ಪೌಲ್ಟ್ರಿ ಫೀಡ್ಸ್ ಸಾಗಾಟ ನೆಪದಲ್ಲಿ ಟ್ರಕ್ಸ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಬಿಹಾರದ ಆರೋಪಿಯನ್ನು ಟ್ರಕ್ ಸಮೇತ ಜಿಗಣೆ ಪೋಲಿಸರು ಬಂಧಿಸಿದ್ದಾರೆ. ಆರೋಪಿಯಿಂದ 1.25 ಕೋಟಿ ರು. ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಂಗಳೂರು ದಕ್ಷಿಣ
ಪೌಲ್ಟ್ರಿ ಫೀಡ್ಸ್ ಸಾಗಾಟ ನೆಪದಲ್ಲಿ ಟ್ರಕ್ಸ್‌ನಲ್ಲಿ ಗಾಂಜಾ ಸಾಗಿಸುತ್ತಿದ್ದ ಬಿಹಾರದ ಆರೋಪಿಯನ್ನು ಟ್ರಕ್ ಸಮೇತ ಜಿಗಣೆ ಪೋಲಿಸರು ಬಂಧಿಸಿದ್ದಾರೆ. ಆರೋಪಿಯಿಂದ 1.25 ಕೋಟಿ ರು. ಮೌಲ್ಯದ ಗಾಂಜಾವನ್ನು ಜಪ್ತಿ ಮಾಡಿದ್ದಾರೆ.ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಿಗಣಿ ಪೊಲೀಸ್ ಠಾಣಾ ಸರಹದ್ದು ಕೊಪ್ಪ-ಬೇಗೂರು ಮುಖ್ಯ ರಸ್ತೆಯ ಪ್ರಾರ್ಥನಾ ಜ್ಯೂಸ್ ಅಂಡ್ ಕಾಂಡಿಮೆಂಟ್ಸ್ ಟೀ ಸ್ಟಾಲ್ ಬಳಿ ಗುರುವಾರ ಸಂಜೆ ಪೌಲ್ಟ್ರಿ ಫೀಡ್ಸ್ ಸಾಗಾಣಿಕೆ ಟ್ರಕ್‌ನಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಜಿಗಣಿ ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಎಸ್.ಮಂಜುನಾಥ್ ಮತ್ತು ಸಿಬ್ಬಂದಿ ದಾಳಿ ನಡೆಸಿ ಪೌಲ್ಟ್ರಿ ಪೀಡ್ಸ್ ಮಧ್ಯೆ ಬಚ್ಚಿಟ್ಟಿದ್ದ 250 ಕೆ.ಜಿ ತೂಕದ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ.ಮುಹಮ್ ಇಂಟರ್ ನ್ಯಾಷನಲ್ ಇಂಡೊ ಟ್ರಾನ್ಸ್‌ಪೋರ್ಟ್ ಕಂಪನಿಗೆ ಸೇರಿದ ಟ್ರಕ್‌ನಲ್ಲಿ ಛತ್ತೀಸ್‌ಗಢದಿಂದ ತಮಿಳುನಾಡಿನ ನಾಮಕ್ಕಲ್‌ಗೆ ಪೌಲ್ಟ್ರಿ ಫೀಡ್ಸ್ ಸಾಗಿಸುವ ನೆಪದಲ್ಲಿ ಒಡಿಶಾದ ಜಯಪುರ ಗ್ರಾಮಕ್ಕೆ ತೆರಳಿ ಅಲ್ಲಿ ಗಾಂಜಾ ತುಂಬಿಸಿ ಬೆಂಗಳೂರಿಗೆ ಪೂರೈಸಲು ಆರೋಪಿಗಳು ಯೋಜನೆ ರೂಪಿಸಿದ್ದರು. ಈ ಸಂಬಂಧ ಜಿಗಣಿ ಪೋಲಿಸ್ ಠಾಣೆಯಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮೂಲ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಕಾರ್ಯಾಚರಣೆಯಲ್ಲಿ ಬೆಂಗಳೂರು ಜಿಲ್ಲೆ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಮತ್ತು ಅಪರ ಪೊಲೀಸ್ ಅಧೀಕ್ಷಕ ವೆಂಕಟೇಶ್ ಪ್ರಸನ್ನ, ಲಕ್ಷ್ಮೀನಾರಾಯಣ್ ರವರ ಮಾರ್ಗದರ್ಶನದಲ್ಲಿ, ಆನೇಕಲ್ ಉಪ-ವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಎಸ್.ಮೋಹನ್ ಕುಮಾರ್ ನೇತೃತ್ವದಲ್ಲಿ ಜಿಗಣಿ ಇನ್‌ಸ್ಪೆಕ್ಟರ್ ಬಿ.ಎಸ್.ಮಂಜುನಾಥ್ , ಪಿಎಸ್‌ಐ ಫಹಮಿದುನ್ನಿಸಾ, ಎಎಸ್‌ಐ ಮುನಿರಾಜು ಸೇರಿದಂತೆ 10ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
