ಅಭಿವೃದ್ಧಿಗೆ ಮಾದರಿಯಾಗಿದೆ ಜೊಲ್ಲೆ ಸಮೂಹ

KannadaprabhaNewsNetwork |  
Published : Nov 25, 2026, 03:00 AM IST
ಜೊಲ್ಲೆ | Kannada Prabha

ಸಾರಾಂಶ

ಸಣ್ಣ ಸಂಸ್ಥೆಯಾಗಿ ಆರಂಭವಾದ ಜೊಲ್ಲೆ ಸಮೂಹ ಇಂದು ಸಹಕಾರ, ಬ್ಯಾಂಕಿಂಗ್, ಶಿಕ್ಷಣ, ಆತಿಥ್ಯ, ಸಕ್ಕರೆ ಉದ್ಯಮ, ಸೂಪರ್‌ ಮಾರ್ಕೆಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಸ್ತಿತ್ವ ವಿಸ್ತರಿಸಿಕೊಂಡು ಆಲದ ಮರದಂತೆ ಬೆಳೆದಿದೆ. ಕರ್ನಾಟಕದ ಗಡಿ ಭಾಗವಷ್ಟೇ ಅಲ್ಲದೆ ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತನ್ನ ಕಾರ್ಯಚಟುವಟಿಕೆ ವಿಸ್ತರಿಸಿರುವ ಸಮೂಹದ ಬೆಳವಣಿಗೆ ಅಚ್ಚರಿ ಮೂಡಿಸುತ್ತದೆ.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಸಣ್ಣ ಸಂಸ್ಥೆಯಾಗಿ ಆರಂಭವಾದ ಜೊಲ್ಲೆ ಸಮೂಹ ಇಂದು ಸಹಕಾರ, ಬ್ಯಾಂಕಿಂಗ್, ಶಿಕ್ಷಣ, ಆತಿಥ್ಯ, ಸಕ್ಕರೆ ಉದ್ಯಮ, ಸೂಪರ್‌ ಮಾರ್ಕೆಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಸ್ತಿತ್ವ ವಿಸ್ತರಿಸಿಕೊಂಡು ಆಲದ ಮರದಂತೆ ಬೆಳೆದಿದೆ. ಕರ್ನಾಟಕದ ಗಡಿ ಭಾಗವಷ್ಟೇ ಅಲ್ಲದೆ ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತನ್ನ ಕಾರ್ಯಚಟುವಟಿಕೆ ವಿಸ್ತರಿಸಿರುವ ಸಮೂಹದ ಬೆಳವಣಿಗೆ ಅಚ್ಚರಿ ಮೂಡಿಸುತ್ತದೆ. ಇದರ ಹಿಂದೆ ಅಣ್ಣಾಸಾಹೇಬ ಜೊಲ್ಲೆ ಅವರ ದೂರದೃಷ್ಟಿ ಮತ್ತು ಸಾಮಾಜಿಕ ಚಿಂತನೆ ಪ್ರಮುಖವಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಅಶೋಕ ದಳವಾಯಿ ಹೇಳಿದರು.

