ರಾಜ್ಯ ವಕೀಲರ ಪರಿಷತ್ ಅಧ್ಯಕ್ಷ ವಿಶಾಲ್ ರಘು ಎಚ್ಚರಿಕೆ ನೀಡಿದರು.
ನಗರದ ಪೊಲೀಸ್ ಭವನದ ಆವರಣದಲ್ಲಿ ಪ್ರತಿಭಟನೆ ನಡೆಸಿದ ವಕೀಲರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಯಾಯ ವಕೀಲರ ಸಂಘಗಳು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವರು. ಆಗಲೂ ಬೇಡಿಕೆ ಈಡೇರದಿದ್ದರೆ ಮಂಗಳವಾರದಿಂದ ಹೋರಾಟ ತೀವ್ರಗೊಳಿಸಲಾಗುವುದು ಎಂದರು.ರಾಜ್ಯದ 193 ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳೊಂದಿಗೆ ಜೂಮ್ ಮೀಟಿಂಗ್ ನಡೆಸಿ ಹೋರಾಟದ ಬಗ್ಗೆ ಅಭಿಪ್ರಾಯ ಸಂಗ್ರಹಿಸುತ್ತೇವೆ. ಅಲ್ಲಿ ವ್ಯಕ್ತವಾಗುವ ಅಭಿಪ್ರಾಯವನ್ನು ಕ್ರೂಢೀಕರಿಸಿ ಹೋರಾಟ ರೂಪಿಸಲಾಗುವುದು. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ತಪ್ಪು ಕೆಲಸ ಮಾಡಿದವರು ಯಾರೇ ಆಗಿರಲಿ, ಅವರ ತಪ್ಪಿಗೆ ಬಹಿಷ್ಕಾರ ಹಾಕುತ್ತೇವೆ ಅಂದರೆ ನಾವು ನ್ಯಾಯದ ಪರವಾಗಿ ಹೋಗುತ್ತಿದ್ದೇವೆ ಅಂತ ಅರ್ಥ. ವಕೀಲರಲ್ಲಿ ಎಲ್ಲ ಜಾತಿ, ಧರ್ಮ ದವರು ವಕೀಲರು ಇದ್ದೇವೆ. ನಮ್ಮಲ್ಲಿ ಜಾತಿ, ಧರ್ಮ ಮಧ್ಯೆ ಬಂದಿಲ್ಲ.
ಧರ್ಮದ ಹೆಸರಿನಲ್ಲಿ ಕೋಮು ಗಲಭೆ ಮಾಡುವ ಹುನ್ನಾರ ನಡೆಯುತ್ತಿದೆ. ಮಿಸ್ಟರ್ ಡೀಸಿಯವರೇ ಎಸಿ ರೂಮಿನಿಂದ ಹೊರಗೆ ಬಂದು
ನಾವು ಕಾನೂನು ಕೈಗೆತ್ತಿಕೊಳ್ಳುವುದು ಬೇಡ. ನಾಳೆ ಬೆಂಗಳೂರು ಶಿಕ್ಷಕರ ಕ್ಷೇತ್ರ ಉಪಚುನಾವಣೆ ಇದೆ. ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈಬಿಡೋಣ. ಇಲ್ಲದಿದ್ದರೆ ಕಾನೂನು ತೊಡಕಾದರೆ ಸಾರ್ವಜನಿಕರಿಗೆ ತೊಂದರೆ ಆಗುತ್ತದೆ. ಸೋಮವಾರದ ನಂತರ ಹೋರಾಟ ತೀವ್ರಗೊಳಿಸೋಣ ಎಂದು ವಿಶಾಲ್ ರಘು ತಿಳಿಸಿದರು.
15ಕೆಆರ್ ಎಂಎನ್ 7.ಜೆಪಿಜಿ
-----------------------------