ಆಚಾರ್ಯತ್ರಯರ ಸಂದೇಶ ಅನುಕರಣೀಯ: ಶಾಸಕ ಟಿ.ಎಸ್. ಶ್ರೀವತ್ಸ

KannadaprabhaNewsNetwork |  
Published : May 02, 2025, 11:46 PM IST
36 | Kannada Prabha

ಸಾರಾಂಶ

ಶ್ರೀ ರಾಮಾನುಜರು 10ನೇ ಶತಮಾನದಲ್ಲಿ ವಿಶಿಷ್ಟಾದ್ವೈತ ಸಿದ್ದಾಂತದ ಮೂಲಕ ಕರ್ನಾಟಕದಲ್ಲೂ ಪ್ರಚಾರಪಡಿಸಿ ಸಾಮರಸ್ಯ ಸಾಮಿಜಿಕ ದೀಕ್ಷೆ ನೀಡಿ ಹಿಂದೂ ಧರ್ಮಕ್ಕೆ ಭದ್ರ ಬುನಾದಿ ಹಾಕಿದರು, ಕೆರೆತಣ್ಣೂರು, ಮೇಲುಕೋಟೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದರು.

ಕನ್ನಡಪ್ರಭ ವಾರ್ತೆ ಮೈಸೂರುಶ್ರೀ ಶಂಕರ, ರಾಮಾನುಜರು, ಮಧ್ವಾಚಾರ್ಯರ ಜೀವನ ಸಂದೇಶಗಳು ಸನಾತನ ಧರ್ಮ ಜಾಗೃತಿ, ಜ್ಞಾನ ಸಂಪಾದನೆ, ಆಧ್ಯಾತ್ಮಿಕ ಮಾರ್ಗಕ್ಕೆ ಬುನಾದಿ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಅಭಿಪ್ರಾಯಪಟ್ಟರು.ನಗರದ ಬಿಜೆಪಿ ಕಚೇರಿಯಲ್ಲಿ ಅದಿ ಜಗದ್ಗುರು ಶಂಕರಾಚಾರ್ಯರ ಮತ್ತು ರಾಮಾನುಜಾಚಾರ್ಯರ ಜಯಂತಿ ಅಂಗವಾಗಿ ಶ್ರೀಶಂಕರ ರಾಮನುಜರು ಮಧ್ವಾಚಾರ್ಯರ ಆಚಾರ್ಯತ್ರಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.ಶಂಕರ ರಾಮಾನುಜ ಮಧ್ವಚಾರ್ಯರ ಸಂದೇಶ ಕೊಡುಗೆಗಳು ಯಾವುದೇ ಒಂದು ಜಾತಿಗೆ ಪ್ರದೇಶಕ್ಕೆ ಸೀಮಿತವಾದುದಲ್ಲ, ಶ್ರೀರಂಗಂನಲ್ಲಿ ಇಂದಿಗೂ ರಾಮಾನುಜಾಚಾರ್ಯರ ತೊಂಡನೂರು ನಂಬಿ ನಾರಾಯಣ, ಮೇಲುಕೋಟೆ ಚೆಲುವನಾರಾಯಣ, ತಲಕಾಡು ಕೀರ್ತಿ ನಾರಾಯಣ, ಬೇಲೂರು ಚೆನ್ನಕೇಶವ, ಗದಗ ವೀರನಾರಾಯಣ ಐದು ಪಂಚನಾರಾಯಣಾ ಕ್ಷೇತ್ರಗಳನ್ನು ಕರ್ನಾಟಕದಲ್ಲಿ ಜೀರ್ಣೊದ್ದಾರಗೊಳ್ಳಿಸಿ ಜ್ಞಾನದ ಮಾರ್ಗವನ್ನ ಸಾರಿದ್ದಾರೆ, ಸಹಸ್ರಮಾನಗಳೇ ಕಳೆದರು ಸಹ ಆಚಾರ್ಯತ್ರಯರನ್ನ ಸ್ಮರಿಸಿ ಸಮಸ್ಥ ಹಿಂದೂ ಜನಾಂಗವೇ ಅರಿತು ನಡೆಯಬೇಕಿದೆ ಎಂದರು.ಬಿಜೆಪಿ ಮುಖಂಡ ಎನ್.