ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ತಾಲೂಕಿನ ಕಸಬಾ ಹೋಬಳಿ ಗುಳಸಿಂದ ಗ್ರಾಮದಲ್ಲಿ ಶ್ರೀರಾಘವೇಂದ್ರ ಸ್ವಾಮಿಯವರ ಪ್ರತೀಕ ಬೃಂದಾವನಕ್ಕೆ ಪ್ರಾಣ ಪ್ರತಿಷ್ಠಾಪನೆ ಮಾಡಿ, ನೆರೆದಿದ್ದ ಭಕ್ತರಿಗೆ ಆಶೀರ್ವಚನ ನೀಡಿದರು. ರೋಗಿಗಳ ಸಂಖ್ಯೆ ಹೆಚ್ಚು ಇರುವ ಜಾಗದಲ್ಲಿ ಹಣ ಸಂಪಾದನೆಗಾಗಿ ಆಸ್ಪತ್ರೆ ನಿರ್ಮಾಣ ಮಾಡುತ್ತಾರೆ, ಆಸ್ಪತ್ರೆ ನಿರ್ಮಾಣದ ಬದಲಾಗಿ ಜನತೆ ಉತ್ತಮವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಹೇಗೆ ಎನ್ನುವ ಮಾರ್ಗದರ್ಶನ ನೀಡುವ ಕೇಂದ್ರಗಳನ್ನು ತೆರೆಯಬೇಕು ಎಂದರು.
ಪೊಲೀಸ್ ಠಾಣೆಗಳು ಇರುವ ಜಾಗದಲ್ಲಿ ಅಪಾರಾಧಿಗಳ ಸಂಖ್ಯೆ ಹೆಚ್ಚುತ್ತದೆ ಹೊರತು ಯುವ ಜನತೆ ಅಪರಾದ ಮಾಡದಂತೆ ಮಾರ್ಗದರ್ಶವನ್ನು ನೀಡುವ ಕೆಲಸ ಪೊಲೀಸರು ಮಾಡುವುದಿಲ್ಲ, ಅದೇ ದೇವಾಲಯಗಳು ಸಮಾಜದ ಶಾಂತಿ ಹಾಗೂ ಮನುಕುಲದ ನೆಮ್ಮದಿಗಾಗಿ ಇವೆ, ಯಾವ ವ್ಯಕ್ತಿ ನಿತ್ಯ ದೇವಾಲಯಕ್ಕೆ ಬರುವುದನ್ನು ರೂಢಿಸಿಕೊಳ್ಳುತ್ತಾರೆ. ಆತನಿಗೆ ಆರೋಗ್ಯ ವೃದ್ಧಿಯಾಗುವುದಲ್ಲದೆ, ಸಂಸ್ಕಾರವನ್ನು ರೂಢಿಸುತ್ತದೆ ಎಂದರು.ರಾಯರ ಸೇವೆಯಿಂದ ಮನುಷ್ಯ ಜನ್ಮದಲ್ಲಿ ಮುಕ್ತಿ ಹೊಂದಬಹುದು, ದೇವರು ಎಲ್ಲಿದ್ದಾನೆ ಎನ್ನುವ ಬದಲಾಗಿ ದೇವರನ್ನು ಕಾಣುವ ತವಕ ನಮ್ಮಲ್ಲಿ ಬರಬೇಕು. ಯಾವ ವ್ಯಕ್ತಿ ನಿಷ್ಕಲ್ಮ ಶವಾಗಿ ದೇವರ ಧ್ಯಾನವನ್ನು ಮಾಡುತ್ತಾರೆ ಅಂತವರಿಗೆ ಅಂತರಂಗದಲ್ಲಿ ದೇವರನ್ನು ಕಾಣಬಹುದು, ಸಾಕಷ್ಟು ಮಂದಿ ರಾಘವೇಂದ್ರ ಸ್ವಾಮಿಯನ್ನು ಕಂಡಿದ್ದಾರೆ. ಭಕ್ತರ ನಿಷ್ಕಲ್ಮ ಶ ಭಕ್ತಿಗೆ ರಾಯರು ಒಲಿಯುತ್ತಾರೆ ಎಂದರು.
