ಮುಂಡರಗಿಯಲ್ಲಿ ಹಿಂದೂ ಸಮ್ಮೇಳನದ ಅಂಗವಾಗಿ ಹಿಂದೂ ಸಮ್ಮೇಳನ ಸಮಿತಿಯಿಂದ ಶನಿವಾರ ಭವ್ಯವಾದ ಶೋಭಾಯಾತ್ರೆ ನಡೆಯಿತು. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ಉದ್ಘಾಟಿಸಿದರು.

ಮುಂಡರಗಿ: ಸರ್ವ ಜನಾಂಗದ ಶಾಂತಿಯ ತೋಟ ಎನಿಸಿಕೊಂಡಿರುವ ಭಾರತ ದೇಶ ಎಲ್ಲ ಜಾತಿ, ಜನಾಂಗದವರಿಗೂ ಸಮಾನವಾದಂತಹ ಅವಕಾಶಗಳನ್ನು ಕಲ್ಪಿಸಿಕೊಟ್ಟಿದೆ ಎಂದು ಜ. ನಾಡೋಜ ಅನ್ನದಾನೀಶ್ವರ ಮಹಾಸ್ವಾಮೀಜಿ ಹೇಳಿದರು.

ಅವರು ಹಿಂದೂ ಸಮ್ಮೇಳನ ಸಮಿತಿ ಆಯೋಜಿಸಿರುವ ಹಿಂದೂ ಸಮ್ಮೇಳನದ ಅಂಗವಾಗಿ ಶನಿವಾರ ಮಧ್ಯಾಹ್ನ ಜರುಗಿದ ಭವ್ಯವಾದ ಶೋಭಾಯಾತ್ರೆ ಉದ್ಘಾಟಿಸಿ ಮಾತನಾಡಿದರು. ಭಾರತ ದೇಶದಲ್ಲಿ ಹಿಂದೂ ಸಮಾಜ ಎನ್ನುವುದು ಒಂದು ದೊಡ್ಡ ತೋಟವಿದ್ದಂತೆ. ಅದರಲ್ಲಿ ಬೇರೆ ಬೇರೆ ಹೂವು ಮತ್ತು ಹಣ್ಣಿನ ಗಿಡಗಳು ಇರುವಂತೆ ಇಲ್ಲಿ ಎಲ್ಲ ಜಾತಿ, ಜನಾಂಗದವರು ಸಹ ಶಾಂತಿ ಸಮಾಧಾನದಿಂದ ಕೂಡಿ ಇದ್ದಾರೆ. ನಾವೆಲ್ಲರೂ‌ ಹಿಂದೂ, ನಾವೆಲ್ಲರೂ ಬಂಧು, ನಾವೆಲ್ಲರೂ ಒಂದು‌ ಎನ್ನುವುದರ ಸಂಕೇತವಾಗಿ ಹಿಂದೂಗಳೆಲ್ಲ‌ ಒಂದಾಗಿ‌ ಸಮಾಜವನ್ನು ಕಟ್ಟಬೇಕು ಎಂದು ಹೇಳಿದರು.

ಹಿಂದೂ ಸಮ್ಮೇಳನ ಸಮಿತಿ ಅಧ್ಯಕ್ಷ ಶ್ರೀನಿವಾಸ ಉಪ್ಪಿನಬೆಟಗೇರಿ, ಎಸ್.ಆರ್. ರಿತ್ತಿ, ಮಂಜುನಾಥ ಇಟಗಿ, ಆನಂದಗೌಡ ಪಾಟೀಲ, ಕರಬಸಪ್ಪ ಹಂಚಿನಾಳ, ರವೀಂದ್ರ ಉಪ್ಪಿನಬೆಟಗೇರಿ, ಗುರುರಾಜ ಜೋಶಿ, ಅನಂತ ಚಿತ್ರಗಾರ, ಶ್ರೀನಿವಾಸ ಕಟ್ಟೀಮನಿ, ವೆಂಕಟೇಶ ಕುಲಕರ್ಣಿ, ಲಿಂಗರಾಜಗೌಡ ಪಾಟೀಲ, ಪ್ರಹ್ಲಾದ ಹೊಸಮನಿ, ಪವನ್ ಮೇಟಿ, ನಾಗೇಶ ಹುಬ್ಬಳ್ಳಿ, ಡಾ. ಪ್ರಕಾಶ ಹೊಸಮನಿ, ಭೀಮಸಿಂಗ್ ರಾಠೋಡ, ಎಸ್.ವಿ. ಪಾಟೀಲ, ಕುಮಾರಸ್ವಾಮಿ ಹಿರೇಮಠ, ರಜನಿಕಾಂತ ದೇಸಾಯಿ, ಶಿವನಗೌಡ ಗೌಡ್ರ, ಸಿದ್ದಲಿಂಗಪ್ಪ ದೇಸಾಯಿ, ಎ.ಕೆ. ಹಂಚಿನಾಳ, ನಾಗರಾಜ ಹೊಸಮನಿ, ಈರಣ್ಣ ಗಾಡದ, ಗುಡದಪ್ಪ ದೇಸಾಯಿ, ರಮೇಶ ಹುಳಕಣ್ಣವರ, ಪ್ರಶಾಂತ ಗುಡದಪ್ಪನವರ, ಚಿನ್ನಪ್ಪ ವಡ್ಡಟ್ಟಿ, ವಿ.ಎಸ್. ಗಟ್ಟಿ, ವಿ.ಆರ್. ಹಿರೇಮಠ, ಅಶೋಕ ಶಿದ್ಲಿಂಗ್, ಯಲ್ಲಪ್ಪ ಗಣಾಚಾರಿ ಉಪಸ್ಥಿತರಿದ್ದರು.

ಮೆರವಣಿಗೆಯಲ್ಲಿ ಛಂಡೀ ವಾದ್ಯ, ಲಂಬಾಣಿ ಕುಣಿತ, ಡೊಳ್ಳಿನ ಮೇಳ, ನಂದಿಕೋಲು ಕುಣಿತ, ಹಗಲು ವೇಷ, ವಿಠಲ ಭಜನೆ ಸೇರಿದಂತೆ ವಿವಿಧ ಕಲಾತಂಡಗಳ ಜತೆಗೆ ಕುಂಭ ಹೊತ್ತ ನೂರಾರು ಮಹಿಳೆಯರ ಮಧ್ಯದಲ್ಲಿ ವಿವಿಧ ಶರಣರ, ಸಂತರ, ಸ್ವಾತಂತ್ರ್ಯ ಹೋರಾಟಗಾರರ ಸ್ತಬ್ಧಚಿತ್ರಗಳು ಇದ್ದವು. ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಿಂದ ಪ್ರಾರಂಭವಾದ ಭವ್ಯ ಶೋಭಾಯಾತ್ರೆ ಪಟ್ಟಣದ ಸರ್ ಸಿದ್ದಪ್ಪ ಕಂಬಳಿ ವೃತ್ತ, ಜಾಗ್ರತ ವೃತ್ತ, ಬಜಾರ, ಅಂಬಾ ಭವಾನಿ ನಗರ, ಹೊಸ ಬಸ್ ನಿಲ್ದಾಣದ ಮೂಲಕ ಜಗದ್ಗುರು ಅನ್ನದಾನೀಶ್ವರ ವಿದ್ಯಾ ಸಮಿತಿಯ ಕಾಲೇಜು ಮೈದಾನಕ್ಕೆ ಬಂದು ತಲುಪಿತು.