ಸಕ್ಕರೆ ನಾಡಿನ ರೈತರ ಬೆನ್ನೆಲುಬಾಗಿ ನಿಂತ ನಿರಾಣಿ ಉದ್ಯಮ ಸಮೂಹ

KannadaprabhaNewsNetwork |  
Published : Oct 07, 2026, 01:45 AM IST
ಎಂ.ಆರ್‌ಎನ್‌. ಸಕ್ಕರೆ ಕಾರ್ಖಾನೆ | Kannada Prabha

ಸಾರಾಂಶ

ಮಂಡ್ಯ ಜಿಲ್ಲೆಯ ಕಾವೇರಿ ತೀರದ ರೈತರ ಜೀವನಾಡಿಯಾಗಿದ್ದ ಐತಿಹಾಸಿಕ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ (ಪಿಎಸ್ಎಸ್‌ಕೆ) ನಷ್ಟದಲ್ಲಿದ್ದು ಮುಚ್ಚಿಹೋಗುವ ಹಂತ ತಲುಪಿದಾಗ, ರೈತರ ಸಂಕಷ್ಟಕ್ಕೆ ಧಾವಿಸಿದವರು ಮಾಜಿ ಸಚಿವರು, ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ.ಮುರುಗೇಶ್ ಆರ್.ನಿರಾಣಿ ಅವರ ನೇತೃತ್ವದ ಎಂ.ಆರ್.ಎನ್.(ನಿರಾಣಿ) ಉದ್ಯಮ ಸಮೂಹ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಜಿಲ್ಲೆಯ ಕಾವೇರಿ ತೀರದ ರೈತರ ಜೀವನಾಡಿಯಾಗಿದ್ದ ಐತಿಹಾಸಿಕ ಪಾಂಡವಪುರ ಸಹಕಾರಿ ಸಕ್ಕರೆ ಕಾರ್ಖಾನೆ (ಪಿಎಸ್ಎಸ್‌ಕೆ) ನಷ್ಟದಲ್ಲಿದ್ದು ಮುಚ್ಚಿಹೋಗುವ ಹಂತ ತಲುಪಿದಾಗ, ರೈತರ ಸಂಕಷ್ಟಕ್ಕೆ ಧಾವಿಸಿದವರು ಮಾಜಿ ಸಚಿವರು, ರಾಜ್ಯ ಬಿಜೆಪಿ ಉಪಾಧ್ಯಕ್ಷ ಡಾ.ಮುರುಗೇಶ್ ಆರ್.ನಿರಾಣಿ ಅವರ ನೇತೃತ್ವದ ಎಂ.ಆರ್.ಎನ್.(ನಿರಾಣಿ) ಉದ್ಯಮ ಸಮೂಹ.

2020ರ ನವೆಂಬರ್‌ 10ರಂದು ಕಾರ್ಖಾನೆಯನ್ನು ಲೀಸ್ ಮೂಲಕ ಪಡೆದುಕೊಂಡು ಯಶಸ್ವಿಯಾಗಿ ಪುನಶ್ಚೇತನಗೊಳಿಸಿತು. ಕಬ್ಬು ಬೆಳೆಗಾರರ ಕಷ್ಟಗಳನ್ನು ಸೂಕ್ಷ್ಮವಾಗಿ ಅರಿತುಕೊಂಡು ಅವರ ಬೆನ್ನೆಲುಬಾಗಿ ನಿಂತಿರುವ ನಿರಾಣಿ ಅವರ ಶ್ರಮದಿಂದಾಗಿ ಇಂದು ಮಂಡ್ಯ ಮತ್ತು ಮೈಸೂರು ಭಾಗದ ರೈತರ ಹಾಗೂ ಗ್ರಾಮೀಣ ಭಾಗದ ಆರ್ಥಿಕತೆಗೆ ಭಾರೀ ಉತ್ತೇಜನ ಸಿಕ್ಕಿದೆ.

ಕಾರ್ಖಾನೆಯು 2025-26ನೇ ಸಾಲಿನ ಕಬ್ಬು ಹಂಗಾಮಿನಲ್ಲಿ 4.6 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆದು, ₹152.76 ಕೋಟಿ ಹಣವನ್ನು ನೇರವಾಗಿ ರೈತರ ಖಾತೆಗಳಿಗೆ ಜಮಾ ಮಾಡಿ ವಿಶ್ವಾಸಾರ್ಹತೆ ಮೆರೆದಿತ್ತು.

ಕಳೆದ ಬಾರಿಯ ಸಾಧನೆಯನ್ನು ಮುಂದುವರಿಸಿರುವ ಎಂ.ಆರ್.ಎನ್.ಕೇನ್ ಪವರ್ & ಬಯೋ ರಿಫೈನರೀಸ್ ಪ್ರೈ.ಲಿ. ಕಾರ್ಖಾನೆಯು ಪ್ರಸಕ್ತ 2026-27ನೇ ಸಾಲಿನ ಹಂಗಾಮಿನ ಮೊದಲ ಹಂತದಲ್ಲಿ ದಾಖಲೆ ಬರೆದಿದೆ.

11 ಜುಲೈ 2026 ರಿಂದ 30 ಸೆಪ್ಟೆಂಬರ್ 2026 ರವರೆಗಿನ ಕೇವಲ ಎರಡೂವರೆ ತಿಂಗಳ ಅವಧಿಯಲ್ಲಿ 3,83,315.077 ಮೆಟ್ರಿಕ್ ಟನ್‌ ಕಬ್ಬು ಅರೆದು ಕಾರ್ಖಾನೆಯು 4,676 ರೈತರಿಗೆ 1,29,79,03,913 ರು. ಹಣ ಪಾವತಿಸಿದೆ. ರೈತರ ಅಮೂಲ್ಯ ಶ್ರಮ, ನಂಬಿಕೆ ಹಾಗೂ ನಿರಂತರ ಸಹಕಾರದಿಂದಾಗಿ ಈ ಮಹತ್ತರ ಸಾಧನೆ ಸಾಧ್ಯವಾಗಿದೆ ಎಂದು ಡಾ.ಮುರುಗೇಶ್ ಆರ್ ನಿರಾಣಿ ಅವರು ಮತ್ತು ಆಡಳಿತ ಮಂಡಳಿ ಸದಸ್ಯರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯಪುರ ಶಾಸಕ ಯತ್ನಾಳ್ ವಿರುದ್ಧ ದಾವಣಗೆರೆ ಕಾಂಗ್ರೆಸ್ ದೂರು
ಶಿಥಿಲ, ಹಳೇ ಪಶು ವೈದ್ಯಕೀಯ ಆಸ್ಪತ್ರೆಗಳ ಪಟ್ಟಿ ನೀಡಿ: ಶಾಂತನಗೌಡ