- ಶ್ರೀ ಸಂಗಮೇಶ್ವರ ದೇವಸ್ಥಾನ ಆವರಣದಲ್ಲಿ ಯಲವಟ್ಟಿ ಆಂಜನೇಯ ಸ್ವಾಮಿ ಕಾರ್ಣಿಕ
ಹರಿಹರ: ಆಕಾಶದ ಚಿನ್ನದ ತೊಟ್ಟಿಲಲ್ಲಿ ಕಾಳಿಂಗ ಸರ್ಪ ಮಲಗಿತಲೇ ಎಚ್ಚರ ಎಂದು ತಾಲೂಕಿನ ಯಲವಟ್ಟಿ ಆಂಜನೇಯ ಸ್ವಾಮಿ ಕಾರ್ಣಿಕದಲ್ಲಿ ಪೂಜಾರಪ್ಪ ನುಡಿದರು.
ನಗರದ ತುಂಗಭದ್ರಾ ನದಿ ದಡದ ಶ್ರೀ ಸಂಗಮೇಶ್ವರ ದೇವಸ್ಥಾನ ಆವರಣದಲ್ಲಿ ನಾಗಪಂಚಮಿಯಂದು ತಾಲೂಕಿನ ಯಲವಟ್ಟಿ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ಕಾರ್ಣಿಕ ನುಡಿಯುವುದು ಪ್ರತಿವರ್ಷದ ಸಂಪ್ರದಾಯ.ಅದರಂತೆ ಈ ಬಾರಿ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಯಲವಟ್ಟಿ ಆಂಜನೇಯ ಸ್ವಾಮಿ ಕಾರ್ಣಿಕ ನಡೆಯಿತು. ಆಕಾಶದ ಚಿನ್ನದ ತೊಟ್ಟಿಲಲ್ಲಿ ಕಾಳಿಂಗ ಸರ್ಪ ಮಲಗಿತಲೇ ಎಚ್ಚರ ಎಂದು ದೈವವಾಣಿಯನ್ನು ಪೂಜಾರಪ್ಪ ನುಡಿದರು.
ಹರಿಹರ ತಾಲೂಕು ಸೇರಿದಂತೆ ಅಕ್ಕಪಕ್ಕದ ತಾಲೂಕಿನ ಹಲವು ಗ್ರಾಮಗಳ ವಿವಿಧ ದೇವತಾ ಮೂರ್ತಿಗಳು ತುಂಗಭದ್ರಾ ನದಿಯಲ್ಲಿ ಪೂಜೆ ಸಲ್ಲಿಸಿ, ಅನಂತರ ನದಿ ದಡದಲ್ಲಿರುವ ಸಂಗಮೇಶ್ವರ ದೇವಸ್ಥಾನ ಅವರಣದಲ್ಲಿ ಸೇರುತ್ತವೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಭಕ್ತರು ಕಾರ್ಣಿಕ ಮುಗಿದ ನಂತರ ಗೋವಿಂದಾ ಗೋವಿಂದ ಎನ್ನುತ್ತಾ ಜಯಘೋಷ ಹಾಕಿದರು.
- - - -29ಎಚ್‌ಆರ್‌ಆರ್04.ಜೆಪಿಜಿ:
ಹರಿಹರದ ತುಂಗಭದ್ರಾ ನದಿ ಸಮೀಪದ ಸಂಗಮೇಶ್ವರ ದೇವಸ್ಥಾನ ಆವರಣದಲ್ಲಿ ಮಂಗಳವಾರ ತಾಲೂಕಿನ ಯಲವಟ್ಟಿ ಆಂಜನೇಯ ಸ್ವಾಮಿ ಕಾರ್ಣಿಕದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದರು.