ರಾಮನಗರ: ಜಿಲ್ಲಾ ಕೇಂದ್ರ ರಾಮನಗರದ ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ನಗರಸಭೆ ಬದ್ಧವಾಗಿದ್ದು, ಹಂತ, ಹಂತವಾಗಿ ಎಲ್ಲಾ ಅನುಕೂಲಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತಿದ್ದೇವೆ. ಇದೀಗ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ನಗರಸಭೆಗೆ ಮಂಜೂರಾಗಿರುವ 12.31 ಕೋಟಿ ರು. ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದೇವೆ ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ದೊಡ್ಡ ವಾರ್ಡುಳಾದ ಟಿಪ್ಪುನಗರ, ಮೆಹಬೂಬನಗರ ಹಾಗೂ 1, 2, 27 ಮತ್ತು 31ನೇ ವಾರ್ಡುಗಳಲ್ಲೂ ಮೂಲ ಸೌಕರ್ಯಗಳ ಕೊರತೆ ಇದೆ. ಮೂಲ ಸೌಕರ್ಯಗಳನ್ನು ಕಲ್ಪಿಸಲು ನಗರಸಭೆ ಬದ್ಧವಾಗಿದೆ. ಹಂತ, ಹಂತವಾಗಿ ಎಲ್ಲಾ ಅನುಕೂಲಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತಿದ್ದೇವೆ ಎಂದು ಹೇಳಿದರು.
ನಗರಸಭೆ ಮುಂಭಾಗದಿಂದ ಹಾದು ಹೋಗಿರುವ ರೈಲು ನಿಲ್ದಾಣದ ರಸ್ತೆ ಅಭಿವೃದ್ದಿಗೆ ಅಮೃತ ನಗರೋತ್ಥಾನ ನಿಧಿಯಿಂದ 220 ಲಕ್ಷ ರು. ವೆಚ್ಚದಲ್ಲಿ ಅಭಿವೃದ್ದಿ ಮಾಡಲು ನಿರ್ಧರಿಸಲಾಗಿದೆ. ಶೇ 17.15 ಎಸ್.ಸಿ.ಎಸ್.ಪಿ ಯೋಜನೆಯಡಿ 60.76 ಲಕ್ಷ ರು ವೆಚ್ಚದಲ್ಲಿ ಅಂಬೇಡ್ಕರ್ ನಗರದ 3ನೇ ಕ್ರಾಸ್ ನಲ್ಲಿ ಸಮುದಾಯ ಭವನ ನಿರ್ಮಿಸಲು ಉದ್ದೇಶಿಸಲಾಗಿದೆ. ಎಸ್.ಸಿ.ಎಸ್.ಪಿ ಸಮುದಾಯ ಸಂಬಂಧಿತ ಕಾರ್ಯಕ್ರಮ ಮೂಲಕ 124.62 ಲಕ್ಷ ರು.ವೆಚ್ಚದಲ್ಲಿ ವಾರ್ಡ್ 3, 4, 5, 31, ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ. ಎಸ್.ಸಿ.ಎಸ್.ಪಿ ಯೋಜನೆಯಡಿ ಒಟ್ಟು 185.38 ಲಕ್ಷ ರು. ವೆಚ್ಚವಾಗುತ್ತಿದೆ ಎಂದರು.ಟಿಎಸ್‌ಪಿಯೋಜನೆಯಡಿ ಪೌರಕಾರ್ಮಿಕರ ಕಲ್ಯಾಣ ಕಾಮಗಾರಿಗಾಗಿ ಕಾಯಿಸೊಪ್ಪಿನ ಬೀದಿಯ ಸ್ಲಂ ಬೋರ್ಡಿನಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿಗೆ 30.81 ಲಕ್ಷ ರು. , 26ನೇ ವಾರ್ಡಿನಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕೆ 33.80 ಲಕ್ಷ ಸೇರಿ ಒಟ್ಟು 64.61 ಲಕ್ಷ ರೂ ಬಳಕೆಯಾಗಲಿದೆ ಎಂದು ತಿಳಿಸಿದರು.
ಅಮೃತ ನಿಧಿ ಯೋಜನೆಯಡಿ ಮಂಜೂರಾಗಿರುವ ಅನುದಾನದಲ್ಲಿ ಸಾಮಾನ್ಯ (ಇತರೆ) ಅನುದಾನದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳಿಗೆ 892.11 ಲಕ್ಷ ರು.ಗಳು ವೆಚ್ಚವಾಗುತ್ತಿದೆ. ಪ್ರಮುಖ ರಸ್ತೆಗಳಾದ ವಾಟರ್ ಟ್ಯಾಂಕ್ ವೃತ್ತದಿಂದ ಕಾಮಣ್ಣನಗುಡಿ ವೃತ್ತದವರೆಗಿನ ಎಂ.ಜಿ.ರಸ್ತೆ, ಬೆಂಗಳೂರು ಮೈಸೂರು ರಸ್ತೆಯ ಶ್ರೀ ಆಂಜನೇಯಸ್ವಾಮಿ ಆರ್ಚ್ ಬಳಿಯಿಂದ ಶ್ರೀರಾಮ ದೇವರ ಬೆಟ್ಟದ ರಸ್ತೆ, 30ನೇ ವಾರ್ಡಿನಲ್ಲಿ ಪೂರ್ವಿಕಾ ಮೊಬೈಲ್ ಬಳಿಯಿಂದ ಐಜೂರು ಗುಡ್ಡೆಯವರೆಗಿನ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಕೆ.ಶೇಷಾದ್ರಿ ಹೇಳಿದರು.
18ಕೆಆರ್ ಎಂಎನ್ 1.ಜೆಪಿಜಿ