ಸಂವಿಧಾನದ ಸೌಲಭ್ಯದಿಂದ ರಾಷ್ಟ್ರ ಪ್ರಗತಿ ಪಥದಲ್ಲಿ

KannadaprabhaNewsNetwork |  
Published : Apr 15, 2026, 01:30 AM IST
ಫೋಟೋ 14ಪಿವಿಡಿ1,14ಪಿವಿಜಿ1ತಾಲೂಕು ಆಡಳಿತ ವತಿಯಿಂದ ಹಮ್ಮಿಕೊಂಡಿದ್ದ  ಡಾ.ಬಿ.ಆರ್‌.ಅಂಬೇಡ್ಕರ್‌ ಹಾಗೂ ಬಾಬು ಜಗಜೀವನರಾಮ್‌ ಅವರ ಜಯಂತ್ಯುತ್ಸವ ಸಮಾರಂಭದ ಅಧ್ಯಕ್ಷತೆಯನ್ನು ತಹಸೀಲ್ದಾರ್ ವಹಿಸಿ ಮಾತನಾಡಿದರು. | Kannada Prabha

ಸಾರಾಂಶ

ಸಂವಿಧಾನದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ನೀಡಿದ ಸೌಲಭ್ಯದಿಂದಾಗಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗುತ್ತಿದೆ ಎಂದು ತಹಸೀಲ್ದಾರ್‌ ವೈ.ರವಿ ಅವರು ಹೇಳಿದರು.

,ಕನ್ನಡಪ್ರಭ ವಾರ್ತೆ ಪಾವಗಡ

ಸಂವಿಧಾನದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ನೀಡಿದ ಸೌಲಭ್ಯದಿಂದಾಗಿ ದೇಶ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯವಾಗುತ್ತಿದೆ ಎಂದು ತಹಸೀಲ್ದಾರ್‌ ವೈ.ರವಿ ಅವರು ಹೇಳಿದರು.

ತಾಲೂಕು ಆಡಳಿತ ಹಾಗೂ ತಾಪಂ ಹಾಗೂ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ಪಟ್ಟಣದ ತಾಲೂಕು ಕಚೇರಿಯ ಅವರಣದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ 135ನೇ ಹಾಗೂ ಹಸಿರು ಕ್ರಾಂತಿ ಹರಿಕಾರ ಬಾಬು ಜಗಜೀವನರಾಮ್ ಅವರ 199 ನೇ ಜಯಂತ್ಯುತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂಬೇಡ್ಕರ್‌ ಅವರ ಆದರ್ಶ ಹಾಗೂ ಚಿಂತನೆ ಅಳವಡಿಸಿಕೊಳ್ಳುವ ಮೂಲಕ ಸಮಾನತೆ ಸಾರಬೇಕು. ಎಲ್ಲರು ಒಗ್ಗಟ್ಟಿನಿಂದ ಸೇರಿ ಜೀವನ ರೂಪಿಸಿಕೊಳ್ಳಬೇಕು. ವಿಶೇಷವಾಗಿ ಸಂವಿಧಾನದಲ್ಲಿ ಹೆಚ್ಚು ಅದ್ಯತೆ ನೀಡಿದ್ದು ಮಹಿಳೆಯರು ವಿದ್ಯಾವಂತರಾಗಬೇಕು.ಎಲ್ಲ ರಂಗಗಳಲ್ಲಿಯು ಪ್ರಮುಖ ಪಾತ್ರವಹಿಸಬೇಕು ಎಂದರು. ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರೇಣುಕಮ್ಮ ಮಾತನಾಡಿ, ಸರ್ಕಾರದ ಸೌಲಭ್ಯ ಪಡೆದು ಸಾಮಾಜಿಕ ಅರ್ಥಿಕವಾಗಿ ಪ್ರಗತಿ ಕಾಣುವಂತೆ ಕರೆ ನೀಡಿದರು. ಸಿ.ಕೆ.ಪುರ ಗೋವಿಂದರಾಯ ಅಂಬೇಡ್ಕರ್‌ ಹಾಗೂ ಬಾಬು ಜಗಜೀವನರಾಮ್‌ ಅವರು ಬೆಳೆದು ಬಂದ ಹಾದಿ ಕುರಿತು ವಿವರಿಸಿದರು.

ಈ ವೇಳೆ ತಾಪಂ ಇಒ ಮಧುಸೂದನ್‌, ಪುರಸಭೆ ಮುಖ್ಯಾಧಿಕಾರಿ ಜಾಫರ್‌ ಷರೀಪ್‌, ಆರೋಗ್ಯಧಿಕಾರಿ ಶಂಷುದ್ದೀನ್‌ , ಮೈಕಲ್‌, ಸುರೇಶ್‌, ರವಿಕುಮಾರ್‌, ಶೇಖರ್‌ಬಾಬು, ಕಿರಣ್‌,ರಾಜ್‌ಗೋಪಾಲ್‌ಬಾಬು ಕರೆಕ್ಯಾತನಹಳ್ಳಿ ನಾಗರಾಜು, ಕನಿಮಪ್ಪ, ನರಸಿಂಹರೆಡ್ಡಿ,ವಕೀಲ ಕೆ.ರಾಮಪುರ ರವೀಂದ್ರ, ಪುಟ್ಟರಾಜ್‌, ರಾಜ್ ಕುಮಾರ್‌ ನಾರಾಯಣಸ್ವಾಮಿ, ರಾಧಕೃಷ್ಣಯ್ಯ,ಎಸ್‌.ಎಂ.ಶೋಭಾ ಮಾರುತಿ, ರಾಮಕೃಷ್ಣನಾಯಕ್‌,ಸುದರ್ಶನ್‌ ಇತರೆ ವಿವಿಧ ಇಲಾಖೆಯ ಅಧಿಕಾರಿ ಹಾಗೂ ಸಾರ್ವಜನಿಕರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಮೆ ಹೆಸರಲ್ಲಿ ರಾಜಕೀಯ ಸರಿಯಲ್ಲ: ಶಾಸಕ ಬಾಲಕೃಷ್ಣ
ಮನೆ ಮುಂದೆಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಕೊಲೆ