ಕನ್ನಡಪ್ರಭ ವಾರ್ತೆ, ತುಮಕೂರುಪಾಕಿಸ್ತಾನ ಜಿಂದಾಬಾದ್ ಎನ್ನುವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ವಿಧಾನ ಸೌಧದೊಳಗೆ ಪಾಕಿಸ್ತಾನ ಜಿಂದಾಬಾದ್ ಕೂಗುವ ದೇಶ ದ್ರೋಹಿಗಳು ನಮ್ಮ ರಾಜ್ಯ ಹಾಗೂ ದೇಶದಲ್ಲೂ ಇದ್ದಾರೆ. ಅಂತಹವರನ್ನು ಹುಡುಕುವ ಕೆಲಸ ಆಗಬೇಕಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಬಿ.ವೈ. ವಿಜಯೇಂದ್ರ ಹೇಳಿದರು.
ಪಾಕಿಸ್ತಾನದ ಬೆದರಿಕೆಗೆ ಭಾರತ ಜಗ್ಗುವುದಿಲ್ಲ. ಪಾಕಿಸ್ತಾನದ ಸೈನಿಕರನ್ನು ಮಟ್ಟ ಹಾಕುವ ಶಕ್ತಿ ಭಾರತಕ್ಕಿದೆ. ಸಿಂಧೂ ನದಿಯ ನೀರನ್ನು ಕೊಡಬೇಕು ಎಂದರೆ ಕಾಶ್ಮೀರದಲ್ಲಿ ನಡೆಸುತ್ತಿರುವ ಉಗ್ರಗಾಮಿ ಕೃತ್ಯಗಳನ್ನು ಪಾಕಿಸ್ತಾನ ತಕ್ಷಣ ನಿಲ್ಲಿಸಬೇಕು ಎಂದರು.ಪೆಹಲ್ಗಾಮ್‌ನಲ್ಲಿ ನಡೆದ ಅಮಾನುಷ ಕೃತ್ಯ. ಹಾಗಾಗಿ ಉಗ್ರಗಾಮಿ ಸಂಘಟನೆಗಳ ವಿರುದ್ಧ ಹಾಗೂ ಉಗ್ರಗಾಮಿ ಸಂಘಟನೆಗಳಿಗೆ ಶಕ್ತಿ ಕೊಡುವಂತಹ ದುಷ್ಟ ರಾಷ್ಟ್ರ ಪಾಕಿಸ್ತಾನದ ವಿರುದ್ಧ ಪ್ರತಿಯೊಬ್ಬ ಸ್ವಾಭಿಮಾನಿ ಭಾರತೀಯನ ರಕ್ತ ಕುದಿಯುತ್ತಿತ್ತು. ಇಂತಹ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಒಂದು ತೀರ್ಮಾನ ಮಾಡಿ ಆಪರೇಷನ್ ಸಿಂದೂರ್ ಘೋಷಣೆ ಮಾಡಿದರು ಎಂದರು.ತಿರಂಗಯಾತ್ರೆಯಲ್ಲಿ ಬಿಜೆಪಿ ಬಾವುಟ ಕಾಣಲ್ಲ. ಪಕ್ಷಕ್ಕೆ ಸೀಮಿತವಾಗದೆ, ರಾಜಕೀಯೇತರವಾಗಿ ಸಮಾಜದ ಎಲ್ಲಾ ವರ್ಗದವನ್ನು ಮುಂಚೂಣಿಯಲ್ಲಿ ಕರೆದುಕೊಂಡು ತಿರಂಗ ಯಾತ್ರೆ ಮಾಡುತ್ತಿರುವುದಾಗಿ ತಿಳಿಸಿದರು.ಪಾಕಿಸ್ತಾನ ಶತ್ರು ರಾಷ್ಟ್ರವಲ್ಲ ಎಂಬ ಬಿ.ಕೆ ಹರಿಪ್ರಸಾದ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಕಾಂಗ್ರೆಸ್ ಧುರಿಣರಿಗೆ ಪಾಕಿಸ್ತಾನದ ಮೇಲಿನ ಪ್ರೀತಿ ಎಷ್ಟಿದೆ ಅನ್ನೋದು ಹಲವು ಬಾರಿ ಗೊತ್ತಾಗಿದೆ. ಪಾಕಿಸ್ತಾನ ಮೇಲೆ ಯುದ್ಧ ಆರಂಭವಾಗುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಯುದ್ಧಬೇಡ ಅಂದಿದ್ದು, ರಾಜ್ಯದ ಜನ ನೋಡಿದ್ದಾರೆ. ಗಮನಿಸಿದ್ದಾರೆ ಎಂದರು.ಭಯೋತ್ಪಾದನೆಗೆ ಪಾಕಿಸ್ತಾನ ಕುಮ್ಮಕ್ಕುನೀಡುವುದನ್ನು ನಿಲ್ಲಿಸದಿದ್ದರೆ ಪಾಕ್ ವಿರುದ್ಧ ಯುದ್ಧ ಮಾಡಲು ಭಾರತ ಹಿಂದೆ ಮುಂದೆ ನೋಡುವುದಿಲ್ಲ ಅಮೆರಿಕಾ ಮತ್ತು ಭಾರತದ ಹಿಟ್ ಲಿಸ್ಟ್ ನಲ್ಲಿದ್ದ ಉಗ್ರಗಾಮಿಗಳನ್ನು ಹತ್ಯೆ ಮಾಡುವಲ್ಲಿ ಭಾರತದ ವೀರ ಯೋಧರು ಯಶಸ್ವಿಯಾಗಿದ್ದಾರೆ. ಹಾಗಾಗಿ ಆಪರೇಷನ್ ಸಿಂದೂರ ಯಶಸ್ವಿಯಾಗಿರುವ ಸಂದರ್ಭದಲ್ಲಿ ನಮ್ಮ ವೀರ ಯೋಧರನ್ನು ಬೆಂಬಲಿಸುವುದು ಭಾರತದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ. ಆಪರೇಷನ್ ಸಿಂದೂರ ಯಶಸ್ವಿಗೆ ಕಾರಣಕರ್ತರಾಗಿರುವ ವೀರ ಯೋಧರಿಗೆ ಬೆಂಬಲ, ನೈತಿಕ ಸ್ಥೆೈರ್ಯವನ್ನು ತುಂಬುವ ಕೆಲಸವನ್ನು ನಾವು ಮಾಡಬೇಕು ಎಂದರು.