ಪೌಷ್ಟಿಕ ಆಹಾರ ಗೋದಾಮಿನಲ್ಲಿ ಸಂಗ್ರಹಿಸಿ ಕಾಳ ಸಂತೆಯಲ್ಲಿ ಮಾರುತ್ತಿರುವ ಕಾಂಗ್ರೆಸ್ ಕಾರ್ಯಕರ್ತೆ ಬತುಲ್ ಕಿಲ್ಲದಾರಳನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಲಾಯಿತು.
ಹುಬ್ಬಳ್ಳಿ: ಅಂಗನವಾಡಿ ಮಕ್ಕಳಿಗೆ ಹಾಗೂ ಬಾಣಂತಿಯರಿಗೆ ವಿತರಿಸಬೇಕಾದ ಪೌಷ್ಟಿಕ ಆಹಾರದ ಪ್ಯಾಕೆಟ್‌ಗಳನ್ನು ಅಕ್ರಮವಾಗಿ ಸಂಗ್ರಹಸಿಟ್ಟಿದ್ದ ಪ್ರಮುಖ ಆರೋಪಿ ಬಂಧಿಸಲು ಒತ್ತಾಯಿಸಿ ಮಂಗಳವಾರ ಬಿಜೆಪಿ ಮಹಿಳಾ ಮೋರ್ಚಾದಿಂದ ಹಳೇ ಹುಬ್ಬಳ್ಳಿಯ ದುರ್ಗದಬೈಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಪಾಲಿಕೆ ಸದಸ್ಯ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವು ಮೆಣಸಿನಕಾಯಿ ಮಾತನಾಡಿ, ಆಹಾರವಿರುವುದೇ ಹಸಿವು ನೀಗಿಸಲು. ಆದರೆ, ವಸ್ತುಸ್ಥಿತಿಯತ್ತ ಇಣುಕಿದರೆ ಒಂದು ಕಡೆ ಆಹಾರವಿದ್ದರೂ ಹಸಿದ ಹೊಟ್ಟೆಯನ್ನು ತಲುಪದೆ, ಅಂಗನವಾಡಿ ಕೇಂದ್ರಗಳಿಗೆ ಬರುವಂತಹ ಮಕ್ಕಳಿಗೆ ಅಗತ್ಯವಾದ ಪೌಷ್ಟಿಕ ಆಹಾರ ಗೋದಾಮಿನಲ್ಲಿ ಸಂಗ್ರಹಿಸಿ ಕಾಳ ಸಂತೆಯಲ್ಲಿ ಮಾರುತ್ತಿರುವ ಕಾಂಗ್ರೆಸ್ ಕಾರ್ಯಕರ್ತೆ ಬತುಲ್ ಕಿಲ್ಲದಾರಳನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು. ಇಲ್ಲದೇ ಹೋದಲ್ಲಿ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮಹಿಳಾ ಮೋರ್ಚಾ ಅಧ್ಯಕ್ಷೆ ಪ್ರತಿಭಾ ಪವಾರ, ಕ್ಷೇತ್ರದ ಅಧ್ಯಕ್ಷ ಮಂಜುನಾಥ ಕಾಟಕರ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪೂಜಾ ರಾಯಕರ, ಪೂರ್ಣಿಮಾ ಶಿಂಧೆ, ಅನುರಾಧ ಚಿಲ್ಲಾಳ, ಪಾಲಿಕೆ ಸದಸ್ಯೆ ರಾಧಾಬಾಯಿ ಸಫಾರೆ, ಶೀಲಾ ಕಾಟಕರ, ಸುಮಿತ್ರಾ ಗುಂಜಾಳ, ಶಾಂತ ಹಿರೇಮಠ, ಪ್ರೀತಿ ಲದ್ವಾ, ಪ್ರಭು ನವಲಗುಂದಮಠ, ಸಂತೋಷ ಅರಕೇರಿ, ರಾಜು ಜರ್ತಾಘರ್, ರಂಗಾ ಬದ್ದಿ, ರಾಜು ಕೊರ್ಯಾಣಮಠ, ಗೋಪಾಲ್ ಕಲ್ಲೂರ, ಲಕ್ಷ್ಮೀಕಾಂತ ಘೋಡಕೆ ಸೇರಿದಂತೆ ಹಲವರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.