ಮೂರು ಮಕ್ಕಳನ್ನು ಬೀದಿಪಾಲು ಮಾಡಿ ಮತ್ತೊಬ್ಬನ ಜತೆ ತಾಯಿ ವಾಸ!

KannadaprabhaNewsNetwork | Published : Jun 19, 2024 1:07 AM

ಸಾರಾಂಶ

ಮೂವರು ಹೆತ್ತ ಗಂಡು ಮಕ್ಕಳನ್ನು ಬೀದಿಪಾಲು ಮಾಡಿ 40 ವರ್ಷದ ತಾಯಿಯೊಬ್ಬಳು 25 ವರ್ಷದ ಯುವಕನೊಂದಿಗೆ ಓಡಿ ಹೋದ ವಿಚಿತ್ರ ಘಟನೆ ಬೆಳಗಾವಿಯ ಗಣೇಶಪುರದಲ್ಲಿ ನಡೆದಿದೆ. ತಮ್ಮ ತಾಯಿ ಕಾಣೆಯಾಗಿದ್ದಾಳೆಂದು ಮಕ್ಕಳು ಕ್ಯಾಂಪ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳಗಾವಿ

ಮೂವರು ಹೆತ್ತ ಗಂಡು ಮಕ್ಕಳನ್ನು ಬೀದಿಪಾಲು ಮಾಡಿ 40 ವರ್ಷದ ತಾಯಿಯೊಬ್ಬಳು 25 ವರ್ಷದ ಯುವಕನೊಂದಿಗೆ ಓಡಿ ಹೋದ ವಿಚಿತ್ರ ಘಟನೆ ಬೆಳಗಾವಿಯ ಗಣೇಶಪುರದಲ್ಲಿ ನಡೆದಿದೆ. ತಮ್ಮ ತಾಯಿ ಕಾಣೆಯಾಗಿದ್ದಾಳೆಂದು ಮಕ್ಕಳು ಕ್ಯಾಂಪ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ತಾಯಿ ಇಲ್ಲದೇ ಇರುವುದರಿಂದ ಬೀದಿಗೆ ಬಿದ್ದಿರುವ ಮೂವರು ಮಕ್ಕಳು ತಾಯಿಗಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಹೆತ್ತ ಮಕ್ಕಳನ್ನು ಬೀದಿಗೆ ಬಿಟ್ಟು ಬೇರೆ ಯುವಕನ ಜೊತೆಯಲ್ಲೇ ಮಹಿಳೆ ನೆಲೆಸಿದ್ದಾಳೆ. ಸರ್ಕಾರಿ ನೌಕರಿಯಲ್ಲಿದ್ದ ತಂದೆಯ ಅಕಾಲಿಕ ನಿಧನದ ಹಿನ್ನೆಲೆಯಲ್ಲಿ ಅನುಕಂಪದ ನೌಕರಿಯನ್ನು ಪಡೆದಿರುವ ತಾಯಿಗೆ ಈಗ ತಾನು ಹೆತ್ತ ಮಕ್ಕಳೇ ಬೇಡವಾಗಿದ್ದಾರೆ. 10, 15 ಮತ್ತು 19 ವರ್ಷದ ಗಂಡು ಮಕ್ಕಳು ಮಾತ್ರ ತಾಯಿಗಾಗಿ ಪರಿತಪಿಸುತ್ತಿದ್ದಾರೆ.ಕೆಲ ತಿಂಗಳಿಂದ ಮಕ್ಕಳನ್ನು ಬಿಟ್ಟು ಯುವಕನ ಜೊತೆಗೆ ಈ ಮಹಿಳೆ ನೆಲೆಸಿದ್ದಾಳೆ. ತಾಯಿ ಮನೆಗೆ ಬಾರದಿರುವುದರಿಂದ ಕಂಗಾಲಾಗಿರುವ ಮಕ್ಕಳು ತಾಯಿ ಕಾಣೆಯಾಗಿದ್ದಾಳೆ. ಹುಡುಕಿಕೊಡುವಂತೆ ಕ್ಯಾಂಪ್‌ ಠಾಣೆಗೆ ದೂರು ನೀಡಿದ್ದಾರೆ. ತಾಯಿ ಬೇರೊಬ್ಬನ ಜೊತೆಗೆ ನೆಲೆಸಿರುವುದು ವಿಷಯ ಬಳಿಕ ಗೊತ್ತಾಗಿದೆ. ಆತನ ಬಿಟ್ಟು ತಮ್ಮ ಜೊತೆಗೆ ಬರುವಂತೆ ಮಕ್ಕಳು ಹಲವು ಬಾರಿ ಮನವಿ ಮಾಡಿದರೂ ನಾನು ಮಾತ್ರ ನಿಮ್ಮೊಟ್ಟಿಗೆ ಬರುವುದಿಲ್ಲ ಎಂದು ತಾಯಿ ಹಠ ಹಿಡಿದಿದ್ದಾಳೆ.ಮನೆ ಬಾಡಿಗೆ ಕಟ್ಟದ್ದಕ್ಕೆ ಮಕ್ಕಳನ್ನು ಮನೆ ಮಾಲೀಕರು ಹೊರ ಹಾಕಿದ್ದು, ಮೂವರು ಗಂಡು ಮಕ್ಕಳು ಸದ್ಯ ಅಜ್ಜಿಯ ಆಶ್ರಯದಲ್ಲಿದ್ದಾರೆ. ತಾಯಿ ನಮ್ಮ ಜೊತೆಗೆ ಬಂದರೆ ನಾವೇ ಶಾಲೆ, ಕಾಲೇಜು ಬಿಟ್ಟು ಕೆಲಸಕ್ಕೆ ಹೋಗಿ ಸಾಕುತ್ತೇವೆ ಎಂದು ಮಕ್ಕಳು ಪರಿ ಪರಿಯಾಗಿ ಬೇಡಿಕೊಂಡರೂ ತಾಯಿ ಹೃದಯ ಮಾತ್ರ ಕರಗುತ್ತಿಲ್ಲ. ಇದು ನಮ್ಮ ವೈಯಕ್ತಿಕ ವಿಚಾರ, ನೀವ್ಯಾರು ಎಂದು ತಾಯಿ ಪ್ರಶ್ನಿಸುತ್ತಾಳೆ.

ವಿನಾಯಕ ಕೋಲ್ಕಾರ ಎಂಬುವನೇ ತಾಯಿಯನ್ನು ಪುಸಲಾಯಿಸಿದ್ದಾನೆ ಎಂದು ಮಕ್ಕಳು ದೂರಿದ್ದಾರೆ. ಈ ಹಿಂದೆ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದರಿಂದ ಚಪ್ಪಲಿಯಿಂದ ಆತನನ್ನು ಮಹಿಳೆ ಹೊಡೆದಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದವು. ಈತನ ಮೋಹದ ಬಲೆಗೆ ಸಿಕ್ಕಿ ತಾಯಿ ಹೆತ್ತ ಮಕ್ಕಳನ್ನೇ ತೊರೆದಿದ್ದಾಳೆ. ತಮ್ಮ ತಾಯಿಗಾಗಿ ಮಕ್ಕಳು ಪೊಲೀಸರು ಮೊರೆ ಹೋಗಿದ್ದಾರೆ.

Share this article