ವಿ. ಫಣೀಶ್ ಮಾತನಾಡಿ, ಆದಿ ಶಂಕರಾಚಾರ್ಯರು 5ನೇ ವರ್ಷದಲ್ಲೆ ಉಪನಯನ ಮಾಡಿಕೊಂಡು 8ನೇ ವರ್ಷದಲ್ಲಿ ಚತುರ್ವೇದ ಜ್ಞಾನ ಪಡೆದುಕೊಂಡರು ಕೇವಲ 32 ವರ್ಷಗಳಲ್ಲಿ ವಿಜಯಯಾತ್ರೆ ಮೂಲಕ ದೇಶವನ್ನ ಮೂರು ಬಾರಿ ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ದ್ವಾತಕದಿಂದ ಪೂರಿ ಜಗನ್ನಾಥ್ ಕ್ಷೇತ್ರದ ವರೆಗೂ ಕಾಲ್ನಡಿಗೆಯಲ್ಲಿ ಪರ್ಯಟನೆ ಮಾಡಿ ಯಾವುದೆ ತಂತ್ರಜ್ಞಾನ ಮಾದ್ಯಮವಿಲ್ಲದ 7ನೇ ಶತಮಾನದ ಯುಗದಲ್ಲಿ ಸನಾತನ ಹಿಂದೂ ಧರ್ಮವನ್ನ ವೇದ ಉಪನಿಷತ್ ಸಂಸ್ಕೃತಿ ಅದ್ವೈತ ಸಿದ್ದಾಂತ ಪ್ರತಿಪಾದಿಸಿದರು ಎಂದರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷ ನಂ. ಶ್ರೀಕಂಠಕುಮಾರ್ ಮಾತನಾಡಿ, ಶ್ರೀ ರಾಮಾನುಜರು 10ನೇ ಶತಮಾನದಲ್ಲಿ ವಿಶಿಷ್ಟಾದ್ವೈತ ಸಿದ್ದಾಂತದ ಮೂಲಕ ಕರ್ನಾಟಕದಲ್ಲೂ ಪ್ರಚಾರಪಡಿಸಿ ಸಾಮರಸ್ಯ ಸಾಮಿಜಿಕ ದೀಕ್ಷೆ ನೀಡಿ ಹಿಂದೂ ಧರ್ಮಕ್ಕೆ ಭದ್ರ ಬುನಾದಿ ಹಾಕಿದರು, ಕೆರೆತಣ್ಣೂರು, ಮೇಲುಕೋಟೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದರು. ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಕೇಬಲ್ ಮಹೇಶ್, ಬಿ.ಎಂ. ರಘು, ಕ್ಷ ಉಪಾಧ್ಯಕ್ಷ ಜೋಗಿ ಮಂಜು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಲಕ್ಷ್ಮೀದೇವಿ, ಮುಖಂಡರಾದ ಸುರೇಶ್ ಬಾಬು, ಬ್ರಾಹ್ಮಣ ಸಂಘದ ಗ್ರಾಮಾಂತರ ಅಧ್ಯಕ್ಷರಾದ ಗೋಪಾಲ್ ರಾವ್,ನಗರಪಾಲಿಕಾ ಮಾಜಿ ಸದಸ್ಯರಾದ ಮ.ವಿ. ರಾಮಪ್ರಸಾದ್, ಪ್ರಮೀಳಾ ಭರತ್, ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರದ ಅಧ್ಯಕ್ಷ ರಾಕೇಶ್ ಭಟ್, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎಚ್.ಎನ್. ಶ್ರೀಧರ್ಮೂರ್ತಿ, ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಅಜಯ್ ಶಾಸ್ತ್ರಿ, ಜಗದೀಶ್, ಕೆ.ಎಂ. ನಿಶಾಂತ್, ಟಿ.ಎಸ್. ಅರುಣ್, ಸುಚೇಂದ್ರ, ಚಕ್ರಪಾಣಿ, ವಿಘ್ನೇಶ್ವರ ಭಟ್, ಸುದರ್ಶನ್, ಜಗದೀಶ್, ನವೀನ್ ಕುಮಾರ್, ನಾಗರಾಜ್, ಶಂಕರ್ ನಾರಾಯಣ್ ಶಾಸ್ತ್ರಿ, ಶ್ರೀಕಾಂತ್ ಕಶ್ಯಪ್, ಸಂತೋಷ್, ಸಿದ್ದೇಶ್, ಶಿವರಾಜ್, ಕಾರ್ತಿಕ್ ಇದ್ದರು.

PREV