ಹಿಂದುಳಿದವರ ಚಳವಳಿಗೆ ತಾತ್ವಿಕ ನೆಲಗಟ್ಟು ನೀಡಿದ ಅರಸು: ವಿ.ಅಭಿಷೇಕ್‌

KannadaprabhaNewsNetwork |  
Published : Aug 22, 2025, 01:00 AM IST
ಹೊನ್ನಾಳಿ ಫೋಟೋ 20ಎಚ್.ಎಲ್.ಐ1.ಪಚ್ಚಣದ  ಹಿರೇಕಲ್ಮಠದ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ  ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಆರಸ್ ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು  ಉಪವಿಭಾಗಾಧಿಕಾರಿ ಅಭಿಷೇಕ್   ಉದ್ಘಾಟಿಸಿ ಮಾತನಾಡಿದರು.    | Kannada Prabha

ಸಾರಾಂಶ

ನಾಡಿನ ಇತಿಹಾಸದಲ್ಲಿ ಹಿಂದುಳಿದ ಚಳವಳಿಗಳಿಗೆ ಗಟ್ಟಿಯಾದ ತಾತ್ವಿಕ ನೆಲಗಟ್ಟನ್ನು ಕಲ್ಪಿಸಿದವರು ದಿವಂಗತ ಡಿ.ದೇವರಾಜ ಅರಸು ಎಂದು ಉಪ ವಿಭಾಗಾಧಿಕಾರಿ ವಿ.ಅಭಿಷೇಕ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ನಾಡಿನ ಇತಿಹಾಸದಲ್ಲಿ ಹಿಂದುಳಿದ ಚಳವಳಿಗಳಿಗೆ ಗಟ್ಟಿಯಾದ ತಾತ್ವಿಕ ನೆಲಗಟ್ಟನ್ನು ಕಲ್ಪಿಸಿದವರು ದಿವಂಗತ ಡಿ.ದೇವರಾಜ ಅರಸು ಎಂದು ಉಪ ವಿಭಾಗಾಧಿಕಾರಿ ವಿ.ಅಭಿಷೇಕ್‌ ಹೇಳಿದರು.

ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಆಶ್ರಯದಲ್ಲಿ ಹಿರೇಕಲ್ಮಠದ ಸಮುದಾಯ ಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಾಮಾಜಿಕ ನ್ಯಾಯದ ಹರಿಕಾರ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಆರಸ್ ಅವರ 110ನೇ ಜನ್ಮದಿನಾಚರಣೆ ಕಾರ್ಯಕ್ರಮಕವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಧಾನಿ ಇಂದಿರಾ ಗಾಂಧಿ ಜಾರಿಗೆ ತಂದ ಉಳುವವನೇ ಹೊಲದೊಡೆಯ ಯೋಜನೆ ಕರ್ನಾಟಕದಲ್ಲಿ ಆತ್ಯಂತ ಯಶಸ್ವಿಯಾಗಿ ಅನುಷ್ಠಾನ ಮಾಡಿದವರು ದೇವರಾಜ ಅರಸು. ಅವರ ಅಧಿಕಾರಾವಧಿಯಲ್ಲಿ ಹಾವನೂರು ವರದಿ ಜಾರಿಗೆ ತಂದು ಇಡೀ ಹಿಂದುಳಿದ ಜನಸಮುದಾಯಕ್ಕೆ ಸಾಮಾಜಿಕ, ಆರ್ಥಿಕ ನ್ಯಾಯ ಒದಗಿಸಿಕೊಟ್ಟಿದ್ದರು ಎಂದು ಹೇಳಿದರು.

ಡಿ. ದೇವರಾಜ ಅರಸು ಕುರಿತು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ.ಧನಂಜಯ ಉಪನ್ಯಾಸ ನೀಡಿದರು. ತಹಸೀಲ್ದಾರ್ ರಾಜೇಶ್ ಕುಮಾರ್ ಮಾತನಾಡಿದರು. ತಾಲೂಕಿನ ಚಿಕ್ಕಹಾಲಿವಾಣ, ನೆಲಹೊನ್ನೆ, ಹನುಮನಹಳ್ಳಿ ಗ್ರಾಮಗಳ ಹಿಂದುಳಿದ ವರ್ಗಗಳ ನಿವೇಶನರಹಿತ 250 ಫಲಾನುಭವಿಗಳು ಆಯ್ಕೆಯಾಗಿದ್ದು, ವೇದಿಕೆಯಲ್ಲಿ ಸಾಂಕೇತಿಕವಾಗಿ ಕೆಲವರಿಗೆ ಹಕ್ಕುಪತ್ರಗಳನ್ನು ವಿತರಿಸಲಾಯಿತು.

ಅತಿ ಹೆಚ್ಚು ಅಂಕ ಪಡೆದ ಬಿಸಿಎಂ ಹಾಸ್ಟೇಲ್ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ದೇವರಾಜ ಅರಸು ಕುರಿತು ನಡೆಸಿದ ಪ್ರಬಂಧ ಮತ್ತು ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ಇದೇ ಸಂದರ್ಭ ಸದ್ಭಾವನಾ ದಿನಾಚರಣೆ ಅಂಗವಾಗಿ ಎಲ್ಲರಿಗೂ ಪ್ರತಿಜ್ಞಾವಿಧಿ ಬೋಧಿಸಲಾಯಿತು.

ದೇವರಾಜ ಅರಸು ಜನ್ಮದಿನಾಚರಣೆ ಅಂಗವಾಗಿ ತಾಲೂಕು ಕಚೇರಿಯಿಂದ ಹಿರೇಕಲ್ಮಠದವರೆಗೆ ಭಾವಚಿತ್ರ ಮೆರವಣಿಗೆ ನಡೆಸಲಾಯಿತು. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ತಿಪ್ಪೇಸ್ವಾಮಿ, ವಿಸ್ತರಣಾಧಿಕಾರಿ ಮೃತ್ಯುಂಜಯ ಟಿ.ಎಂ. ಪುರಸಭೆ ಅಧ್ಯಕ್ಷ ಮೈಲಪ್ಪ, ಮುಖ್ಯಾಧಿಕಾರಿ ಟಿ.ಲೀಲಾವತಿ, ಬಿಇಒ ನಿಂಗಪ್ಪ, ನೌಕರರ ಸಂಘದ ಅಧ್ಯಕ್ಷ ಅರುಣ್, ತಾಪಂ ಅಧಿಕಾರಿ ಧರಣೀಶ್, ಸಮಾಜ ಕಲ್ಯಾಣಾಧಿಕಾರಿ ಉಮಾ, ಹಿಂದುಳಿದ ವರ್ಗಗಳ ಮುಖಂಡ ಎಚ್.ಎ. ಉಮಾಪತಿ, ಮಾಜಿ, ಸೈನಿಕ ವಾಸಪ್ಪ, ತಾಲೂಕು ಮಟ್ಟದ ಅಧಿಕಾರಿಗಳು, ಹಾಸ್ಟೆಲ್ ವಿದ್ಯಾರ್ಥಿಗಳು ಇದ್ದರು. ಹಾಸ್ಟೆಲ್ ಮೇಲ್ವಿಚಾರಕಿ ರೂಪ ಸ್ವಾಗತಿಸಿ, ಕುಮಾರ ಬಾರ್ಕಿ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