ಶೃಂಗೇರಿ ಗುಬ್ಬಗೋಡು ಶಿರೂರು ಹೊನ್ನವಳ್ಳಿ ಸಂಪರ್ಕ ರಸ್ತೆಯಲ್ಲಿ ಹೊಂಡಗಳದ್ದೇ ಸಾಮ್ರಾಜ್ಯ.

KannadaprabhaNewsNetwork |  
Published : Feb 04, 2024, 01:30 AM IST
್ಿ | Kannada Prabha

ಸಾರಾಂಶ

ರಸ್ತೆಯಲ್ಲಿ ರಸ್ತೆಗಿಂತ ಹೊಂಡ, ಗುಂಡಿಗಳೇ ಜಾಸ್ತಿ, ಜಲ್ಲಿಕಲ್ಲುಗಳು ಮೇಲೆದ್ದಿವೆ. ಮಳೆಗಾಲದಲ್ಲಿ ಹೊಂಡಗುಂಡಿಗಳಲ್ಲಿ ನೀರು ನಿಂತು ಕೆರೆಯಂತೆ, ಮಳೆ ನೀರೆಲ್ಲ ರಸ್ತೆಯ ಮೇಲೆಯೇ ಹರಿಯುತ್ತಾ ರಸ್ತೆ ಕಾಲುವೆ ಎರಡು ಒಂದೇ ರೀತಿಯಲ್ಲಿ ಕಾಣುತ್ತದೆ. ಸುಮಾರು ಎರಡು ದಶಕ ಕಳೆದರೂ ಈ ರಸ್ತೆಗೆ ಡಾಂಬರೀಕರಣ ಭಾಗ್ಯ ಇನ್ನೂ ಸಿಕ್ಕಿಲ್ಲ.

ಮಳೆ ಬೇಸಿಗೆ ಬಂದು ಹೋಗುತ್ತಿದ್ದರೂ, ದಶಕಗಳು ಕಳೆದರೂ ಈ ರಸ್ತೆಗಿಲ್ಲ ಡಾಂಬಾರು ಭಾಗ್ಯ.

