ಕನ್ನಡಪ್ರಭ ವಾರ್ತೆ ಮುಂಡರಗಿ
ಪಟ್ಟಣದ ತೋಂಟದಾರ್ಯ ಮಠದಲ್ಲಿ ಶುಕ್ರವಾರ ಸಂಜೆ ಜರುಗಿದ 63ನೇ ತ್ರೈಮಾಸಿಕ ಶಿವಾನುಭವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಹೆಣ್ಣುಮಕ್ಕಳಿಗೆ ಪೂಜೆ ಮಾಡುವ ಹಕ್ಕಿಲ್ಲದ ಕಾಲದಲ್ಲಿ, ಇಷ್ಟಲಿಂಗ ದೀಕ್ಷೆ ನೀಡುವ ಮೂಲಕ ಮಹಿಳೆಯರಿಗೆ ಧಾರ್ಮಿಕ ಸಮಾನತೆ ಕೊಟ್ಟವರು ಬಸವಣ್ಣನವರು. ತಾವು ಕಂಡುಕೊಂಡ ಈ ಶಿವಯೋಗವನ್ನು ಬಸವಣ್ಣನವರು ಮೊದಲು ಪ್ರಯೋಗಿಸಿದ್ದು ತಮ್ಮ ಅಕ್ಕ ನಾಗಮ್ಮನವರ ಮೇಲೆ. ಆ ಮೂಲಕ ಅಕ್ಕನಾಗಮ್ಮ ಈ ದೇಶದ ಮೊಟ್ಟಮೊದಲ ಶಿವಯೋಗಿನಿಯಾದರು. ಇಷ್ಟಲಿಂಗ ಸಾಧನೆಯ ಫಲವಾಗಿಯೇ ಅವರ ಉದರದಲ್ಲಿ ಚನ್ನಬಸವಣ್ಣನಂತಹ ಅವಿರಳ ಜ್ಞಾನಿ ಜನ್ಮತಾಳಿದರು.ಕನ್ನಡಿಯೊಳಗೆ ಪ್ರತಿಬಿಂಬ ಅಡಗಿರುವಂತೆ, ಭಕ್ತನೊಳಗೆ ದೇವರ ಶಕ್ತಿ ಅಡಗಿದೆ ಎಂಬುದನ್ನು ವಚನಗಳ ಮೂಲಕ ಅರ್ಥೈಸಿಕೊಳ್ಳಬೇಕು. ವಚನಗಳನ್ನು ಮೀರಿ ಬರೆಯುವುದಕ್ಕಿಂತ ಅವುಗಳ ಆಶಯವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಮುಖ್ಯ. ವಚನಗಳನ್ನು ಕೇವಲ ಮೇಲ್ನೋಟಕ್ಕೆ ಓದದೆ, ಅವುಗಳ ಆಳವಾದ ತತ್ವಗಳನ್ನು ಅಧ್ಯಯನಶೀಲತೆಯಿಂದ ಅರ್ಥಮಾಡಿಕೊಳ್ಳಬೇಕು. ಯೋಗ ಮತ್ತು ನಾಟ್ಯಕ್ಕೆ ಭಾರತವೇ ತವರುಮನೆ. ಆದಿಶಿವನಿಂದ ಆರಂಭವಾದ ಯೋಗ ಪರಂಪರೆಯು ಹಠಯೋಗ, ಲಯಯೋಗ, ಭಕ್ತಿಯೋಗಗಳ ಮೂಲಕ ಸಾಗಿ ಬಸವಣ್ಣನವರ ಕಾಲದಲ್ಲಿ ಶಿವಯೋಗವಾಗಿ ವಿಕಸನಗೊಂಡಿತು. ಸಾಕಾರದಿಂದ ನಿರಾಕಾರದತ್ತ ಸಾಗುವ ಮಾರ್ಗವೇ ಇಷ್ಟಲಿಂಗ ಎಂದರು.
ಕಾರ್ಯಕ್ರಮದಲ್ಲಿ ಪ್ರವಚನ ಸಮೀತಿ ಅಧ್ಯಕ್ಷ ಸಿ.ಕೆ. ಗಣಪ್ಪನವರ, ಈಶಣ್ಣ ಬೆಟಗೇರಿ, ಬಸಯ್ಯನವರು ಗಿಂಡಿಮಠ, ಕೊಟ್ರೇಶ ಅಂಗಡಿ, ಶಿವಯೋಗಿ ಗಡ್ಡದ, ಶರಣಪ್ಪ ಕುಬಸದ, ಪಾಲಾಕ್ಷಿ ಗಣದಿನ್ನಿ, ಶಿವಯೋಗಿ ನಾವಿ, ನಾಗಪ್ಪ ಹಾಲಗಿ, ಸದಾಶಿವಯ್ಯ ಕಬ್ಬೂರಮಠ, ಶಿವಕುಮಾರ ಬೆಟಗೇರಿ, ಪವನ್ ಚೋಪ್ರಾ, ಮುತ್ತು ಹಾಳಕೇರಿ, ವಿ.ಎಸ್. ಪಾಟೀಲ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಡಾ. ನಿಂಗು ಸೊಲಗಿ ಸ್ವಾಗತಿಸಿ, ವಿಶ್ವನಾಥ ಉಳ್ಳಾಗಡ್ಡಿ ನಿರೂಪಿಸಿದರು.