ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಬಿಜೆಪಿ, ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ 1ನೇ ವಾರ್ಡ್ನ ಬಿಜೆಪಿ ಸದಸ್ಯೆ ಸಾಕಮ್ಮ 11 ಮತಗಳನ್ನು ಪಡೆದು ಪರಾಭವಗೊಂಡರು. ಗೆದ್ದ ಅಭ್ಯರ್ಥಿ ಜೈತುಂಬಿ 18 ಮತಗಳನ್ನು ಪಡೆದರು. ಕಾಂಗ್ರೆಸ್ ಸದಸ್ಯೆ ಎಂ. ಸಾವಿತ್ರಮ್ಮ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ದರು. ನಾಲ್ಕನೇ ವಾರ್ಡ್ ಸದಸ್ಯ ಕೆ.ಸಿ.ನಾಗರಾಜು ನೀಡಿದ ರಾಜೀನಾಮೆ ನೀಡಿದ್ದರು. ಒಟ್ಟು 29 ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
ಚುನಾವಣಾ ಪ್ರಕ್ರಿಯೆ ಮುಗಿದ ನಂತರ ನಗರಸಭೆಗೆ ಆಗಮಿಸಿದ ಶಾಸಕ ಟಿ. ರಘುಮೂರ್ತಿ, ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಯನ್ನು ಅಭಿನಂದಿಸಿದರು. ಮತ ನೀಡಿದ ಪಕ್ಷದ ಎಲ್ಲಾ ಸದಸ್ಯರಿಗೂ ಅಭಿನಂದನೆ ತಿಳಿಸಿ ನಗರದ ಸರ್ವತೋಮುಖ ಅಭಿವೃದ್ದಿಗೆ ಚುನಾಯಿತ ಸದಸ್ಯರು ಕೈಜೋಡಿಸುವಂತೆ ಮನವಿ ಮಾಡಿದರು.2018ರಿಂದ ಇಲ್ಲಿಯವರೆಗೂ ಸತತವಾಗಿ ಕಾಂಗ್ರೆಸ್ ಪಕ್ಷ ನಗರಸಭೆಯ ಆಡಳಿತದ ಚುಕ್ಕಾಣಿಯನ್ನು ಹಿಡಿದು ನಾಗರೀಕರಿಗೆ ಉತ್ತಮ ಆಡಳಿತ ನೀಡುತ್ತಿದೆ. ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯೂ ಸಹ ಚುನಾವಣೆಗೆ ಸ್ಪರ್ಧಿಸಿದರೂ ಅಭಿವೃದ್ಧಿ ವಿಚಾರದಲ್ಲಿ ಎಲ್ಲರೂ ಸಹಕಾರ ನೀಡುತ್ತಾರೆ ಎಂದರು.
ಈ ವೇಳೆ ತಹಶೀಲ್ದಾರ್ ರೇಹಾನ್‌ಪಾಷ, ಪೌರಾಯುಕ್ತ ಜಗರೆಡ್ಡಿ, ನಗರಸಭಾ ಸದಸ್ಯರಾದ ವೈ. ಪ್ರಕಾಶ್, ಆರ್. ರುದ್ರನಾಯಕ, ಟಿ. ಮಲ್ಲಿಕಾರ್ಜುನ್, ಕವಿತಾಬೋರಯ್ಯ, ಟಿ. ಶಿವಕುಮಾರ್, ಪ್ರಮೋದ್, ಸುಮಾ, ಎಸ್. ಜಯಣ್ಣ, ಸಿ.ಎಂ. ವಿಶುಕುಮಾರ್, ಕವಿತಾನಾಯಕಿ, ಹೊಯ್ಸಳಗೋವಿಂದ, ಸಿ.ಬಿ. ಜಯಲಕ್ಷ್ಮೀ, ಎಂ. ನಾಗಮಣಿ, ಸುಮಕ್ಕ, ಎಂ.ಜೆ. ರಾಘವೇಂದ್ರ, ಕವಿತಾ, ನಿರ್ಮಲ, ತಿಪ್ಪಮ್ಮ, ವಿರೂಪಾಕ್ಷಿ, ಆರ್. ಮಂಜುಳಾ, ಚಳ್ಳಕೆರೆಯಪ್ಪ, ಸಿ. ಶ್ರೀನಿವಾಸ್, ಬಿ.ಟಿ. ರಮೇಶ್‌ಗೌಡ, ಕೆ. ವೀರಭದ್ರಯ್ಯ, ಪಾಲಮ್ಮ, ಪ್ರಶಾಂತ್‌ಕುಮಾರ್, ನಾಮಿನಿ ಸದಸ್ಯರಾದ ಕೆ.ಎನ್. ನಟರಾಜ್, ಬಡಗಿಪಾಪಣ್ಣ, ಆರ್. ವೀರಭದ್ರಪ್ಪ, ಮಹಮ್ಮದ್‌ಅನ್ವರ್, ನೇತಾಜಿ ಪ್ರಸನ್ನ, ಪಿಎಸ್‌ಐ ಶಿವರಾಜ್ ಮುಂತಾದವರು ಉಪಸ್ಥಿತರಿದ್ದರು.