ಕನ್ನಡಪ್ರಭ ವಾರ್ತೆ ಹಿರಿಯೂರು
ಕಚೇರಿಯ ಮೂರು ಕೊಠಡಿಗಳನ್ನು ಸಿಂಗಾರಗೊಳಿಸಿ ಬೋರ್ಡ್ ಹಾಕಿ ಪೂಜೆ ಪುನಸ್ಕಾರ ಸಾಂಗೋಪಾಂಗವಾಗಿ ನಡೆಯತೊಡಗಿದ್ದವು. ಕಚೇರಿ ಆವರಣದಲ್ಲಿ ವಿವಿಧ ಮುಖಂಡರು ಶುಭಾಶಯ ಕೋರುವ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಆವರಣದಲ್ಲಿ ಶಾಮಿಯಾನ ಹಾಕಿ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಅ.5ಕ್ಕೆ ಮುಗಿಯಲಿದೆ ಎನ್ನುವ ಸ್ಥಾಯಿ ಸಮಿತಿ ಅಧ್ಯಕ್ಷ ಹುದ್ದೆಯ ಪದಗ್ರಹಣಕ್ಕೆ ಇಷ್ಟೊಂದು ಆಡಂಬರದ ಪದಗ್ರಹಣ ಬೇಕಿತ್ತಾ ಎಂದು ಹಲವಾರು ಸಾರ್ವಜನಿಕರು ಗೊನಗಿಕೊಳ್ಳುತ್ತಿದ್ದದ್ದು ಕಂಡು ಬಂತು. ಸಾರ್ವಜನಿಕರು ಕಚೇರಿ ಕೆಲಸಕ್ಕೆ ಬಂದು ಇವತ್ತೇನು ಕೆಲಸ ಆಗುವುದಿಲ್ಲ ಎಂದು ಹಿಂತಿರುಗುತ್ತಿದ್ದದ್ದು ಗುರುವಾರ ನಗರಸಭೆಯಲ್ಲಿ ಕಂಡು ಬಂತು. ಇದೆಲ್ಲದರ ನಡುವೆ ನಗರಸಭೆ ಸದಸ್ಯ ವಿಠ್ಠಲ ಪಾಂಡುರಂಗ ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲು ಸಮಿತಿಯ ಅಧ್ಯಕ್ಷರಾಗಿ, ಎಂ.ಡಿ.ಸಣ್ಣಪ್ಪನವರು ಸಾರ್ವಜನಿಕ ಆರೋಗ್ಯ, ಶಿಕ್ಷಣ, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ, ರತ್ನಮ್ಮನವರು ನಗರ ಯೋಜನೆ ಮತ್ತು ನಗರಾಭಿವೃದ್ಧಿ ಸಮಿತಿಯ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವರು ಮೂವರು ಸ್ಥಾಯಿ ಸಮಿತಿ ಅಧ್ಯಕ್ಷರ ಪದಗ್ರಹಣ ಸಮಾರಂಭಕ್ಕೆ ಸಾಕ್ಷಿಯಾಗಿ ಶುಭ ಹಾರೈಸಿದರು.
ರಸ್ತೆ ಟೆಂಡರ್ ಕರೆಯದೆ ಕೆಲಸ ಮುಗಿಸಿದ ಆರೋಪ:
ಇದೆಲ್ಲಾ ಸಾಲದು ಎಂಬಂತೆ ಪ್ರಧಾನ ರಸ್ತೆಯ ಅಂಬಿಕಾ ಸ್ಟುಡಿಯೋ ಮುಂಭಾಗ ಒಂದಷ್ಟು ಅಡಿಗಳಷ್ಟು ರಸ್ತೆಗೆ ಡಾಂಬರು ಮಾಡದೇ ಹೋಗಿದ್ದು ಇದು ಯಾವ ಮಾದರಿಯ ಕಾಮಗಾರಿ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.