ಐಟಿ ದಾಳಿ ಹಣ ಭ್ರಷ್ಟಾಚಾರಕ್ಕೆ ಪುಷ್ಟಿ: ಪಾಟೀಲ್ ಆರೋಪ

KannadaprabhaNewsNetwork |  
Published : Oct 19, 2023, 12:46 AM IST
ಹುಣಸಗಿ ಪಟ್ಟಣದ ತಹಸೀಲ್ ಕಚೇರಿ ಎದುರು ಬಿಜೆಪಿ ತಾಲೂಕು ಸಮಿತಿ ವತಿಯಿಂದ ಪ್ರತಿಬಟನೆ ನಡೆಯಿತು. | Kannada Prabha

ಸಾರಾಂಶ

ಐಟಿ ದಾಳಿ ಹಣ ಭ್ರಷ್ಟಾಚಾರಕ್ಕೆ ಪುಷ್ಟಿ: ಪಾಟೀಲ್ ಆರೋಪರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ । ಕಾಂಗ್ರೆಸ್‌ನಿಂದ ರಾಜ್ಯ ಲೂಟಿ

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ । ಕಾಂಗ್ರೆಸ್‌ನಿಂದ ರಾಜ್ಯ ಲೂಟಿ ಕನ್ನಡಪ್ರಭ ವಾರ್ತೆ ಹುಣಸಗಿ ಬೆಂಗಳೂರಿನಲ್ಲಿ ಅಂಬಿಕಾಪತಿ ಮನೆಯಲ್ಲಿ 42 ಕೋಟಿ ರು.ಗಳನ್ನು ಆದಾಯ ತೆರಿಗೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಭ್ರಷ್ಟಾಚಾರಕ್ಕೆ ಪುಷ್ಟಿ ನೀಡುತ್ತಿದೆ. ಇದರ ಸೂಕ್ತ ತನಿಖೆಯಾಗಬೇಕೆಂದು ಬಿಜೆಪಿ ಜಿಲ್ಲಾ ವಕ್ತಾರ ಎಚ್.ಸಿ. ಪಾಟೀಲ್ ಆಗ್ರಹಿಸಿದರು. ಪಟ್ಟಣದ ತಹಸೀಲ್ದಾರ್ ಕಾರ್ಯಾಲಯ ಎದುರು ಬಿಜೆಪಿ ತಾಲೂಕು ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಐಟಿ ರೇಡ್‌ನಲ್ಲಿ 42 ಕೋಟಿ ರು. ಸಿಕ್ಕಿದ್ದು ನೋಡಿದರೆ, ರಾಜ್ಯವೇ ಲೂಟಿ ಹೊಡೆಯುವಂತಿದೆ. ಇದು ಭ್ರಷ್ಟಾಚಾರಕ್ಕೆ ಪುಷ್ಟಿ ನೀಡುತ್ತಿದ್ದು, ಇದರ ಸಂಪೂರ್ಣ ತನಿಖೆಯಾಗಬೇಕೆಂದು ಆಗ್ರಹಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಆಶ್ವಾಸನೆಗಳು ಸುಳ್ಳಾಗಿವೆ. ಏಳು ತಾಸು ವಿದ್ಯುತ್ ಪೂರೈಕೆ ಬದಲಾಗಿ ಲೋಡ್ ಶೆಡ್ಡಿಂಗ್‌ ನೆಪದಲ್ಲಿ ಕೇವಲ 5 ತಾಸು ವಿದ್ಯುತ್ ಪೂರೈಸುತ್ತಿದೆ. ಹೀಗಾಗಿ ರೈತಾಪಿ ಜನರು ಹಾಗೂ ಗ್ರಾಮೀಣಗಳಲ್ಲಿ ವಿದ್ಯುತ್ ಕಣ್ಣಮುಚ್ಚಾಲೆ ಆಗುತ್ತಿದ್ದು, ಜನ ಬೇಸತ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ತಾಲೂಕಾಧ್ಯಕ್ಷ ಮೇಲಪ್ಪ ಗುಳಗಿ ಮಾತನಾಡಿ, ರಾಜ್ಯದ ಜನ ಈಗಾಗಲೇ ಬರಗಾಲ ಎದುರಿಸುತ್ತಿದ್ದಾರೆ. ರೈತರ ಸಮಸ್ಯೆ ಜರ್ಜರಿತವಾಗಿದ್ದು, ಇಂತಹ ಸಂದರ್ಭದಲ್ಲಿ ಸರಕಾರ ರೈತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ನಂತರ ರಾಜ್ಯಪಾಲರಿಗೆ ಬರೆದ ಮನವಿಯನ್ನು ತಹಸೀಲ್ದಾರ್ ಬಸಲಿಂಗಪ್ಪ ನೈಕೋಡಿ ಅವರಿಗೆ ಸಲ್ಲಿಸಲಾಯಿತು. ಬಿಜೆಪಿ ಮುಖಂಡ ವೀರೇಶ ಸಾಹುಕಾರ ಚಿಂಚೋಳಿ, ಸಂಗಣ್ಣ ವೈಲಿ, ಜಿಪಂ ಮಾಜಿ ಸದಸ್ಯ ಬಸವರಾಜಸ್ವಾಮಿ ಸ್ಥಾವರಮಠ, ಎಂ.ಎಸ್. ಚಂದಾ, ವಿರುಪಾಕ್ಷಯ್ಯ ಸ್ಥಾವರಮಠ, ಶಿವನಗೌಡ ಪಾಟೀಲ್, ರಾಜಶೇಖರ ದೇಸಾಯಿ, ಭೀಮನಗೌಡ ಪೊಲೀಸ್‌ಪಾಟೀಲ್, ಪ್ರಭುಗೌಡ ಪಾಟೀಲ್, ಸುರೇಶ ದೊರೆ, ಗೌಡಪ್ಪ ಬಾಲಗೌಡ್ರು, ಹಣಮಂತ್ರಾಯಗೌಡ ಕುಪ್ಪಿ, ಲೋಹಿತ ದೊಡ್ಮನಿ ಇತರರಿದ್ದರು. --- 18ವೈಡಿಆರ್4: ಹುಣಸಗಿ ಪಟ್ಟಣದ ತಹಸೀಲ್ದಾರ್‌ ಕಚೇರಿ ಎದುರು ಬಿಜೆಪಿ ತಾಲೂಕು ಸಮಿತಿ ವತಿಯಿಂದ ಪ್ರತಿಬಟನೆ ನಡೆಯಿತು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