ಹುಲಿಯು ಆಹಾರ ಸರಪಳಿಯಲ್ಲಿ ಅಗ್ರ ಸ್ಥಾನದ ಪರಭಕ್ಷಕ ಪ್ರಾಣಿಯಾಗಿದ್ದು, ಕಡವೆ, ಜಿಂಕೆ, ಕಾಡೆಮ್ಮೆ ಸೇರಿದಂತೆ ಇತರೆ ದೊಡ್ಡ ಗಾತ್ರದ ಸಸ್ಯಹಾರಿ ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಸಂಖ್ಯೆಯನ್ನು ನಿಯಂತ್ರಿಸುತ್ತದೆ. ಪರಿಸರ ಮತ್ತು ಜೀವ ವೈವಿಧ್ಯತೆ ವ್ಯವಸ್ಥೆಯ ಸಮತೋಲನ ಕಾಪಾಡುವಲ್ಲಿ ಹುಲಿಯು ಮಹತ್ವ ಪಾತ್ರವನ್ನು ವಹಿಸುತ್ತಿದೆ ಎಂದು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಮಹೇಶ್ ಹೇಳಿದರು
ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಹುಲಿಯು ಆಹಾರ ಸರಪಳಿಯಲ್ಲಿ ಅಗ್ರ ಸ್ಥಾನದ ಪರಭಕ್ಷಕ ಪ್ರಾಣಿಯಾಗಿದ್ದು, ಕಡವೆ, ಜಿಂಕೆ, ಕಾಡೆಮ್ಮೆ ಸೇರಿದಂತೆ ಇತರೆ ದೊಡ್ಡ ಗಾತ್ರದ ಸಸ್ಯಹಾರಿ ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಸಂಖ್ಯೆಯನ್ನು ನಿಯಂತ್ರಿಸುತ್ತದೆ. ಪರಿಸರ ಮತ್ತು ಜೀವ ವೈವಿಧ್ಯತೆ ವ್ಯವಸ್ಥೆಯ ಸಮತೋಲನ ಕಾಪಾಡುವಲ್ಲಿ ಹುಲಿಯು ಮಹತ್ವ ಪಾತ್ರವನ್ನು ವಹಿಸುತ್ತಿದೆ ಎಂದು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಮಹೇಶ್ ಹೇಳಿದರು ತಿಮ್ಮರಾಜಿಪುರದ ವಸತಿ ಶಾಲೆಯಲ್ಲಿ ಬಿ ಆರ್ ಟಿ ಹುಲಿ ಸಂರಕ್ಷಿತ ಪ್ರದೇಶದ ವನ್ಯಜೀವಿ ವಲಯ ಆಯೋಜಿಸಿದ್ದ ವಿಶ್ವ ಹುಲಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಸ್ಯಹಾರಿ ಪ್ರಾಣಿಗಳ ಸಂಖ್ಯೆ ಹೆಚ್ಚಳವಾದರೆ ಹಸಿರು ಹೊದಿಕೆ ನಾಶವಾಗಿ ಮಣ್ಣಿನ ಸವಕಳಿಯಾಗಿ ಜೀವವೈವಿಧ್ಯತೆಯ ಅಸಮತೋಲನ ಉಂಟಾಗುತ್ತದೆ. ಯಾವ ಅರಣ್ಯ ಪ್ರದೇಶದಲ್ಲಿ ಹುಲಿಯು ವಾಸವಾಗಿರುತ್ತದೆಯೋ ಅರಣ್ಯವು ಸಮೃದ್ಧಿಯ ಸೂಚಕವಾಗಿರುತ್ತದೆ ವಿದ್ಯಾರ್ಥಿಗಳು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಭವಿಷ್ಯದಲ್ಲಿ ಪಾಲ್ಗೊಳ್ಳುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು, ಅರಣ್ಯ ಸಂರಕ್ಷಿಸುವ ಜೊತೆ ಜೊತೆ ವನ್ಯಜೀವಿಗಳನ್ನು ಸಂರಕ್ಷಿಸುವ ಗುರುತರ ಹೊಣೆ ಅರಿಯಬೇಕು ಎಂದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಿಂಚನ, ಸಮನ್ವಿತ ಅವರನ್ನು ಅರಣ್ಯ ಇಲಾಖೆ ವತಿಯಿಂದ ಸನ್ಮಾನಿಸಿ ನಗದು ಬಹುಮಾನವನ್ನು ನೀಡಿ ಅಭಿನಂದಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರುಗಳಾದ ರಾಜೇಂದ್ರ, ರಾಸರಾಜು, ನಾಗೇಂದ್ರ, ಉಪವಲಯ ಅರಣ್ಯ ಅಧಿಕಾರಿ ರಘುರಾಮ್, ಗಸ್ತು ಅರಣ್ಯಪಾಲಕರುಗಳಾದ ಸುನಿಲ್ ಬಸಪ್ಪ ಬೆಳವಿ, ಸಂಜುನಾಥ್ ಆಯಟ್ಟಿ, ಬಸವರಾಜ ಹಬ್ಬದ, ಅರಣ್ಯ ವೀಕ್ಷಕರುಗಳಾದ ತಮ್ಮಯ್ಯ ಗೌಡ, ಶಿವಮ್ಮ, ಆಕಾಶ್ ಸೋಪಾನ ಜೋಷಿ, ಸಿದ್ದರಾಮು ಇನ್ನಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.