ಕನ್ನಡಪ್ರಭ ವಾರ್ತೆ ಮೈಸೂರು
ಕುವೆಂಪುನಗರ ಉದಯರವಿ ರಸ್ತೆಯ ಪ್ರಮತಿ ಹಿಲ್ ವ್ಯೂ ಅಕಾಡೆಮಿಯಲ್ಲಿ ಶುಕ್ರವಾರ ನಡೆದ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿ, ‘ಸಂಗೊಳ್ಳಿ ರಾಯಣ್ಣ’ ನೃತ್ಯ ನಾಟಕ ಎಲ್ಲ ಮಕ್ಕಳ ಹೃದಯ ಮುಟ್ಟಿತು. ಅಲ್ಲದೇ, ಸ್ವಾತಂತ್ರ್ಯ ಹೋರಾಟದ ಮಹತ್ವವನ್ನು ಇಂದಿನ ಯುವಪೀಳಿಗೆಗೆ ಅರ್ಥಮಾಡಿಸಿತು. ಇದಕ್ಕೆ ಮಾತೃಭಾಷೆ ಕಾರಣ ಎಂದರು.
ಇಂದಿನ ಯುವಜನಾಂಗ ಕನ್ನಡ ಭಾಷೆಗೂ ನಮಗೂ ಸಂಬಂಧವೇ ಇಲ್ಲ. ಇಂಗ್ಲಿಷ್ ನಮಗೆ ಬದುಕು ಕೊಡುತ್ತದೆ ಎಂಬಂತೆ ವರ್ತಿಸುತ್ತಿದ್ದಾರೆ. ಆದರೆ, ಮಾತೃಭಾಷೆಯ ಸೊಬಗು, ಅದು ಕೊಡುವ ಆನಂದವೇ ಬೇರೆ. ಬದುಕಿನ ಅನಿವಾರ್ಯತೆಗಾಗಿ ಹೊರದೇಶಗಳಿಗೆ ಹೋಗಿರುವವರು ಇಲ್ಲಿಗೆ ಬಂದಾಗ ಮಾತೃಭಾಷೆಯ ಶಕ್ತಿ ಅರಿವಾಗುತ್ತದೆ. ಸಾವಿರಾರು ವರ್ಷಗಳಿಂದ ಇರುವ ನಮ್ಮ ಭಾಷೆ ನೂರಾರು ವರ್ಷಗಳಲ್ಲಿ ಕಳೆದು ಹೋಗಬಾರದು. ನಾವು ಭಾಷೆ ಬಳಕೆ ಮಾಡದಿದ್ದಲ್ಲಿ ತಮಿಳುನಾಡಿನ ಊಟಿಯ ಕನ್ನಡಿಗರು ಕನ್ನಡ ಲಿಪಿ ಮರೆತಂತೆ, ಭಾಷೆ ತಮಿಳ್ಗನ್ನಡವಾದಂತೆ ಆಗುತ್ತದೆ ಎಂದು ಅವರು ಎಚ್ಚರಿಸಿದರು.ಭಾಷೆಯ ಸಂಬಂಧಗಳನ್ನು ಕಳೆದುಕೊಂಡರೆ ಬಾಂಧವ್ಯ ಕಳೆದುಕೊಂಡಂತೆ. ನಮ್ಮ ಭಾಷೆಯನ್ನು ಪ್ರೀತಿಸಿ ಎಂದರೆ ಬೇರೆ ಭಾಷೆಯನ್ನು ದ್ವೇಷಿಸಿ ಎಂಬಂತೆ ಇಲ್ಲ. ನಮ್ಮ ನಾಡು- ನುಡಿಯನ್ನು ನಾವು ಉಳಿಸಿ, ಬೆಳೆಸಬೇಕು. ಈ ದಿಸೆಯಲ್ಲಿ ಯುವಜನತೆ ಜಾಗರೂಕತೆಯಿಂದ ಹೆಜ್ಜೆ ಹಾಕಬೇಕು ಎಂದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮುಖ್ಯಅತಿಥಿಯಾಗಿದ್ದರು. ಖಜಾಂಚಿ ಎಸ್. ಫಣಿರಾಜ್, ಪಿಯು ಕಾಲೇಜು ಪ್ರಾಂಶುಪಾಲ ಹಾಗೂ ಶೈಕ್ಷಣಿಕ ಅಧಿಕಾರಿ ಸಿ.ಎಸ್.ಸುದರ್ಶನ್, ಮುಖ್ಯ ಶಿಕ್ಷಕಿವಿ.ಆರ್.ಜರಿಜಾ ಇದ್ದರು. ರಸಪ್ರಶ್ನೆ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.