ನೆಮ್ಮಾರ್‌ ಅಬೂಬಕರ್‌

ಕನ್ನಡಪ್ರಭ ವಾರ್ತೆ, ಶೃಂಗೇರಿ

ರಸ್ತೆಯಲ್ಲಿ ರಸ್ತೆಗಿಂತ ಹೊಂಡ, ಗುಂಡಿಗಳೇ ಜಾಸ್ತಿ, ಜಲ್ಲಿಕಲ್ಲುಗಳು ಮೇಲೆದ್ದಿವೆ. ಮಳೆಗಾಲದಲ್ಲಿ ಹೊಂಡಗುಂಡಿಗಳಲ್ಲಿ ನೀರು ನಿಂತು ಕೆರೆಯಂತೆ, ಮಳೆ ನೀರೆಲ್ಲ ರಸ್ತೆಯ ಮೇಲೆಯೇ ಹರಿಯುತ್ತಾ ರಸ್ತೆ ಕಾಲುವೆ ಎರಡು ಒಂದೇ ರೀತಿಯಲ್ಲಿ ಕಾಣುತ್ತದೆ. ಸುಮಾರು ಎರಡು ದಶಕ ಕಳೆದರೂ ಈ ರಸ್ತೆಗೆ ಡಾಂಬರೀಕರಣ ಭಾಗ್ಯ ಇನ್ನೂ ಸಿಕ್ಕಿಲ್ಲ.ಇದು ತಾಲೂಕಿನ ಮರ್ಕಲ್‌ ಪಂಚಾಯಿತಿ ವ್ಯಾಪ್ತಿಯ ಗಂಡಘಟ್ಟ ಗ್ರಾಮದ ಗುಬ್ಬಗೋಡು ಶಿರೂರು ಧರೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊನ್ನವಳ್ಳಿ ಸಂಪರ್ಕ ಕಲ್ಪಿಸುವ ರಸ್ತೆ ದುಸ್ಥಿತಿ. ಈ ರಸ್ತೆಯು ಸುತ್ತಮುತ್ತಲ ಅನೇಕ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ಸಂಪರ್ಕ ಕೇಂದ್ರ ರಸ್ತೆಯಾಗಿದೆ. ಕಾನುಗೋಡು, ಕೆರೆಮನೆ, ಮುಂಡೂರು, ಶಿರೂರು, ಹರಿಜನ ಕಾಲೋನಿ, ವಡಗಿನಬೈಲು, ಮಂಡಗಾರು ಸುತ್ತಮುತ್ತಲ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ.ಈ ರಸ್ತೆಯಲ್ಲಿ ವಾಹನ, ಜನಸಂಚಾರವೇ ದುಸ್ತರವಾಗಿದೆ. ಈ ಭಾಗದ ಗ್ರಾಮಸ್ಥರು ಅಗತ್ಯ ಕೆಲಸಗಳಿಗೆ ಶೃಂಗೇರಿಗೆ ಸಂಚರಿಲು ಹರಸಾಹಸ ಪಡಬೇಕಿದೆ. ವಾಹನ ಸಂಚಾರ ಕಷ್ಟವಾಗುತ್ತಿದೆ. ಬಾಡಿಗೆ ವಾಹನಗಳು ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುವಂತಹ ದಯನೀಯ ಪರಿಸ್ಥಿತಿ ಇಲ್ಲಿನ ಗ್ರಾಮಸ್ಥರದ್ದು. ಆಸ್ಪತ್ರೆ,ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ವಯೋವೃದ್ದರು,ಅನಾರೋಗ್ಯ ಪೀಡಿತರು ಈ ಮಾರ್ಗದಲ್ಲಿ ಓಡಾಡಲು ಸಾಕಷ್ಟು ಪ್ರಯಾಸ ಪಡಬೇಕಾಗುತ್ತಿದೆ. ವಡಗಿನಬೈಲಿನಲ್ಲಿ ಅಂಗನವಾಡಿ ಕೇಂದ್ರವಿದ್ದು ಇಲ್ಲಿಗೆ ಬರಲು ಮಕ್ಕಳಿಗೆ ಹದಗೆಟ್ಟ ರಸ್ತೆಯಲ್ಲಿ ಸಾಕಷ್ಟು ತೊಂದರೆ ಯಾಗುತ್ತಿದೆ.ಇಲ್ಲಿ ಶಾಲೆಯಿದ್ದರೂ ಸಮರ್ಪಕ ರಸ್ತೆಯಿಲ್ಲದ ಕಾರಣ ಮುಚ್ಚಿ ಐದಾರು ವರ್ಷಗಳೇ ಕಳೆದಿವೆ. ಇನ್ನು ಇಲ್ಲಿರುವ ಅಂಗನವಾಡಿ ಕೇಂದ್ರ ಮಾತ್ರ ಮೀನಾಮೇಷ ಎಣಿಸುತ್ತಿದೆ. ಇಲ್ಲಿಂದ ಶೃಂಗೇರಿಗೆ ಸುಮಾರು 5-6 ಕಿಲೋಮೀಟರ್‌ ದೂರದಲ್ಲಿರುವ ಶೃಂಗೇರಿಗೆ ಈ ಹೊಂಡಗುಂಡಿಗಳ ರಸ್ತೆಯಲ್ಲಿಯೇ ಓಡಾಡಬೇಕಿದೆ. ಇಲ್ಲಿನ ಗ್ರಾಮಸ್ಥರು ದಶಕಗಳಿಂದ ಸರ್ಕಾರ, ಜಿಲ್ಲಾದಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಇವರ ಅಹವಾಲು, ಮನವಿಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಇನ್ನು ಗ್ರಾಮಸಭೆ, ವಾರ್ಡಸಭೆ, ಜನಸಂಪರ್ಕ ಸಭೆಗಳಲ್ಲಿ ಅದೆಷ್ಟು ಮನವಿ ಸಲ್ಲಿಸಿ ಅಧಿಕಾರಿಗಳ, ಜನಪ್ರತಿನಿದಿಗಳ ಮುಂದೆ ತಮ್ಮ ಅಹವಾಲುಗಳನ್ನು ಮುಂದಿಟ್ಟು ಗೋಗೆರೆದರೂ ಯಾವುದೇ ಪ್ರಯೋಜನವಾಗಿಲ್ಲ. ಒಂದೆಡೆ ದಶಕಗಳಿಂದ ನಿರಂತರ ಮನವಿ ಸಲ್ಲಿಸುತ್ತಲೇ ಬರುತ್ತಿದ್ದರೂ ಇನ್ನೊಂದೆಡೆ ರಸ್ತೆ ಮಾತ್ರ ನಿರಂತರ ಕಿತ್ತೆದ್ದು ಹೋಗುತ್ತಿದೆ. ಅಧಿಕಾರಿಗಳು ಬಂದು ಹೋಗುತ್ತಿದ್ದರೂ, ಸರ್ಕಾರಗಳು ಬದಲಾಗುತ್ತಿದ್ದರೂ ಇಲ್ಲಿನ ರಸ್ತೆ ಮಾತ್ರ ಡಾಂಬರೀಕರಣವಾಗಿ ಬದಲಾಗಿಲ್ಲ. ಸರ್ಕಾರ, ಸಂಬಂಧಪಟ್ಟ ಇಲಾಖೆ ಇನ್ನಾದರೂ ಎಚ್ಚೆತ್ತುಕೊಂಡು ಇಲ್ಲಿನ ಹತ್ತಾಕು ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸಿ ರಸ್ತೆಯನ್ನು ಕೂಡಲೇ ಡಾಂಬರೀಕರಣಗೊಳಿಸಿ ಓಡಾಡಲು ಅನುಕೂಲ ಕಲ್ಪಿಸಿಕೊಡಲು ಮುಂದಾಗಬೇಕಿದೆ.ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ:ಈ ಭಾಗದ ಜನರಿಗೆ ತೀರಾ ಅಗತ್ಯವಾಗಿರುವ ಮೂಲಸೌಕರ್ಯಗಳಲ್ಲಿ ರಸ್ತೆ ಸೌಕರ್ಯವೂ ಒಂದು. ನಾವು ಕಳೆದ 15-20 ವರ್ಷಗಳಿಂದ ಜನ ಪ್ರತಿನಿಧಿಗಳಿಗೆ, ಸಂಬಂಧಪಟ್ಟ ಇಲಾಖೆಗಳಿಗೆ ಅನೇಕ ಬಾರಿ ಮನವಿ ನೀಡುತ್ತಲೇ ಬಂದಿದ್ದೇವೆ. ವಾರ್ಡ, ಗ್ರಾಮಸಭೆ, ಜನಸಂಪರ್ಕ ಸಭೆಗಳಲ್ಲಿ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ ನಮ್ಮ ಮನವಿ, ಬೇಡಿಕೆಗಳಿಗೆ ಇದುವರೆಗೂ ಯಾರು ಸ್ಪಂದಿಸಿಲ್ಲ. ಸಮಸ್ಯೆ ಮಾತ್ರ ಸಮಸ್ಯೆಯಾಗಿಯೇ ಉಳಿದಿದೆ. ನಮ್ಮ ಅನೇಕ ದಶಕಗಳ ಕನಸು ಕನಸಾಗಿಯೇ ಉಳಿದಿದೆ. ಇನ್ನಾದರೂ ಸರ್ಕಾರ ನಮ್ಮಸಮಸ್ಯೆಗಳಿಗೆ ಸ್ಪಂದಿಸಿ ರಸ್ತೆ ಅಭಿವೃದ್ಧಿ ಪಡಿಸಲು ಮುಂದಾಗಬೇಕಿದೆ.

