ಶಿರಸಿ: ಅನಾಗರಿಕ ಸಂಸ್ಕೃತಿಯನ್ನು ದೂರಗೊಳಿಸಿ, ಜನರಲ್ಲಿ ಜಾಗೃತಿಗೊಳಿಸಿ ಸಮಾಜವನ್ನು ಒಳತಿನಡೆಗೆ ಕೊಂಡೊಯ್ಯುವ ಕೆಲಸವನ್ನು ಮಠ ಮಾಡುತ್ತದೆ ಎಂದು ಬಣ್ಣದ ಮಠದ ಶಿವಲಿಂಗ ಸ್ವಾಮೀಜಿ ನುಡಿದರು.
ನುಡಿದಂತೆ ನಡೆದ ಗುರುಸಿದ್ದರು ಎಲ್ಲರನ್ನೂ ಒಪ್ಪಿ ಅಪ್ಪಿಕೊಂಡು ಆಶೀರ್ವದಿಸಿದರು. ಅವರ ನೆರಳಲ್ಲಿ ನಡೆಯುತ್ತಿರುವ ಈ ಮಠವು ಶಿಷ್ಯರ ಪಾಲಿನ ವಚನ ಮಠವಾಗಿ ಶ್ರದ್ಧಾಕೇಂದ್ರವಾಗಿ ಬೆಳೆಯುತ್ತಿದೆ. ಗುರುಸಿದ್ದರು ಜ್ಞಾನವಂತರು ಮತ್ತು ಸಿದ್ಧ ಪುರುಷರು. ಇಂತವ ಮಹಾನ್ ಚೇತನರನ್ನು ಹೀಗೆ ಒಟ್ಟಾಗಿ ಸ್ಮರಿಸುವುದು ನಮ್ಮನ್ನು ನಾವು ಜಾಗೃತಿಗೊಳಿಸಿಕೊಂಡಂತೆ. ಮಠಗಳು ಸಮಾಜ ಕಟ್ಟುವ ಕೆಲಸಮಾಡಬೇಕು. ಆದರೆ ಮಠಗಳೇ ದಾರಿ ತಪ್ಪಿದರೇ ಸಮಾಜವನ್ನು ಶಿಕ್ಷಿಸುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಪಾಶ್ಚಿಮಾತ್ಯ ಸಂಸ್ಕೃತಿಯಿಂದ ಹಾಳಾಗುತ್ತಿರುವ ಇಂದಿನ ಸಮಾಜವನ್ನು ಸರಿದಾರಿಗೆ ತರಲು ಮಠ-ಮಂದಿರಗಳು ಮುಂದೆ ನಿಂತು ಯುವ ಸಮುದಾಯದಲ್ಲಿ ಸಂಸ್ಕಾರದ ಬೀಜ ಬಿತ್ತುವ ಕೆಲಸಮಾಡಬೇಕಿದೆ ಎಂದರು.
ಬೆಳ್ಳಾವಿ ಕಾರದೇಶ್ವರ ಮಠದ ಕಾರದ ವೀರಬಸವ ಸ್ವಾಮೀಜಿ ಆಶಿರ್ವಚನ ನೀಡಿ, ಗುರುಸಿದ್ದರು ಮಹಾ ಮಹೀಮರು. ಅವರ ಆಶಿರ್ವಾದವೇ ಈ ಬಣ್ಣದ ಮಠ ಇಡೀ ಸಮಾಜದ ಕಣ್ಣಾಗಿ ಬೆಳೆಯುತ್ತಿದೆ. ಅವರು ಸ್ವರೂಪದಲ್ಲಿಯೇ ಶಿವಲಿಂಗ ಸ್ವಾಮೀಜಿ ಮುನ್ನೆಡೆಯುತ್ತಿರುವುದು ಅವರ ಶಿಶ್ಯರಾದ ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದರು.ಶಿವಲಿಂಗ ಸ್ವಾಮಿಗಳಿಗೆ ಬೆನ್ನಲುಬಾಗಿ ನಿಂತವರೇ ಬಣ್ಣದ ಮಠದ ವ್ಯವಸ್ಥಾಪಕ ಎಸ್.ಬಿ. ಹಿರೇಮಠ. ಅವರು ಈ ಮಠದ ಎಳಿಗೆಗಾಗಿ ತಮ್ಮ ಸರ್ವಸ್ವವನ್ನೇ ತ್ಯಾಗಮಾಡಿದ್ದಾರೆ. ಅವರ ಶಿಸ್ತು ಬದ್ಧವಾದ ಜೀವನ ಎಲ್ಲರಿಗೂ ಮಾದರಿಯಾಗಬೇಕೆಂದರು.
ಶಿಸ್ತಿನ ಜೀವನ ಆರೋಗ್ಯವನ್ನು ಕಾಪಾಡುತ್ತದೆ. ಸೂರ್ಯನ ಕಿರಣ ಸೇವಿಸುವುದು, ಹಿತಮಿತವಾದ ಆಹಾರ, ಮಿತವಾದ ವ್ಯಾಯಾಮ, ವಿಶ್ರಾಂತಿ, ಒಳ್ಳೆಯ ಸ್ನೇಹಿತರಿಂದಲೂ ನಮ್ಮ ಆರೋಗ್ಯವನ್ನು ಕಾಪಾಡಬಹುದು ಎಂದರು.ವೇದಿಕೆಯಲ್ಲಿ ಗುಬ್ಬಿ ಮಠದ ಅಟವಿ ಚನ್ನಬಸವ ಸ್ವಾಮೀಜಿ, ಚಿಕ್ಕತೊಟ್ಟಿಲಕೇರಿಯ ಅಟವಿ ಮಲ್ಲಿಕಾರ್ಜುನ ಸ್ವಾಮೀಜಿ, ವೀರಶೈವ ಸಮಾಜದ ಹಿರಿಯರಾದ ಕೆ.ಎಸ್.ಶೆಟ್ಟರ್ ಮತ್ತಿತರರು ಉಪಸ್ಥಿತರಿದ್ದರು.
ಬಣ್ಣದ ಮಠದ ವ್ಯವಸ್ಥಾಪಕ ಎಸ್.ಬಿ. ಹಿರೇಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭಾ ಕಾರ್ಯಕ್ರಮ ಮುಗಿದ ಬಳಿಕ ಲಿಂಗೈಕ್ಯರ ಗದ್ದುಗಿಗೆ ಆರತಿ ಬೆಳಗಿ ಪೂಜೆ ಸಲ್ಲಿಸಿ ದಾಸೋಹ ನಡೆಸಲಾಯಿತು. ನೂರಾರು ಭಕ್ತರು ದಾಸೋಹದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ ೭ ಗಂಟೆಯಿಂದ ಖಾನಳ್ಳಿಮಠದ ವೇದಮೂರ್ತಿ ಪರಮೇಶ್ವರಯ್ಯ ಇವರಿಂದ ಲಿಂಗೈಕ್ಯ ಶ್ರೀಗಳವರ ಕೃರ್ತ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಸಲಾಯಿತು. ಬೆಳಗ್ಗೆ ೧೦ ಗಂಟೆಯಿಂದ ಬಣ್ಣದ ಮಠ ಶ್ರೀ ಗುರುಸಿದ್ದೇಶ್ವರ ಮಹಿಳಾ ಮಂಡಳದಿಂದ ಭಜನಾ ಕಾರ್ಯಕ್ರಮ ನಡೆಸಲಾಯಿತು.