ಕನ್ನಡಪ್ರಭ ವಾರ್ತೆ ಕೆ.ಆರ್. ನಗರಬಸವಭವನ ನಿರ್ಮಾಣಕ್ಕಾಗಿ ಮಾಡಿಕೊಂಡಿರುವ ಬಸವಭವನದ ಟ್ರಸ್ಟ್ ಗೆ ನಿವೇಶನ ಹಸ್ತಾಂತರ ಆಗಿಲ್ಲದ ಕಾರಣ ಭವನದ ಕಾಮಗಾರಿ ಸ್ಥಗಿತಗೊಂಡಿದ್ದು, ನಿವೇಶನಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಮುಖ್ಯಮಂತ್ರಿಗಳ ಬಳಿ ಚರ್ಚಿಸಿ ಪರಿಹರಿಸಲಾಗುತ್ತದೆ ಎಂದು ಶಾಸಕ ಡಿ. ರವಿಶಂಕರ್ ಹೇಳಿದರು. ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಬಸವ ಜಯಂತಿ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ನಿವೇಶನ ಸರ್ವೇ ನಂಬರ್ ನಲ್ಲಿದ್ದು ಏಕಾಏಕಿ ಪುರಸಭೆಯ ವತಿಯಿಂದ ಇ-ಖಾತೆ ಮಾಡಿಸಿದಕ್ಕಾಗಿ ಸಾಕಷ್ಟು ಗೊಂದಲವಾಗಿತ್ತು, ಇದನ್ನು ಸರಿಪಡಿಸಲು ಸಂಬಂಧಪಟ್ಟ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಪೌರಾಡಳಿತ ಸಚಿವರೊಂದಿಗೆ ಚರ್ಚಿಸಿ ಅಂತಿಮ ರೂಪಕ್ಕೆ ತರಲಾಗಿದೆ ಎಂದರು. ಶೀಘ್ರದಲ್ಲಿ ಬಸವಭವನದ ಟ್ರಸ್ಟ್ ಗೆ ನಿವೇಶನ ಹಸ್ತಾಂತರ ಮಾಡಿ ಆನಂತರ ಬಸವ ಭವನದ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಮಾಹಿತಿ ನೀಡಿದ ಶಾಸಕ ಡಿ. ರವಿಶಂಕರ್ ಇದಕ್ಕೆ ಟ್ರಸ್ಟ್ ನವರು ಮತ್ತು ಸಮಾಜದ ಮುಖಂಡರು ಸಹಕಾರ ನೀಡಬೇಕೆಂದು ಕೋರಿದಲ್ಲದೆ, ಬಸವ ಜಯಂತಿಯನ್ನು ಪ್ರತಿ ವರ್ಷದಂತೆ ಈ ಬಾರಿಯು ಲಿಂಗಾಯಿತ ವೀರಶೈವ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ ಆಚರಣೆ ಮಾಡಲಾಗುತ್ತದೆ, ಅದಕ್ಕಾಗಿ ಏ. 20ರಂದು ಸಾಲಿಗ್ರಾಮ ತಾಲೂಕು ಕಚೇರಿ ಹಾಗೂ ಕೆ.ಆರ್. ನಗರದ ಬಸವಣ್ಣನವರ ದೇವಾಲಯದ ಆವರಣದಲ್ಲಿ ಸರಳ ಮತ್ತು ಅರ್ಥಪೂರ್ಣವಾಗಿ ಆಚರಿಸಲು ತೀರ್ಮಾನಿಸಿದೆ ಎಂದರು ಮಾಹಿತಿ ನೀಡಿದರು. ಸಾಲಿಗ್ರಾಮ ತಾಲೂಕು ಕೆಪಿಸಿಸಿ ಸದಸ್ಯ ಸಿ.ಪಿ. ರಮೇಶ್, ತಾಪಂ ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಹೇಶ್, ವೀರಶೈವ ಮಹಾಸಭಾ ಅಧ್ಯಕ್ಷ ಕೆಂಪರಾಜು, ಮುಖಂಡರಾದ ಎಲ್.ಪಿ. ರವಿಕುಮಾರ್, ಕೆಡಗ ನಟರಾಜು, ಕೆ.ವಿ. ಮಹೇಶ್ ಮಾತನಾಡಿ, ವೀರಶೈವ ಸಮಾಜದ ಎಲ್ಲ ಸಂಘಟನೆಗಳ ಒಕ್ಕೂಟದ ವತಿಯಿಂದ ಈ ಬಾರಿಯು ಬಸವ ಜಯಂತಿ ಆಚರಣೆ ಮಾಡಲಾಗುತ್ತದೆ, ಆದ್ದರಿಂದ ಏ. 20ರಂದು ತಾಲೂಕು ಆಡಳಿತದ ವತಿಯಿಂದ ಸರಳ ಮತ್ತು ಅರ್ಥಪೂರ್ಣವಾಗಿ ಸಾಲಿಗ್ರಾಮ ಮತ್ತು ಕೆ.ಆರ್. ನಗರದಲ್ಲಿ ತಾಲೂಕು ಆಡಳಿತದ ವತಿಯಿಂದ ಆಚರಣೆ ಮಾಬೇಕು, ಈ ಎರಡು ಕಾರ್ಯಕ್ರಮದಲ್ಲೂ ಶಾಸಕರು ಪಾಲ್ಗೊಳಬೇಕೆಂದು ಕೋರಿದರು. ಸಭೆಯಲ್ಲಿ ತಹಸೀಲ್ದಾರ್ ಗಳಾದ ಜಿ. ಸುರೇಂದ್ರಮೂರ್ತಿ, ರುಕೀಯಬೇಗಂ, ತಾಪಂ ಇಓಗಳಾದ ಕುಲದೀಪ್, ಎಸ್.ರವಿ, ಮುಂಖಡರಾದ ಎಂ.ಜೆ. ಕುಮಾರ್, ಎಂ.ಎನ್. ನಾಗೇಶ್, ತಿಮ್ಮಶೆಟ್ಟಿ, ಮಹದೇವಪ್ಪ, ಗಂಗಾಧರ್, ಮಧುಕಿರಣ್, ಉಮೇಶ್, ಬಿ.ಜೆ. ಪ್ರಕಾಶ್, ಯತೀರಾಜ್, ಚಂದ್ರಶೇಖರ್ ಇದ್ದರು.-------------------