ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಕಾನೂನು ಪಾಲನೆ ಮಾಡಬೇಕು
ಹದಿ ಹರೆಯದ ವಯಸ್ಸಿನಲ್ಲಿ ಆಕರ್ಷಣೆಗೆ ಒಳಗಾಗದೆ ವಿದ್ಯಾಭ್ಯಾಸದ ಕಡೆ ಹೆಚ್ಚಿನ ಗಮನ ಕೊಡಬೇಕು. ಜೀವನದಲ್ಲಿ ಉತ್ತಮ ಉದ್ಯೋಗ, ಹೆಸರು ಪಡೆದುಕೊಂಡರೆ ಜೀವನ ಉತ್ತಮವಾಗಿರುತ್ತದೆ, ಮತ್ತು ವಿದ್ಯಾರ್ಥಿಗಳು ಕಾನೂನು ಪಾಲನೆ ಮಾಡಬೇಕು, ಯಾವುದೇ ತೊಂದರೆ ಉಂಟಾದರೆ ತಕ್ಷಣ ಪೊಲೀಸ್ ಸಹಾಯವಾಣಿ ಗೆ ಕರೆ ಮಾಡಿದರೆ ತಕ್ಷಣ ನೆರವಿಗೆ ಧಾವಿಸುತ್ತಾರೆ . ಕಾನೂನು ಎಲ್ಲರಿಗೂ ಸಮಾನ ಅವಕಾಶವನ್ನು ಒದಗಿಸಿದೆ ಎಂದು ತಿಳಿಸಿದರು. ವಕೀಲ ರಾಮಚಂದ್ರ ಮಾತನಾಡಿ, ಸಂವಿಧಾನ ಬಡವ ಮತ್ತು ಶ್ರೀಮಂತ ಎನ್ನುವ ಯಾವುದೇ ಭೇದ ಭಾವವಿಲ್ಲದೆ ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತವೆ. ಅವಶ್ಯಕತೆ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮಹಿಳೆಯರು, ಮಕ್ಕಳು ಮತ್ತು ಅಲ್ಪಸಂಖ್ಯಾತರಿಗೆ ಯಾವುದೇ ಶುಲ್ಕವಿಲ್ಲದೆ, ಸರ್ಕಾರವೇ ಉತ್ತಮ ವಕೀಲರನ್ನು ನೇಮಿಸಿ, ಉಚಿತವಾಗಿ ಕಾನೂನು ಸೇವೆಗಳನ್ನು ಒದಗಿಸುತ್ತದೆ ಲೋಕ್ ಅದಾಲತ್ ಬಳಸಿಕೊಳ್ಳಿನ್ಯಾಯಾಲಯಗಳಲ್ಲಿ ಲೋಕ್ ಅದಾಲತ್ ನಡೆಸಿ ಕಾಲ ಕಾಲಕ್ಕೆ ರಾಜೀ ಸಂಧಾನಗಳ ಮೂಲಕ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಗುತ್ತದೆ. ಇದರಿಂದ ಸಂಭಂದಗಳು ಗಟ್ಟಿಗೊಳ್ಳುತ್ತವೆ. ಸಂವಿಧಾನದಲ್ಲಿ ದೇಶದ ಎಲ್ಲಾ ನಾಗರಿಕರಿಗೂ ಸಮಾನವಾದ ನ್ಯಾಯ ಸಿಗುತ್ತದೆ ಎಂದು ತಿಳಿಸಿದರು. ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ರಮೇಶ್ ಗುಗ್ಗರಿ ಮಾತನಾಡಿ, ಪೋಕ್ಸೋ ಖಾಯಿದೆ ಹೆಣ್ಣು ಮತ್ತು ಗಂಡು ಮಕ್ಕಳಿಗೆ ಇಬ್ಬರಿಗೂ ಸಮನಾಗಿ ಅನ್ವಯಿಸುತ್ತದೆ, ಹೆಣ್ಣು ಮಕ್ಕಳನ್ನು ಕೆಟ್ಟ ದೃಷ್ಟಿ ಯಿಂದ ನೋಡುವುದು, ಮುಟ್ಟುವುದು, ಎಲ್ಲವು ಸಹ ಅಪರಾಧ ಒಮ್ಮೆ ಸಿಲುಕಿದರೆ ಶಿಕ್ಷೆ ಖಚಿತ. ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿ ಬಹಳ ಎಚ್ಚರಿಕೆಯಿಂದರ ಬೇಕು. ನಮ್ಮ ತಾಲ್ಲೂಕಿನಲ್ಲಿ ಅತೀ ಹೆಚ್ಚು ಪೋಕ್ಸೋ ಕೇಸ್ ಗಳು ದಾಖಲಾಗಿರುವುದು ಬಹಳ ಕಳವಳಕಾರಿಯಾಗಿದೆ. ಮಾದಕವಸ್ತುಗಳಿಂದ ದೂರವಿರಿ
ಹೆಣ್ಣು ಮಕ್ಕಳು 18 ವರ್ಷಕ್ಕಿಂತ ಮುಂಚಿತವಾಗಿ ಮದುವೆಯಾಗುವುದು ಕಾನೂನು ಬಾಹೀರ. ಮತ್ತು ಹುಡುಗರು ಮಾದಕ ವಸ್ತುಗಳ ಬಗ್ಗೆ ಆಕರ್ಷಿತರಾಗದೆ ಬಹಳ ಎಚ್ಚರಿಕೆಯಿಂದ ಇರಬೇಕು ಮತ್ತು ಇದರ ಬಗ್ಗೆ ಎಲ್ಲಾ ಕಡೆ ಅರಿವು ಮೂಡಿಸಲಾಗುತ್ತಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸಹ ಮನೆಗಳಲ್ಲಿ ಇದರ ಬಗ್ಗೆ ತಿಳಿಸಬೇಕು. ಶಾಲಾ ಪಠ್ಯ ಜ್ಞಾನದ ಜೊತೆಗೆ ಕಾನೂನಿನ ಅರಿವನ್ನು ಪಡೆದು ಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಇದೇ ಸಂದರ್ಭದಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀನಿವಾಸ್ ಮೂರ್ತಿ, ಪ್ರಾoಶುಪಾಲ, ಶ್ರೀನಿವಾಸ್ ಸರ್ಕಾರಿ ಅಭಿಯೋಜಕರು ಫಯಾಜ್ ಪಟೇಲ್, ಶಿಕ್ಷಕ ಶಂಕರ್ ರೆಡ್ಡಿ, ವಕೀಲರಾದ ದಯಾನಂದ್, ಜಗದೀಶ್, ಮಂಜುಳಾ, ಆನಂದ್, ಶಮೀರ್ ಮುಂತಾದವರು ಉಪಸ್ಥಿತರಿದ್ದರು.