ಹಣ ದ್ವಿಗುಣಗೊಳಿಸುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪದಡಿ ಆನ್‌ಲೈನ್‌ ಗೇಮಿಂಗ್‌ ಗೇಮ್ಸ್‌ ಕ್ರಾಫ್ಟ್‌ನ ಬೆಂಗಳೂರು ಮತ್ತು ದೆಹಲಿಯ 17 ಸ್ಥಳಗಳಿಗೆ ಗುರುವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ(ಇ.ಡಿ.) ಇದೀಗ ಸಂಸ್ಥೆಯ 3 ಸದಸ್ಯರನ್ನು ಶುಕ್ರವಾರ ಬಂಧಿಸಿದೆ. ದೀಪಕ್‌ ಸಿಂಗ್‌, ಪೃಥ್ವಿ ರಾಜ್‌ ಸಿಂಗ್‌ ಮತ್ತು ವಿಕಾಸ್‌ ತನೇಜಾ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಇ.ಡಿ. ಬಂಧಿಸಿದೆ.

ನವದೆಹಲಿ: ಹಣ ದ್ವಿಗುಣಗೊಳಿಸುವುದಾಗಿ ಆಮಿಷವೊಡ್ಡಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ಆರೋಪದಡಿ ಆನ್‌ಲೈನ್‌ ಗೇಮಿಂಗ್‌ ಗೇಮ್ಸ್‌ ಕ್ರಾಫ್ಟ್‌ನ ಬೆಂಗಳೂರು ಮತ್ತು ದೆಹಲಿಯ 17 ಸ್ಥಳಗಳಿಗೆ ಗುರುವಾರ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯ(ಇ.ಡಿ.) ಇದೀಗ ಸಂಸ್ಥೆಯ 3 ಸದಸ್ಯರನ್ನು ಶುಕ್ರವಾರ ಬಂಧಿಸಿದೆ. ದೀಪಕ್‌ ಸಿಂಗ್‌, ಪೃಥ್ವಿ ರಾಜ್‌ ಸಿಂಗ್‌ ಮತ್ತು ವಿಕಾಸ್‌ ತನೇಜಾ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಇ.ಡಿ. ಬಂಧಿಸಿದೆ.

ದೀಪಕ್‌ ಸಿಂಗ್‌ ಮತ್ತು ಪೃಥ್ವಿರಾಜ್‌ ಸಿಂಗ್‌ ಅವರನ್ನು ದೆಹಲಿ-ಎನ್‌ಸಿಆರ್‌ ಪ್ರದೇಶದಿಂದ ಹಾಗೂ ತನೇಜಾ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ. ಮೂವರನ್ನೂ ಬೆಂಗಳೂರು ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಗೇಮ್ಸ್‌ಕ್ರಾಫ್ಟ್‌ ಟೆಕ್ನಾಲಜಿ ಲಿ. ವಿರುದ್ಧ ಇ.ಡಿ.ಯು ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಈ ಬಂಧನ ನಡೆದಿದೆ. ಹಲವು ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ. ತನಿಖೆ ನಡೆಸುತ್ತಿದೆ.

ಗುರುವಾರವಷ್ಟೇ ಇ.ಡಿ.ಯು ದೆಹಲಿ ಮತ್ತು ಕರ್ನಾಟಕದ 17 ಕಡೆ ದಾಳಿ ನಡೆಸಿ ಕೋಟ್ಯಂತರ ರುಪಾಯಿ ಹಣ ಹಾಗೂ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿತ್ತು. ಕಂಪನಿಯು ರಮ್ಮಿ ಕಲ್ಚರ್‌, ರಮ್ಮಿ ಟೈಮ್‌ನಂಥ ಆನ್‌ಲೈನ್ ಗೇಮ್‌ಗಳನ್ನು ನಡೆಸುತ್ತಿತ್ತು. ಈ ಸಂಸ್ಥೆ ವಿರುದ್ಧ ಹಲವು ವಂಚನೆ ಪ್ರಕರಣಗಳು ದಾಖಲಾಗಿವೆ. ವಂಚನೆ ಬಳಿಕ ಕೆಲವರು ಆತ್ಮಹತ್ಯೆ ಮಾಡಿಕೊಂಡ ಕುರಿತೂ ಎಫ್‌ಐಆರ್‌ ದಾಖಲಾಗಿದೆ.