ಕುಡಿವ ನೀರಿನ ಪೋಲು ತಡೆಯಲು ಮುಂದಾದ ಪುರಸಭೆ

KannadaprabhaNewsNetwork | Published : Jan 13, 2024 1:34 AM

ಸಾರಾಂಶ

ಪುರಸಭೆ ನಿರ್ಲಕ್ಷ್ಯ, ಕುಡಿವ ನೀರು ಪೋಲು ಎಂಬ ಕನ್ನಡಪ್ರಭ ವರದಿಗೆ ಎಚ್ಚೆತ್ತ ಪುರಸಭೆ ಪೋಲಾಗುತ್ತಿದ್ದ ಕುಡಿವ ನೀರಿನ ಪೋಲು ತಡೆಯಲು ಮುಂದಾಗಿದೆ. ಜ.೧೧ ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ತಾಲೂಕಿನ ಮಳವಳ್ಳಿ ಗೇಟ್‌ ಬಳಿ ಕಬಿನಿ ನೀರಿನ ಪೈಪ್ ಒಡೆದು ಆರು ದಿನದಿಂದ ಕಬಿನಿ ಕುಡಿವ ನೀರು ಪೋಲಾಗುತ್ತಿದೆ ಅಲ್ಲದೆ ಪೋಲಾದ ನೀರು ಈರುಳ್ಳಿ ಜಮೀನಿನ ಬಳಿ ನಿಂತು ಈರುಳ್ಳಿ ಬೆಳೆ ಹಾಳಾಗುತ್ತದೆ ಎಂದು ಸುದ್ದಿ ಪ್ರಕಟಗೊಂಡಿತ್ತು.

ಕನ್ನಡಪ್ರಭ ವರದಿಗೆ ಎಚ್ಚೆತ್ತ ಪುರಸಭೆ ಅಧಿಕಾರಿಗಳು

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ಪುರಸಭೆ ನಿರ್ಲಕ್ಷ್ಯ, ಕುಡಿವ ನೀರು ಪೋಲು ಎಂಬ ಕನ್ನಡಪ್ರಭ ವರದಿಗೆ ಎಚ್ಚೆತ್ತ ಪುರಸಭೆ ಪೋಲಾಗುತ್ತಿದ್ದ ಕುಡಿವ ನೀರಿನ ಪೋಲು ತಡೆಯಲು ಮುಂದಾಗಿದೆ. ಜ.೧೧ ರಂದು ಕನ್ನಡಪ್ರಭ ಪತ್ರಿಕೆಯಲ್ಲಿ ತಾಲೂಕಿನ ಮಳವಳ್ಳಿ ಗೇಟ್‌ ಬಳಿ ಕಬಿನಿ ನೀರಿನ ಪೈಪ್ ಒಡೆದು ಆರು ದಿನದಿಂದ ಕಬಿನಿ ಕುಡಿವ ನೀರು ಪೋಲಾಗುತ್ತಿದೆ ಅಲ್ಲದೆ ಪೋಲಾದ ನೀರು ಈರುಳ್ಳಿ ಜಮೀನಿನ ಬಳಿ ನಿಂತು ಈರುಳ್ಳಿ ಬೆಳೆ ಹಾಳಾಗುತ್ತದೆ ಎಂದು ಸುದ್ದಿ ಪ್ರಕಟಗೊಂಡಿತ್ತು. ಪುರಸಭೆ ನಿರ್ಲಕ್ಷ್ಯ; ಕುಡಿವ ನೀರು ಪೋಲು,ದುರಸ್ತಿಗೆ ಮುಂದಾಗದ ಪುರಸಭೆ,ಸೋರಿಕೆ ನೀರಿನಿಂದ ಈರುಳ್ಳಿ ಬೆಳೆಗೆ ಸಂಕಷ್ಟ,ಕಿಮಿ ಗಟ್ಟಲೇ ಹರಿದ ನೀರು ಎಂದು ವರದಿ ಪ್ರಕಟಿಸಿ ಗಮನ ಸೆಳೆದಿತ್ತು. ಕನ್ನಡಪ್ರಭ ವರದಿಗೆ ಸ್ಪಂದಿಸಿದ ಶಾಸಕಎಚ್.ಎಂ.ಗಣೇಶ್‌ ಪ್ರಸಾದ್‌ ಪುರಸಭೆ ಮುಖ್ಯಾಧಿಕಾರಿ ಜೊತೆ ಮಾತನಾಡಿ ಕೂಡಲೇ ದುರಸ್ಥಿ ಪಡಿಸಿ ಸೋರಿಕೆ ನೀರು ನಿಲ್ಲಿಸಿ ಏಂದು ಸೂಚಿನೆ ನೀಡಿದ್ದರು.ಶಾಸಕರ ಸೂಚನೆ ಹಾಗು ಕನ್ನಡಪ್ರಭ ವರದಿಗೆ ಎಚ್ಚೆತ್ತ ಪುರಸಭೆ ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಗುರುವಾರ ಸಂಜೆಯ ಕಬಿನಿ ನೀರು ನಿಲ್ಲಿಸಿದರು. ಶುಕ್ರವಾರ ಬೆಳಗ್ಗೆಯೇ ಜೆಸಿಬಿಯಿಂದ ಒಡೆದು ಪೈಪ್‌ ಜಾಗವನ್ನು ಪತ್ತೆ ಹಚ್ಚಿ, ಗುಂಡಿಯಿಂದ ನೀರನ್ನು ಡಿಸೇಲ್‌ ಯಂತ್ರದ ಮೂಲಕ ನೀರು ಎತ್ತಿಸಲು ಶುರು ಮಾಡಿಸಿದ್ದಾರೆ. ನಿಟ್ಟುಸಿರು ಬಿಟ್ಟ ರೈತಮಳವಳ್ಳಿ ಗೇಟ್‌ ಮುಂದೆ ಕಬಿನಿ ನೀರಿನ ಪೈಪ್‌ ಒಡೆದು ಕಿ.ಮೀ ಗಟ್ಟಲೇ ನೀರು ಪೋಲಾಗುವ ನೀರು ರೈತ ಶಿವಕುಮಾರ್‌ ಬೆಳೆದ ಈರುಳ್ಳಿ ಬೆಳೆ ಹಾಳಾಗುತ್ತಿದೆ ಎಂದು ಆತಂಕಗೊಂಡಿದ್ದರು. ಕನ್ನಡಪ್ರಭ ವರದಿ ಬಳಿಕ ಪುರಸಭೆ ಎಚ್ಚೆತ್ತು ಪೋಲಾಗುವ ನೀರು ನಿಲ್ಲಿಸಿದ್ದಕ್ಕೆ ರೈತ ಶಿವಕುಮಾರ್‌ ಸಂತಸಗೊಂಡಿದ್ದು ಕನ್ನಡಪ್ರಭದ ಕಾಳಜಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Share this article