ತಾಲೂಕಿನ ಯಕ್ಸಂಬಾ ನಂದಿ ಶಾಲೆಯ ಆವರಣದಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಭಜನ್ ಭಾರತ್ ಕಾರ್ಯಕ್ರಮ ಹಾಗೂ ಜೊಲ್ಲೆ ಧ್ವನಿ ಎಫ್‌ಎಂ ರೇಡಿಯೋ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಸುಮಾರು 25 ವರ್ಷಗಳ ಹಿಂದೆ ಆರಂಭವಾದ ಜೊಲ್ಲೆ ಸಮೂಹ ಇಂದು ಬಹುಮುಖ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಮಾದರಿಯಾಗಿ ಬೆಳೆದಿದೆ. ಒಬ್ಬ ವ್ಯಕ್ತಿ ತನ್ನ ಜೀವನದಲ್ಲಿ ಶ್ರದ್ಧೆ, ಬದ್ಧತೆ ಮತ್ತು ದೂರದೃಷ್ಟಿಯಿಂದ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಈ ಸಮೂಹದ ಬೆಳವಣಿಗೆಯೇ ಸಾಕ್ಷಿ. ಅಣ್ಣಾಸಾಹೇಬ ಜೊಲ್ಲೆ ಅವರನ್ನು ಕೇವಲ ರಾಜಕಾರಣಿ ಅಥವಾ ಉದ್ಯಮಿಯಾಗಿ ನೋಡದೆ, ಸಮಾಜದ ಬಗ್ಗೆ ಕಾಳಜಿಯುಳ್ಳ ವ್ಯಕ್ತಿಯಾಗಿ ಗುರುತಿಸಬೇಕು. ತಮ್ಮ ಸಹೋದ್ಯೋಗಿಗಳು ಹಾಗೂ ಸಮಾಜದ ವಿವಿಧ ವರ್ಗಗಳಿಗೆ ನೆರವಿನ ಹಸ್ತ ಚಾಚುತ್ತಿರುವುದು ಅಪರೂಪದ ಸಂಗತಿ ಎಂದರು.

ಶಾಸಕಿ ಶಶಿಕಲಾ ಜೊಲ್ಲೆ ಅವರ ನಾಯಕತ್ವ, ಸಾರ್ವಜನಿಕ ಜೀವನದ ಅನುಭವ ಹಾಗೂ ಸಮಾಜದ ಅಭಿವೃದ್ಧಿಯ ಬಗೆಗಿನ ಕಾಳಜಿ ಸಮೂಹದ ಕಾರ್ಯಗಳಿಗೆ ಹೆಚ್ಚಿನ ಪ್ರೇರಣೆ ನೀಡಿದೆ. ಈ ಇಬ್ಬರೂ ಆದರ್ಶ ದಂಪತಿಯಾಗಿದ್ದು, ಅವರ ಜೀವನ ಸಾಧನೆ ಯುವಜನರಿಗೆ ಮಾದರಿಯಾಗಿದೆ. ಜೀವನದಲ್ಲಿ ಶ್ರದ್ಧೆ ಮತ್ತು ಬದ್ಧತೆಯಿಂದ ತೊಡಗಿಸಿಕೊಂಡರೆ ಯಶಸ್ಸು ಸಾಧಿಸಲು ಸಾಧ್ಯ ಎಂಬುದನ್ನು ಅವರಿಂದ ಕಲಿಯಬೇಕು ಎಂದು ಹೇಳಿದರು.

ರೈತರಿಗೆ ವೈಜ್ಞಾನಿಕ ಕೃಷಿ ಮಾಹಿತಿ:

ರೈತ ಸಮುದಾಯದ ಅಭಿವೃದ್ಧಿಗೆ ಎಫ್‌ಎಂ ರೇಡಿಯೋ ಕೇಂದ್ರ ಆರಂಭಿಸಿರುವುದು ಮಹತ್ವದ ಹೆಜ್ಜೆ. ಜೊಲ್ಲೆ ಧ್ವನಿ ಎಫ್‌ಎಂ ಮೂಲಕ ವೈಜ್ಞಾನಿಕ ಕೃಷಿ ಪದ್ಧತಿ, ಸಮಗ್ರ ಕೃಷಿ, ಮಿಶ್ರ ಬೆಳೆ ಪದ್ಧತಿ, ನೀರಿನ ಸದ್ಬಳಕೆ, ಮಣ್ಣಿನ ಆರೋಗ್ಯ, ಕೀಟ ಮತ್ತು ರೋಗಗಳ ನಿಯಂತ್ರಣ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೃಷಿ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡಬಹುದು. ಇದರಿಂದ ರೈತರು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ನೆರವಾಗಲಿದೆ. ಅಲ್ಲದೇ, ಮಹಿಳೆಯರ ಆರೋಗ್ಯ, ಪೌಷ್ಟಿಕತೆ, ರಕ್ತಹೀನತೆ ನಿವಾರಣೆ ಹಾಗೂ ಸ್ವಸಹಾಯ ಸಂಘಗಳ ಚಟುವಟಿಕೆಗಳ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಎಫ್‌ಎಂ ಕೇಂದ್ರ ಮಾಡಬೇಕು. ಮಹಿಳಾ ಸಬಲೀಕರಣಕ್ಕೆ ಇಂತಹ ಮಾಹಿತಿ ಕೇಂದ್ರಗಳು ಸಹಕಾರಿಯಾಗಲಿವೆ ಎಂದು ತಿಳಿಸಿದರು.

