ಕನ್ನಡ ಪ್ರಭ ವಾರ್ತೆ ಮುಧೋಳ
ಮುಧೋಳ ತಾಲೂಕಿನ ಆಲಗುಂಡಿ ಬಿ.ಕೆ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ್ದ ಉಯ್ಯಾಲವಾಡ ನರಸಿಂಹ ರೆಡ್ಡಿ ಸರ್ಕಲ್ ನಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಕ್ರಾಂತಿವೀರ ನರಸಿಂಹ ರೆಡ್ಡಿ ಅವರು ಪ್ರಪ್ರಥಮವಾಗಿ ಬ್ರಿಟಿಷ್ ಅಧಿಪತ್ಯದ ವಿರುದ್ಧ ಹೋರಾಡಿ, ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಅಪ್ರತಿಮ ರಾಷ್ಟ್ರಪ್ರೇಮಿ. ಕ್ರಾಂತಿವೀರ ಉಯ್ಯಾಲವಾಡದ ನರಸಿಂಹ ರಡ್ಡಿ ಅವರ ಜಯಂತ್ಯುತ್ಸವ ಪ್ರತಿವರ್ಷ ನವೆಂಬರ್ 24ರಂದು ಆಚರಿಸಲಾಗುತ್ತದೆ. ಬ್ರಿಟಿಷ್ ಆಳ್ವಿಕೆಯ ವಿರುದ್ಧ 1857ರ ಸಿಪಾಯಿ ದಂಗೆಗೂ 10 ವರ್ಷ ಮೊದಲೇ (1846ರಲ್ಲಿ) ರಾಯಲಸೀಮೆ ಭಾಗದಲ್ಲಿ ಬಂಡಾಯವೆದ್ದ ವೀರ ಸೇನಾನಿ 1806ರ ನವೆಂಬರ್ 24ರಂದು ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ (ಹಿಂದಿನ ಕರ್ನೂಲ್ ಜಿಲ್ಲೆ) ರೂಪನ ಗುಡಿ ಗ್ರಾಮದಲ್ಲಿ ಜನಿಸಿದ ಅವರ ಜಯಂತ್ಯೋತ್ಸವ ನ.24ರಂದು ರಾಜ್ಯದ ವಿವಿಧ ಜಿಲ್ಲೆ ಮತ್ತು ತಾಲೂಕು ಮಟ್ಟದ ಆಚರಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ವಚನ ಸಾಹಿತ್ಯ ಪರಿಷತ್ ನೂತನ ಜಿಲ್ಲಾಧ್ಯಕ್ಷ ಚಂದ್ರಶೇಖರ ದೇಸಾಯಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.ಚಂದ್ರಶೇಖರ್ ಬ. ಚಿಪ್ಪಲಕಟ್ಟಿ, ಸಿದ್ದಣ್ಣ ಬ. ಚಿಪ್ಪಲಕಟ್ಟಿ, ನಿಂಗಣ್ಣ ಶಾಷ್ಯಪ್ಪಾ ಚಿಪ್ಪಲಕಟ್ಟಿ, ಗಂಗಪ್ಪ ಹನುಮಪ್ಪ ಚಿಪ್ಪಲಕಟ್ಟಿ, ಕೃಷ್ಟಪ್ಪ ಪಾಂಡಪ್ಪ ಲಕ್ಷಾಣಿ, ವೆಂಕಣ್ಣ ಸದಪ್ಪ ಜಂಬಗಿ, ವೆಂಕಣ್ಣ ಶಂಕ್ರಪ್ಪ ಬದ್ನೂರ್, ವೆಂಕಣ್ಣ ಮಲ್ಲಪ್ಪ ಕೊರಡ್ಡಿ, ವೀರಣ್ಣ ಗಂಗಪ್ಪ ನ್ಯಾಮಗೌಡ, ರಂಗಣ್ಣ ರಾಮಣ್ಣ ಬಾಲನಾಯಕ, ಹನುಮಂತ ಪಾಂಡಪ್ಪ ಗಲಿಬಿ, ಬಸು ಗೌಡಪ್ಪ ಮಾಚಕನೂರ, ಈರಣ್ಣ ಭೀಮಪ್ಪ ನ್ಯಾಮಗೌಡ, ಬಸವರಾಜ ರುದ್ರಪ್ಪ ಚಿಪ್ಪಲಕಟ್ಟಿ, ರಮೇಶ ಚಂದ್ರಪ್ಪ ಸುತ್ತುಗುಂಡಿ, ರಾಜು ಬಸಪ್ಪ ಸೇವಾನಿ, ಮೃತ್ಯುಂಜಯ ಮುತ್ತಯ್ಯ ಹಿರೇಮಠ ಸೇರಿ ಇತರರು ಉಪಸ್ಥಿತರಿದ್ದರು.