ಆಗಸ್ಟ್‌ 22ರಂದು ವೀರಶೈವ ಲಿಂಗಾಯತ ಸಮಾವೇಶ: ಡಿ.ಜಿ.ಶಿವಾನಂದಪ್ಪ

KannadaprabhaNewsNetwork |  
Published : Aug 22, 2025, 01:00 AM IST
20ಎಚ್‍ಆರ್‍ಆರ್1ಹರಿಹರದ ರೇಣುಕ ಮಂದಿರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ಡಿ.ಜಿ.ಶಿವಾನಂದಪ್ಪ ಮಾತನಾಡಿದರು. ಟಿ.ಜೆ.ಮುರುಗೇಶಪ್ಪ, ಸುನಿತಾ ಮಾರವಳ್ಳಿ, ಜಿ.ಕೆ.ಮಲ್ಲಿಕಾರ್ಜುನ, ಎನ್.ಪಿ.ತಿಮ್ಮನಗೌಡ ಇದ್ದರು. | Kannada Prabha

ಸಾರಾಂಶ

ನಗರದ ಎಚ್.ಕೆ.ವೀರಪ್ಪ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಮಟ್ಟದ ಸಮಾವೇಶವನ್ನು ಆ.22ರ ಶುಕ್ರವಾರ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಹರಿಹರ

ನಗರದ ಎಚ್.ಕೆ.ವೀರಪ್ಪ ಸಮುದಾಯ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ತಾಲೂಕು ಮಟ್ಟದ ಸಮಾವೇಶವನ್ನು ಆ.22ರ ಶುಕ್ರವಾರ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ ಹೇಳಿದರು.

ನಗರದ ದೇವಸ್ಥಾನದ ರಸ್ತೆಯ ರೇಣುಕ ಮಂದಿರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಅ.ಭಾ.ವೀ.ಲಿಂ ಮಹಾಸಭಾದ ತಾಲೂಕು ಮಟ್ಟದ ಸಮಾವೇಶದಲ್ಲಿ ನಗರ, ಯುವ ಹಾಗೂ ಮಹಿಳಾ ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ, ಸದಸ್ಯತ್ವ ಅಭಿಯಾನಕ್ಕೆ ಚಾಲನೆ ಹಾಗೂ ಪ್ರತಿಭಾವಂತ ವಿಧ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.

ಸಮಾವೇಶದ ಉದ್ಘಾಟನೆಯನ್ನು ಅ.ಭಾ.ವೀ.ಲಿಂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ನಡಸಲಿದ್ದಾರೆ. ರಾಜ್ಯ ಘಟಕದ ಅಧ್ಯಕ್ಷ ಶಂಕರ ಮಹದೇವ ಬಿದರಿಯವರಿಂದ ಪ್ರತಿಭಾ ಪುರಸ್ಕಾರ, ರಾಷ್ಟ್ರೀಯ ಉಪಾಧ್ಯಕ್ಷ ಅಥಣಿ ವೀರಣ್ಣ ನಗರ ಘಟಕದ ಉದ್ಘಾಟನೆ ಹಾಗೂ ಅಣಬೇರು ರಾಜಣ್ಣ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ಅ.ಭಾ.ವೀ.ಲಿಂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಎಸ್.ಎಸ್. ಗಣೇಶ್ ಯುವ ಘಟಕವನ್ನು ಹಾಗೂ ಅ.ಭಾ.ವೀ.ಲಿಂ ಮಹಾಸಭಾದ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆ ವೀಣಾ ಕಾಶಪ್ಪ ಮಹಿಳಾ ಘಟಕದ ಉದ್ಘಾಟನೆಯನ್ನು ಮಾಡುವರು ಎಂದು ಮಾಹಿತಿ ನೀಡಿದರು.

ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಅ.ಭಾ.ವೀ.ಲಿಂ ಮಹಾಸಭಾದ ರಾಷ್ಟ್ರೀಯ ಕಾರ್ಯದರ್ಶಿ ರೇಣುಕ ಪ್ರಸನ್ನ, ರಾಜ್ಯ ಕಾರ್ಯದರ್ಶಿ ಶಶಿಕಲಾ ಮೂರ್ತಿ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಮುಕ್ತಾಂಬ ಬಸವರಾಜ್, ಮನೋಹರ ಜಿ.ಅಬ್ಬಿಗೆರೆ, ಐಗೂರು ಚಂದ್ರಶೇಖರ್, ಸುಷ್ಮಾ ಪಾಟೀಲ್, ಜೆ.ಶಿವರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು.

ಸಮಾಜ ಸಂಘಟನೆಯಲ್ಲಿ ಯುವಕರ ಮತ್ತು ಮಹಿಳೆಯರ ಪಾತ್ರ ಕುರಿತು ಹೊಳೆಸಿರಿಗೆರೆಯ ಆಧ್ಯಾತ್ಮಿಕ ಚಿಂತಕ ಡಿ.ಸಿದ್ದೇಶ್ ವಿಷಯ ಮಂಡನೆ ಮಾಡಲಿದ್ದು, ಸಮಾವೇಶದ ಅಧ್ಯಕ್ಷತೆಯನ್ನು ತಾಲೂಕು ಘಟಕದ ಅಧ್ಯಕ್ಷ ಡಿ.ಜಿ. ಶಿವಾನಂದಪ್ಪ ವಹಿಸಲಿದ್ದಾರೆ ಎಂದು ಹೇಳಿದರು.

ನಗರ ಘಟಕದ ಅಧ್ಯಕ್ಷ ಟಿ.ಜೆ. ಮುರುಗೇಶಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಸುನಿತಾ ಮಾರವಳ್ಳಿ, ಜಿ.ಕೆ.ಮಲ್ಲಿಕಾರ್ಜುನ, ಎನ್.ಪಿ. ತಿಮ್ಮನಗೌಡ, ವೀರಣ್ಣ ಯಾದವಾಡ್, ನಾಗರಾಜ್ ಕುರುವತ್ತಿ, ರೂಪಾ ನಾಗರಾಜ್, ಎಚ್.ಕೊಟ್ರೇಶಪ್ಪ, ಹೆಚ್. ಮಹದೇವಪ್ಪ, ಅಂಜು ಸುರೇಶ್, ಜಿ.ಆರ್. ಕವಿತಾ, ವಡ್ನಾಳ್ ಪ್ರಕಾಶ್, ರಾಜೇಶ್‍ಗೌಡ, ಶಶಿಧರಗೌಡ, ರಾಜೇಶ್ ಕರೂರು, ಜಿ.ಬಿ. ಮಾಲತೇಶ್, ಹೆಚ್.ಎಂ. ವೀರಯ್ಯ, ನಾಗರಾಜ್ ಕೊಡಿಹಳ್ಳಿ, ಸ್ವಾಮಿಲಿಂಗಪ್ಪ ಇತರರು ಇದ್ದರು.

PREV

Recommended Stories

‘ಪಿಒಪಿ ಗಣಪ ಬಳಸಲ್ಲ’ ಮುಚ್ಚಳಿಕೆ ಬರೆಸಿ ಉತ್ಸವಕ್ಕೆ ಒಪ್ಪಿಗೆ: ಖಂಡ್ರೆ
ಕರ್ನಾಟಕದಲ್ಲಿ ಅಡಕೆ ಕ್ಯಾನ್ಸರ್‌ ಕಾರಕವೇ? : ಶೀಘ್ರ ವರದಿಗೆ ಕೃಷಿ ಸಚಿವ ಚೌಹಾಣ್ ಸೂಚನೆ