ಮಕ್ಕಳನ್ನು ಶಿಕ್ಷಣ ವಂತರನ್ನಾಗಿ ಮಾಡುತ್ತಿದ್ದೇವೆ ಹೊರತು ಅವರನ್ನು ಜ್ಞಾನವಂತರನ್ನಾಗಿ ಮಾಡುತ್ತಿಲ್ಲ, ಗುರುಹಿರಿಯರಿಗೆ ಗೌರವ ಕೊಡುವುದನ್ನು ರೂಢಿಸುತ್ತಿಲ್ಲ, ಸನಾತನ ಧರ್ಮದ ಬಗ್ಗೆ ತಿಳಿಸುತ್ತಿಲ್ಲ, ಈ ಮಣ್ಣಿನ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಕಲಿಸುತ್ತಿಲ್ಲ ಹಾಗಾಗಿ ಸಮಾಜದಲ್ಲಿ ಅಹಿತಕರ ಘಟನೆಗಳು ನಡೆಯುತ್ತಿವೆ ಯಾವ ವ್ಯಕ್ತಿ ಧರ್ಮಕ್ಕೆ ಬೆಲೆ ಕೊಡುತ್ತಾನೆ ಆತನಿಂದ ಸಮಾಜ ಸೇವೆಯನ್ನು ನಿರೀಕ್ಷಿಸಬಹುದು, ಇದನ್ನು ಮನಗಂಡು ಮಕ್ಕಳಿಗೆ ಶಿಕ್ಷಣದ ಜೊತೆಯಲ್ಲಿ ಸಂಸ್ಕಾರ ಕಲಿಸಲು ಮುಂದಾಗಿ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಸಿ.ಕೆ.ಕುಸುಮಾರಾಣಿ ಮಾತನಾಡಿ, ಆಧುನಿಕ ಹಾಗೂ ವಿಜ್ಞಾನದ ಯುಗದಲ್ಲಿ ಧರ್ಮ ಉಳಿದಿರುವುದು ಭಾರತದಲ್ಲಿ ಮಾತ್ರ, ದೇಶದ ಪ್ರತಿ ಗ್ರಾಮಗಳಲ್ಲಿ ಮಂದಿರಗಳು ಇವೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ ಹಾಗಾಗಿ ಜನತೆ ನೆಮ್ಮದಿಯಿಂದ ಬದುಕು ಕಟ್ಟಿಕೊಂಡಿದ್ದಾರೆ, ಭಾರತೀಯರು ಶಾಂತಿ ಪ್ರಿಯರು ವಿಶ್ವವೇ ಶಾಂತಿಯಿಂದ ಇರಬೇಕು ಎನ್ನುವುದನ್ನು ಬಯಸುತ್ತಾರೆ ಎಂದರು.
ತಾಲೂಕು ಅರ್ಚಕ ಸಂಘದ ಅಧ್ಯಕ್ಷ ಶ್ರೀಧರ್‌ಮೂರ್ತಿ, ರಾಜ್ಯಪ್ರಶಸ್ತಿ ವಿಜೇತ ಲೋಕೇಶ್ ದಾಸ್, ಬೆಂಗಳೂರಿನ ಕಾಮಧೇನು ಕ್ಷೇತ್ರದ ಗುರುಶೇಷ, ಮಂಜುಳಮ್ಮ, ಸುಲೋಚನಾ, ಚರಣ್‌ರಾಜ್, ಮಮತಾ, ಪ್ರಕಾಶ್, ಗುಳಸಿಂದ ಗ್ರಾಮದ ಮುಖ್ಯಸ್ಥರು ಉಪಸ್ಥಿತರಿದ್ದರು.