ತಾಲೂಕು ಕಚೇರಿಯಲ್ಲಿ ಸಿಬ್ಬಂದಿಯ ಕಾರ್ಯವೈಖರಿಯನ್ನು ಹೆಚ್ಚಿಸಲು ಮತ್ತು ಜನಸಾಮಾನ್ಯರ ಕಷ್ಟಗಳನ್ನು ತಿಳಿಸುವ ಸಲುವಾಗಿ ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಸಿಬ್ಬಂದಿಗೆ ತಬರನಕಥೆ ಸಿನಿಮಾವನ್ನು ತೋರಿಸಿದರು.
ಬಂಗಾರಪೇಟೆ: ತಾಲೂಕು ಕಚೇರಿಯಲ್ಲಿ ಸಿಬ್ಬಂದಿಯ ಕಾರ್ಯವೈಖರಿಯನ್ನು ಹೆಚ್ಚಿಸಲು ಮತ್ತು ಜನಸಾಮಾನ್ಯರ ಕಷ್ಟಗಳನ್ನು ತಿಳಿಸುವ ಸಲುವಾಗಿ ತಹಸೀಲ್ದಾರ್ ಎಸ್.ವೆಂಕಟೇಶಪ್ಪ ಸಿಬ್ಬಂದಿಗೆ ತಬರನಕಥೆ ಸಿನಿಮಾವನ್ನು ತೋರಿಸಿದರು.
ಈ ವೇಳೆ ತಹಸೀಲ್ದಾರ್ ಮಾತನಾಡಿ, ಸಾರ್ವಜನಿಕರು ಪಿಂಚಣಿ, ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಸೇರಿದಂತೆ ಇತರೆ ಕಾರ್ಯಗಳಿಗೆ ತಾಲೂಕು ಕಚೇರಿ ಮತ್ತು ನಾಡಕಚೇರಿಗಳಿಗೆ ಬರುತ್ತಾರೆ. ಆದರೆ ಕೆಲವು ಸಿಬ್ಬಂದಿಯ ನಿರ್ಲಕ್ಷ ಹಾಗೂ ಜವಾಬ್ದಾರಿತನದಿಂದ ಸಕಾಲಕ್ಕೆ ಪ್ರಮಾಣ ಪತ್ರಗಳು ದೊರಕದೆ ಸಮಸ್ಯೆಗೆ ಸಿಲುಕುತ್ತಿದ್ದಾರೆ. ಇದರೊಟ್ಟಿಗೆ ವಿವಿಧ ಕಾರಣಗಳಿಂದ ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ತಲುಪಿಸಲು ವಿಳಂಭವಾಗುತ್ತಿರುವ ಕಾರಣ ಜನರು ದಿನನಿತ್ಯ ಕಚೇರಿಗಳಿಗೆ ಅಲೆದಾಡುತ್ತಿರುವುದು ಕಂಡು ಬಂದಿದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಹಾಗೂ ಸಿಬ್ಬಂದಿಗಳ ಕಾರ್ಯವೈಖರಿಯನ್ನು ಇನ್ನಷ್ಟು ಉತ್ತಮಗೊಳಿಸಲು ಹಾಗೂ ವೇಗವನ್ನು ಹೆಚ್ಚಿಸಲು ನಾನಾ ಬಗೆಯಲ್ಲಿ ತಯಾರಿ ನೀಡಲಾಗುತ್ತದೆ. ಇದಕ್ಕೆ ಪೂರಕ ಎಂಬಂತೆ ಸೋಮವಾರ ಬೆಳಿಗ್ಗೆ ೭:೩೦ ಕ್ಕೆ ಎಲ್ಲಾ ಸಿಬ್ಬಂದಿಯನ್ನು ಕಚೇರಿಗೆ ಕರೆಸಿ ತಬರನಕಥೆ ಸಿನಿಮಾವನ್ನು ತೋರಿಸಲಾಯಿತು.
ಕಥೆಯಲ್ಲಿ ಒಬ್ಬ ನೌಕರಿಯಲ್ಲಿದ್ದಂತ ವ್ಯಕ್ತಿ ನಿವೃತ್ತಿಯಾದ ನಂತರ ಪಿಂಚಣಿಯನ್ನು ಪಡೆಯಲು ಅನುಭವಿಸಿದ ಕಷ್ಟ. ಇದರೊಟ್ಟಿಗೆ ಮನೆಯಲ್ಲಿ ಇದ್ದಂತಹ ಪರಿಸ್ಥಿತಿಯನ್ನು ಸಿನಿಮಾದಲ್ಲಿ ಕಂಡು ಜನರಿಗೆ ಒಳ್ಳೆಯ ಕೆಲಸ ಮಾಡಬೇಕು ಎಂದು ಸಿಬ್ಬಂದಿಯಲ್ಲಿ ಹೊಸ ಬಗೆಯ ಚೈತ್ಯನ್ನ ಬಂದಿದೆ ಎಂದರು.
ಸಿನಿಮಾ ನೋಡಿದ ನಂತರ ಎಲ್ಲರೂ ಸಹ ಮುಂದಿನ ದಿನಗಳಲ್ಲಿ ಜನರ ಸಮಸ್ಯೆಗಳಿಗೆ ಶೀಘ್ರವಾಗಿ ಸ್ಪಂದಿಸುವುದಾಗಿ ತಿಳಿಸಿದ್ದಾರೆ. ಕೆಲವು ಸಿಬ್ಬಂದಿಯಲ್ಲಿ ಬದಲಾವಣೆ ಕಂಡು ಬಂದಿದ್ದು, ಅವರ ನಡುವಳಿಕೆ ಸಹ ಬದಲಾಗಿದೆ ಎಂದರೆ ತಪ್ಪಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರ ಕಡತಗಳನ್ನು ಸಹ ಆಗಿಂದ್ದಾಗೆ ವಿಲೇವಾರು ಮಾಡಲು ಬೇಕಾದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ. ಇನ್ನೂ ಹಲವು ಸಿಬ್ಬಂದಿಗಳಲ್ಲಿ ಪರಿವರ್ತನೆ ಆಗಬೇಕಿರುವ ಕಾರಣ ಕೆಲಸದ ಸಮಯಕ್ಕೂ ಮುಂಚೆ ಆಗಾಗ ತಬರನಕಥೆಯಂತಹ ಸಿನಿಮಾಗಳನ್ನು ತೋರಿಸಲಾಗುತ್ತದೆ. ಈ ರೀತಿಯಲ್ಲಾದರೂ ಪರಿವರ್ತನೆಗೊಂಡು ಜನರಿಗೆ ಒಳ್ಳೆ ಕೆಲಸ ಮಾಡುವಂತಾಗಲಿ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.