ಹಿರೇಕೆರೂರು: ದೀಪವು ಕತ್ತಲೆಯನ್ನು ಕಳೆದು ಬೆಳಕನ್ನು ನೀಡುತ್ತದೆ. ಹಾಗೆಯೇ ದೀಪದಾನವು ಕೂಡ ನಮ್ಮ ಎಲ್ಲಾ ಸಮಸ್ಯೆಗಳನ್ನು ದೂರಾಗಿಸಿ ನಮ್ಮ ಬದುಕನ್ನು ಬಂಗಾರವಾಗುವಂತೆ ಮಾಡುತ್ತದೆ. ದೀಪದಾನಜ್ಞಾನವನ್ನು ಒಬ್ಬರಿಂದ ಇನ್ನೊಬ್ಬರಿಗಾದರೆ ಎರೆಯುವುದು ಎಂದರ್ಥ. ಹಾಗೆಯೇ ಪ್ರಶಿಕ್ಷಣಾರ್ಥಿಗಳು ತಾವು ಕಲಿತಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆ ಎರೆಯುವುದರ ಮೂಖಾಂತರ ಸಮಾಜದ ಸತ್ಪ್ರಜೆಗಳಾಗಿ ಬಾಳಬೇಕೆಂದು ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಸ್. ಪಾಟೀಲ ಹೇಳಿದರು.ತಾಲೂಕು ವಿದ್ಯಾವರ್ಧಕ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಹಿರೇಕೆರೂರು ಆಶ್ರಯದಲ್ಲಿ ನಡೆಯುತ್ತಿರುವ ಶ್ರೀ ತರಳಬಾಳು ಜಗದ್ಗುರು ಶಿಕ್ಷಣ ಮಹಾವಿದ್ಯಾಲಯದ ೨೦೨೩-೨೪ನೇ ಸಾಲಿನ ಬಿ.ಇಡಿ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದೀಪದಾನ ಸಮಾರಂಭವನ್ನುಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಯು ತಮ್ಮಜೀವನದಲ್ಲಿ ದೊಡ್ಡದಾದ ಗುರಿಯೊಂದಿಗೆ ಕನಸು ಕಾಣಬೇಕು, ಆ ಕನಸು ನಿರಂತರ ಅಧ್ಯಯನ ಹಾಗೂ ಕಠಿಣ ಪರಿಶ್ರಮದಿಂದ ನನಸು ಮಾಡಿಕೊಳ್ಳಬೇಕೆಂದು ಕರೆ ನೀಡಿದರು ಸಮಾರಂಭದ ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಶ್ರೀಧರ ಮಾತನಾಡಿ, ಶಿಕ್ಷಕರ ಅರ್ಹತೆಗಳು, ವೃತ್ತಿದಕ್ಷತೆ, ವೃತ್ತಿಗೌರವ ಹಾಗೂ ವಿದ್ಯಾರ್ಥಿಗಳೊಂದಿಗೆ ಅವರ ಸಂಬಂಧ ಬಗ್ಗೆ ಕುರಿತು ಸುದೀರ್ಘಉಪನ್ಯಾಸ ನೀಡಿದರು.ಆಡಳಿತಾಧಿಕಾರಿ ಎಸ್. ವೀರಭದ್ರಯ್ಯನವರು ಮಾತನಾಡಿ, ಭಾವಿ ಶಿಕ್ಷಕರಾಗಿರುವ ತಾವುಗಳು ಮುಂದೆ ಶಿಕ್ಷಕ ವೃತ್ತಿಯನ್ನು ಗೌರವಿಸುವ ನಿಟ್ಟಿನಲ್ಲಿ ಸಾಗಬೇಕು. ಅಂತಹ ಅರ್ಹತೆಗಳನ್ನು ತಾವು ಹೊಂದಬೇಕು. ಶಿಕ್ಷಕ ವೃತ್ತಿಗೆ ನಮ್ಮದೇಶದಲ್ಲಿ ಒಂದು ಅತ್ಯುನ್ನತ ಸ್ಥಾನವಿದೆ. ಆ ಸ್ಥಾನವನ್ನು ನಿಭಾಯಿಸುವ ದಿಸೆಯಲ್ಲಿ ಸಾಗಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿ ಮಾತು ಹೇಳಿದರು.ಈ ವೇಳೆ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಎಸ್.ಬಿ. ತಿಪ್ಪಣ್ಣನವರು, ಪ್ರಾಚಾರ್ಯ ಬಿ.ಪಿ. ಹಳ್ಳೇರ, ದಾನೇಶ ತುಮ್ಮಿನಕಟ್ಟಿ, ಎಸ್.ಬಿ. ಪಾಟೀಲ, ಎಂ.ಎಸ್. ಬೆಟ್ಟಳ್ಳಿ, ಸತೀಶ ಬಣಕಾರ, ಹನುಮಂತಪ್ಪ ಎನ್. ಕೆ., ಶಬಿನಾಭಾನು, ಶ್ರೀಭಾರತಿ, ನಂದಾ ಹೊಂಡದ, ದೀಕ್ಷಿತಾ ಮಠದ, ಫಾತಿಮಾ, ಹರ್ಷಿತಾ ಡಿ. ವಿದ್ಯಾರ್ಥಿಗಳು ಸಿಬ್ಬಂದಿಗಳು ಇದ್ದರು,