-ಚಳ್ಳಕೆರೆ ನಗರಸಭೆಯ ತುರ್ತು ಸಭೆಯಲ್ಲಿ ವಿರೋಧ ಪಕ್ಷದ ಸದಸ್ಯರ ಆರೋಪ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರಸಭೆ ವ್ಯಾಪ್ತಿಯ ವಿವಿಧ ಯೋಜನೆಗಳ ಅಡಿ ಕರೆದಿರುವ ಟೆಂಡರ್‌ಗಳ ಆರ್ಥಿಕ ಬಿಡ್‌ಗೆ ಅನುಮೋದನೆ ನೀಡಬೇಕು. ವಿದ್ಯುತ್ ದೀಪ, ವಿವಿಧ ಪಾರ್ಕ್‌ಗಳ ಅಭಿವೃದ್ಧಿಗೆ ಸಹಕಾರ ನೀಡುವಂತೆ ಒತ್ತಾಯಿಸಿ ನಗರಸಭೆ ಅಧ್ಯಕ್ಷೆ ಜೈತುಂಬಿ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯಲ್ಲಿ ಸದಸ್ಯರು ಮನವಿ ಮಾಡಿದರು.ನಗರಸಭೆಯ ೨೦೨೧, ೨೨,೨೩, ೨೪ರ ಶೇ.೫ರ ಅನುದಾನದಲ್ಲಿ ೭೩ ಜನ ವಿಕಲಚೇತನರಿಗೆ ತ್ರಿಚಕ್ರವಾಹನ ನೀಡಲು ಅವಕಾಶವಿದ್ದು, ಈ ಬಗ್ಗೆ ಸದಸ್ಯರು ಚರ್ಚೆ ನಡೆಸಿ ಮಾರ್ಗದರ್ಶನ ನೀಡುವಂತೆ ತಿಳಿಸಿದರು.
ಪ್ರಾರಂಭದಲ್ಲಿ ವಿರೋಧ ಪಕ್ಷದ ಸದಸ್ಯರಾದ ಎಸ್.ಜಯಣ್ಣ, ಸಿ.ಶ್ರೀನಿವಾಸ್, ವೆಂಕಟೇಶ್, ವಿ.ವೈ.ಪ್ರಮೋದ್, ಸಿ.ಎಂ.ವಿಶುಕುಮಾರ್, ತಿಪ್ಪಕ್ಕ, ಸಾಕಮ್ಮ, ಪಾಲಮ್ಮ, ಕವಿತಾನಾಯಕಿ, ನಿರ್ಮಲ ಅವರು ವಿಕಲಚೇತನರಿಗೆ ೪೧.೭೭ ಲಕ್ಷ ವೆಚ್ಚದಲ್ಲಿ ತ್ರಿಚಕ್ರವಾಹನ ನೀಡುವ ಬಗ್ಗೆ ವಿಷಯ ಪ್ರಸ್ತಾಪಿಸಿದ್ದೀರಿ, ಕೇವಲ ಒಬ್ಬ ಗುತ್ತಿಗೆದಾರ ಮಾತ್ರ ಟೆಂಡರ್ ಸಲ್ಲಿಸಿದ್ದು, ಇದು ನಿಯಮಬಾಹಿರ. ಆದ್ದರಿಂದ ಮರುಟೆಂಡರ್ ಮಾಡಿ ಎಂದು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಪೌರಾಯುಕ್ತರು ಮಾಹಿತಿ ನೀಡಿ, ನಗರದ ೩೧ ವಾರ್ಡ್ ಗಳಿಗೆ ಎಲ್‌ಇಡಿ ಲೈಟ್ ಅವಳಡಿಸಲು ೨೦ ಲಕ್ಷ ಹಣ ಮೀಸಲಿದ್ದು, ಇದನ್ನು ಅನುಮೋದಿಸುವಂತೆ ಮನವಿ ಮಾಡಿದರು. ಇದಕ್ಕೆ ಆಕ್ಷೇಪಿಸಿದ ಆಡಳಿತ ಪಕ್ಷದ ಸದಸ್ಯರಾದ ಎಂ.ಜೆ.ರಾಘವೇಂದ್ರ, ರಮೇಶ್‌ಗೌಡ, ವಿರೋಧ ಪಕ್ಷದ ಜಯಣ್ಣ, ವಿಶುಕುಮಾರ್, ಪ್ರಮೋದ್, ಶ್ರೀನಿವಾಸ್, ಎಲ್‌ಇಡಿ ಬಲ್ಬ್ ಗಳು ಕೆಲ ದಿನಗಳು ಮಾತ್ರ ಬರಲಿವೆ, ಅದರ ಬದಲಿ ಸೋಡಿಯಂ ಲೈಟ್ ಅಳವಡಿಸುವಂತೆ ಮನವಿ ಮಾಡಿದರು.
ಉಪಾಧ್ಯಕ್ಷೆ ಸುಜಾತ ಸೇರಿದಂತೆ ಆಡಳಿತ ಹಾಗೂ ವಿರೋಧ ಪಕ್ಷದ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು. ಪ್ರಾರಂಭದಲ್ಲಿ ಪೌರಾಯುಕ್ತ ಜಗರೆಡ್ಡಿ ಎಲ್ಲರನ್ನೂ ಸ್ವಾಗತಿಸಿ ಸಭೆಯ ಕಾರ್ಯಸೂಚಿಗಳ ಬಗ್ಗೆ ಚರ್ಚೆ ನಡೆಸಿ ಅನುಮೋದನೆ ನೀಡುವಂತೆ ವಿನಂತಿಸಿದರು.
ಪೋಟೋ: ಚಳ್ಳಕೆರೆ ನಗರಸಭೆಯಲ್ಲಿ ಮಂಗಳವಾರ ತುರ್ತು ಸಭೆ ನಡೆಸಲಾಯಿತು.
---
೧೯ಸಿಎಲ್‌ಕೆ೦೧