- ಹರಿಹರ ಪಿಎಸ್‌ಐ ಶ್ರೀಪತಿ ಗಿನ್ನಿ ಸಲಹೆ । ವಲ್ಲಭಬಾಯಿ ಪಟೇಲ್ ಸಾಧನೆ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ
- - -ಕನ್ನಡಪ್ರಭ ವಾರ್ತೆ ಹರಿಹರ
ಭವಿಷ್ಯದ ಹಿತದೃಷ್ಠಿಯಿಂದ ವಿದ್ಯಾರ್ಥಿಗಳು, ಯುವಜನತೆ ಸಾಧಕರ ಜೀವನ, ಹೋರಾಟ ಕ್ರಮವನ್ನು ಪ್ರೇರಣೆಯಾಗಿಸಿಕೊಳ್ಳಬೇಕು ಎಂದು ಪಿಎಸ್‌ಐ ಶ್ರೀಪತಿ ಗಿನ್ನಿ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವಿಭಾಗ ಹಾಗೂ ದಾವಣಗೆರೆ ಗ್ರಾಮಾಂತರ ಉಪ ವಿಭಾಗದ ಹರಿಹರ ನಗರ ಪೋಲಿಸ್ ಠಾಣೆ ಆಶ್ರಯದಲ್ಲಿ ಗುರುವಾರ ಸರ್ದಾರ್ ವಲ್ಲಭಬಾಯಿ ಪಟೇಲ್ ಜನ್ಮದಿನ ಪ್ರಯುಕ್ತ ‘ರಾಷ್ರೀಯ ಏಕತಾ ದಿವಸ್’ ಕಾರ್ಯಕ್ರಮದಲ್ಲಿ ವಲ್ಲಭಬಾಯಿ ಪಟೇಲ್ ಸಾಧನೆ ಕುರಿತು ವಿದ್ಯಾರ್ಥಿಗಳಿಗೆ ನಡೆದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಯುವಜನತೆಯಲ್ಲಿ ಮೊಬೈಲ್ ಬಳಕೆ ಹೆಚ್ಚಾಗುತ್ತಿದೆ. ಇದು ಹಲವು ಬಗೆಯ ಅಪರಾಧ ಪ್ರಕರಣಗಳಿಗೆ ನಾಂದಿಯಾಗುತ್ತಿವೆ. ಆಧುನಿಕ ಉಪರಣಗಳು ಮತ್ತು ಸೌಲಭ್ಯಗಳನ್ನು ಎಚ್ಚರಿಕೆಯಿಂದ ಬಳಸಿಕೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ, ಶೈಕ್ಷಣಿಕ ಉನ್ನತಿಗೆ ಉಪಯೋಗವಾಗುವ ರೀತಿಯಲ್ಲೇ ಮೊಬೈಲ್‌ನ ಅನುಕೂಲ ಪಡೆಯಬೇಕು. ಅನಾವಶ್ಯಕವಾಗಿ ಜೀವನಕ್ಕೆ ಕುತ್ತು ಬರುವ ಸನ್ನಿವೇಶಗಳನ್ನು ತಂದುಕೊಳ್ಳಬೇಡಿ ಎಂದು ಎಚ್ಚರಿಸಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎನ್. ರಮೇಶ್ ಮಾತನಾಡಿ, ದಾರ್ಶನಿಕರ ಜೀವಮಾನ ಸಾಧನೆ ಯುವಕರಿಗೆ ಮಾದರಿಯಾಗಲಿ. ಅವರ ಸಿದ್ಧಾಂತ, ತತ್ವ- ಆದರ್ಶಗಳಂತೆ ನಡೆದು ಯುವಜನರು ಭವಿಷ್ಯ ಸಾರ್ಥಕಪಡಿಸಿಕೊಳ್ಳಲಿ ಎಂದು ಹೇಳಿದರು.
ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಬಿ.ಎ. ವಿದ್ಯಾರ್ಥಿನಿ ಅರ್ಪಿತಾ ಎನ್.ಎಚ್. ಪ್ರಥಮ ಸ್ಥಾನ ಪಡೆದರು. ಬಿ.ಎ. ಅಂತಿಮ ವರ್ಷದ ಶೃತಿ ದ್ವಿತೀಯ ಹಾಗೂ ದ್ವಿತೀಯ ವರ್ಷದ ಬಿ.ಎ. ವಿದ್ಯಾರ್ಥಿನಿ ಲಕ್ಷ್ಮೀ ಎಂ. ತೃತೀಯ ಬಹುಮಾನ ತಮ್ಮದಾಗಿಸಿಕೊಂಡರು.ಎಎಸ್‌ಐ ಮಹಮದ್ ಜಬೀಉಲ್ಲಾ, ದಿಲೀಪ್, ಸಹ ಸಂಯೋಜಕ ಅಬ್ದುಲ್ ಬಷೀರ್, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಮಮತಾ ಎಚ್. ಸಾಹುಕಾರ ಹಾಗೂ ಇತರರು ಉಪಸ್ಥಿತರಿದ್ದರು. ಕಾಲೇಜಿನ ಐ.ಕ್ಯೂ.ಎಸ್.ಸಿ. ಹಾಗೂ ಸಾಂಸ್ಕೃತಿಕ ವಿಭಾಗದ ಸಂಯೋಜಕ ಡಾ. ಅನಂತನಾಗ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿನಿ ಅರ್ಪಿತಾ ಪ್ರಾರ್ಥಿಸಿ, ಎನ್‌ಎಸ್‌ಎಸ್ ಕಾರ್ಯಕ್ರಮ ಅಧಿಕಾರಿ ಹನುಮಂತಪ್ಪ ಕೆ.ವೈ. ಸ್ವಾಗತಿಸಿ, ವಂದಿಸಿದರು.
- - --30HRR.01:
ಸರ್ದಾರ್ ವಲ್ಲಭಬಾಯಿ ಪಟೇಲ್ ಸಾಧನೆ ಕುರಿತು ವಿದ್ಯಾರ್ಥಿಗಳಿಗೆ ನಡೆದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.