ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಜಗತ್ತಿನ ಸಾಧಕರ ಪಟ್ಟಿಯಲ್ಲಿ ಹೆಸರು ಗಳಿಸಬೇಕಾದರೆ ನಾವು ಜ್ಞಾನಾಮೃತವನ್ನು ಸರಿಯಾಗಿ ಅರ್ಥೈಸಿಕೊಂಡು ಅಳವಡಿಸಿಕೊಳ್ಳಬೇಕು. ಶಿಕ್ಷಣವೆಂದರೆ ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ, ಅದು ಮನುಷ್ಯನಲ್ಲಿ ವಿವೇಕ ಮತ್ತು ಪ್ರಜ್ಞಾವಂತಿಕೆಯನ್ನು ಬೆಳೆಸುವ ಶಕ್ತಿಯಾಗಿದೆ. ಜ್ಞಾನದ ಮೂಲಕ ಮನುಷ್ಯ ತನ್ನನ್ನು ತಾನು ವಿಮರ್ಶಿಸಿಕೊಳ್ಳಲು ಸಾಧ್ಯವಾಗುತ್ತದೆ. ಯಾರು ಜ್ಞಾನವನ್ನು ಸ್ವೀಕರಿಸಿ ತಮ್ಮ ಜೀವನವನ್ನು ವಿಮರ್ಶಾತ್ಮಕವಾಗಿ ನೋಡುತ್ತಾರೊ ಅವರು ತಮ್ಮ ಭವಿಷ್ಯವನ್ನು ಅತ್ಯಂತ ಭವ್ಯವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಸ್ವಾಮಿ ವಿವೇಕಾನಂದರು ಚಿಕ್ಕವರಿದ್ದಾಗ ದೊಡ್ಡವರಾದ ಮೇಲೆ ಏನಾಗುತ್ತೀಯಾ ಎಂದು ಕೇಳಿದಾಗ ದಿನವು ಶಾಲೆಗೆ ಕರೆದುಕೊಂಡು ಹೋಗುವ ಟಾಂಗಾ ಚಾಲಕ ಆಗುತ್ತೇನೆ ಎಂದು ಹೇಳುತ್ತಿದ್ದರು. ವಿವೇಕಾನಂದರ ತಂದೆ ಅವರ ಮಾತಿಗೆ ಸಿಟ್ಟಾಗದೆ ಕೃಷ್ಣ ಮತ್ತು ಅರ್ಜುನರ ರಥದ ಉದಾಹರಣೆ ನೀಡುತ್ತಿದ್ದರು. ನೀವು ಚಾಲಕರಾಗುವುದಾದರೆ ಜಗತ್ತನ್ನೇ ನಡೆಸಿದ ಶ್ರೀ ಕೃಷ್ಣನಂತಹ ಚಾಲಕನಾಗು ಎಂದು ಮಗನಿಗೆ ಧನಾತ್ಮಕವಾಗಿ ಪ್ರೇರೇಪಿಸುತ್ತಿದ್ದರು. ಜಗತ್ತಿನಲ್ಲಿ ಯಾವುದೇ ಕೆಲಸ ಮೇಲಲ್ಲ, ಕೀಳಲ್ಲ.ನಾವು ಆ ಕೆಲಸವನ್ನು ಹೇಗೆ ಭಾವಿಸುತ್ತೇವೆ ಮತ್ತು ಗೌರವಿಸುತ್ತೇವೆ ಎಂಬುದು ಮುಖ್ಯ ಎಂದರು.ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸುತ್ತೇವೆ. ಪ್ರತಿಯೊಬ್ಬ ವಿದ್ಯಾರ್ಥಿಯು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಬೇಕು.ಉತ್ತಮ ಸಂಸ್ಕಾರ ಮತ್ತು ಆದರ್ಶ ಗುಣಗಳನ್ನು ಬೆಳೆಸಿಕೊಂಡು ಸಮಾಜದ ಆಸ್ತಿಯಾಗಬೇಕು.
ಈ ಸಂದರ್ಭದಲ್ಲಿ ಎಸ್.ಜೆ.ಎಸ್ ಸಂಸ್ಥೆಯ ಕಾರ್ಯದರ್ಶಿ ಡಿ.ಸಿ.ಮೋಹನ್, ನಿರ್ದೇಶಕರಾದ ಇ.ಮಂಜುನಾಥ್, ಕಾಳಘಟ್ಟ ಹನುಮಂತಪ್ಪ, ಹೆಚ್.ಆಂಜನೇಯ, ವೈ.ಪ್ರಕಾಶ್, ಗೌನಹಳ್ಳಿ ಗೋವಿಂದಪ್ಪ,ದಾವಣಗೆರೆಯ ರಾಜು ಉಪಸ್ಥಿತರಿದ್ದರು.