ಹುಕ್ಕೇರಿ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಸದಲಗಾದ ಶ್ರದ್ಧಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಜೊಲ್ಲೆ ಸಮೂಹದ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿ, ಜೊಲ್ಲೆ ಧ್ವನಿ ಎಫ್‌ಎಂ ಕೇಂದ್ರವು ಈ ಭಾಗದ ಪ್ರತಿ ವರ್ಗದ ಜನರಿಗೂ ಉಪಯುಕ್ತವಾಗುವ ರೀತಿ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ಸಂಪಾದನಾ ಸ್ವಾಮೀಜಿ, ಯೋಗಾನಂದ ಸ್ವಾಮೀಜಿ, ಗೋಪಾಲ ಸ್ವಾಮೀಜಿ, ಮಹಾಂತೇಶ ಜೀವನಾವರ, ಈರಣ್ಣ ಕಡಾಡಿ, ಸಿದ್ರಾಮ ನಾಡಗೌಡ, ಜಯಕುಮಾರ ಖೋತ, ಎಂ.ಪಿ.ಪಾಟೀಲ, ರಾಜೇಂದ್ರ ಪಾಟೀಲ, ಅಪ್ಪಾಸಾಹೇಬ ಜೊಲ್ಲೆ, ಬಸಗೌಡ ಪಾಟೀಲ, ಬಾಬುರಾವ್ ಮಾಳಿ, ವಿಶ್ವನಾಥ ಪೇಟಕರ, ಲಕ್ಷ್ಮಣ ಕಬಾಡೆ, ಮಂಗಲಾ ಜೊಲ್ಲೆ, ಆರತಿ ಪೋತದಾರ, ರಾಘವೇಂದ್ರ ಉಡುಪಿ ಸೇರಿ ಹಲವು ಗಣ್ಯರು ಇದ್ದರು.

------

ಕೋಟ್‌

ಎಲ್ಲರನ್ನು ಜೊತೆಯಲ್ಲಿ ಕೊಂಡೊಯ್ಯುವ, ಸಣ್ಣವರನ್ನು ದೊಡ್ಡವರನ್ನಾಗಿ ಬೆಳೆಸುವ ಹಾಗೂ ಬಡವರಿಗೆ ನೆರವಾಗುವ ವ್ಯಕ್ತಿಗಳು ಜನರ ಮನಸ್ಸಿನಲ್ಲಿ ಸದಾ ಉಳಿಯುತ್ತಾರೆ. ಅಂತಹ ಸಮಾಜಮುಖಿ ವ್ಯಕ್ತಿಗಳಿಗೆ ಜನರೂ ಬೆಂಬಲವಾಗಿ ನಿಲ್ಲುತ್ತಾರೆ. ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆ ದಂಪತಿಯ ಸೇವಾ ಕಾರ್ಯಗಳು ಶ್ಲಾಘನೀಯ.

- ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ, ಕನ್ಹೇರಿ ಮಠ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉ.ಕ ಸಮಸ್ಯೆ ಚರ್ಚೆಗೆ 5 ದಿನ ಮೀಸಲಿಡಿ
ನೀರಿನ ಸಮಸ್ಯೆಗೆ ಅಧಿಕಾರಿಗಳೇ ಹೊಣೆ