ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪರೋಪಕಾರಂ ಕುಟುಂಬವು 736ನೇ ಕಾರ್ಯಕ್ರಮದ ಭಾಗವಾಗಿ ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್ ಆವರಣದಲ್ಲಿ ಬುಧವಾರ ಠಾಣೆ ಪೊಲೀಸರೊಂದಿಗೆ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಸರ್ಕಾರಿ ಇಲಾಖೆಗಳು, ಅದರಲ್ಲೂ ಮುಖ್ಯವಾಗಿ ಜನರೊಂದಿಗೆ ಅತಿ ಹೆಚ್ಚು ಸಂಪರ್ಕ ಹೊಂದಿರುವಂತಹ ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರ ಮಧ್ಯೆ ಒಂದು ಉತ್ತಮ ಬಾಂಧವ್ಯ ಸೃಷ್ಟಿಯಾಗಬೇಕು. ಈ ನಿಟ್ಟಿನಲ್ಲಿ ಪರೋಪಕಾರಂ ಕುಟುಂಬ ನಿರಂತರವಾಗಿ ಶ್ರಮಿಸುತ್ತಿದೆ ಎಂದರು.
ಪರೋಪಕಾರಂ ಕುಟುಂಬವು ಪ್ರತಿ ಭಾನುವಾರ ಮತ್ತು ಬುಧವಾರ ಶಿವಮೊಗ್ಗ ನಗರದ ವಿವಿಧ ಪಾರ್ಕ್‍ಗಳು, ಸರ್ಕಾರಿ ಶಾಲಾ- ಕಾಲೇಜುಗಳು, ಇಲಾಖೆಗಳು ಮತ್ತಿತರೆಡೆ ಪರಿಸರ ಸ್ವಚ್ಛತೆಯೊಂದಿಗೆ ದೇಶಭಕ್ತಿ, ಅಧ್ಯಾತ್ಮದ ಪ್ರಮುಖ ಧ್ಯೇಯದೊಂದಿಗೆ ಸೌಹಾರ್ದತೆ, ನಿಸ್ವಾರ್ಥತೆ, ವ್ಯಕ್ತಿಗಳಲ್ಲಿ ನೈತಿಕ ಮೌಲ್ಯವನ್ನು ಮೈಗೂಡಿಸುವಿಕೆಯನ್ನು ಧ್ಯೇಯವನ್ನಾಗಿಸಿಕೊಂಡಿದೆ ಎಂದು ತಿಳಿಸಿದರು.ಕೋಟೆ ಪೊಲೀಸ್ ಠಾಣೆಯ ಎಸ್‌ಐ ಎನ್.ಕುಮಾರ್ ಮಾತನಾಡಿ, ಎನ್‍ಜಿಒ, ಟ್ರಸ್ಟ್ ಅಥವಾ ಸಂಘ- ಸಂಸ್ಥೆ ಅಲ್ಲದ ಪರೋಪಕಾರಂನ ಕಾರ್ಯಸೂಚಿ ಅತ್ಯಂತ ವಿಶಿಷ್ಟ ಹಾಗೂ ವಿಭಿನ್ನವಾಗಿದೆ. ಅದರಲ್ಲೂ ಮಹಿಳೆಯರು, ಮಕ್ಕಳು ಸಹ ಪರೋಪಕಾರಂನ ಕಾರ್ಯಗಳಲ್ಲಿ ಸಕ್ರಿಯವಾಗಿರುವುದು ನಾಗರೀಕ ಸಮಾಜಕ್ಕೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪರೋಪಕಾರಂ ಕುಟುಂಬದ ಎನ್.ಎಂ.ಲೀಲಾಬಾಯಿ, ಅನಿಲ್ ಹೆಗಡೆ, ಕೆ.ಎಸ್.ವೆಂಕಟೇಶ್, ಎನ್.ಎಂ.ರಾಘವೇಂದ್ರ, ಕೆ.ಎಸ್.ಸುರೇಶ್, ಮಾಲಿನಿ ಕಾನಡೆ, ಮಾಲತಿ, ಆರ್.ಕಿರಣ್, ಬಿ.ಪಾಶ್ವನಾಥ್ , ಕಾರ್ಪೆಂಟರ್ ಕುಮಾರ್, ಓಂ ಪ್ರಕಾಶ್ ಮತ್ತಿತರರು ಪಾಲ್ಗೊಂಡಿದ್ದರು.
- ಹರ್ಷ, ಎಎಸ್‍ಐ
- - - -27ಎಸ್‌ಎಂಜಿಕೆಪಿ01:ಶಿವಮೊಗ್ಗ ಕೋಟೆ ಪೊಲೀಸ್ ಠಾಣೆ ಆವರಣದಲ್ಲಿ ಬುಧವಾರ ಪರೋಪಕಾರಂ ಕುಟುಂಬವು 736ನೇ ಕಾರ್ಯಕ್ರಮದ ಭಾಗವಾಗಿ ಠಾಣೆ ಪೊಲೀಸರೊಂದಿಗೆ ಸ್ವಚ್ಛತಾ ಕಾರ್ಯ ಕೈಗೊಂಡಿತು.