---ಸುಬ್ರಮಣ್ಯ ಶಿರೂರು.

ಗ್ರಾಮಸ್ಥರಸ್ತೆ ದುರಸ್ಥಿ ಭಾಗ್ಯ ಕಲ್ಪಿಸಿಕೊಡಿ.ನಮಗೆ ಈ ಹದಗೆಟ್ಟ ರಸ್ತೆಯಲ್ಲಿ ಓಡಾಡಲು ಕಷ್ಟವಾಗುತ್ತಿದೆ. ವೃದ್ದರು,ಶಾಲಾ ಕಾಲೇಜು ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು ಆಸ್ಪತ್ರೆ, ಶಾಲಾ ಕಾಲೇಜುಗಳಿಗೆ ಓಡಾಡಲು ಸಾಕಷ್ಟು ಪ್ರಯಾಸ ಪಡಬೇಕಿದೆ. ವಾಹನ ಓಡಾಟವಿರಲಿ, ಕಾಲ್ನಡಿಗೆಯಲ್ಲಿ ಓಡಾಡುವುದು ಬಲುಕಷ್ಟವಾಗಿದೆ. ವಾಹನ ಚಾಲಕರು ಈ ರಸ್ತೆಯಲ್ಲಿ ಬರಲು ಹಿಂದೇಟು ಹಾಕುವಂತಾಗಿದೆ. ಇನ್ನಾದರೂ ನಮ್ಮ ಸಮಸ್ಯೆಗೆ ಸ್ಪಂದಿಸಿ ಸರ್ಕಾರ ಈ ರಸ್ತೆ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡಬೇಕಿದೆ.

----ಶ್ರೀಕಂಠಯ್ಯ.ಶಿರೂರು.

ಗ್ರಾಮಸ್ಥ.3 ಶ್ರೀ ಚಿತ್ರ 1-ಶೃಂಗೇರಿ ತಾಲೂಕಿನ ಗುಬ್ಬಗೋಡು ಶಿರೂರು ಹೊನ್ನವಳ್ಲಿ ಸಂಪರ್ಕ ರಸ್ತೆ ಹೊಂಡುಗುಂಡಿಗಳಿಂದ ಕೂಡಿರುವುದು.3 ಶ್ರೀ ಚಿತ್ರ 2-ರಸ್ತೆ ಸಂಪೂರ್ಣ ಹದಗೆಟ್ಟಿರುವುದು.3 ಶ್ರೀ ಚಿತ್ರ 3-ಸುಬ್ರಮಣ್ಯ.ಶಿರೂರು.ಗ್ರಾಮಸ್ಥ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪತ್ರಕರ್ತ ತಗಡೂರಿಗೆ ಲೋಹಿಯಾ ಪ್ರಶಸ್ತಿ ಪ್ರದಾನ
ಕನ್ನಡದಲ್ಲಿ ರೈಲ್ವೆ ಪರೀಕ್ಷೆಗೆ ಇಲಾಖೆ : ಕರವೇ