ದೇಶಾದ್ಯಂತ ಕರಿಟೋಪಿ ಧಾರಿಗಳು ಹೆಚ್ಚಿವೆ : ಡಾ.ಖರ್ಗೆ

KannadaprabhaNewsNetwork |  
Published : Aug 23, 2026, 01:30 AM ISTUpdated : Aug 23, 2026, 07:39 AM IST
Mallikarjun kharge

ಸಾರಾಂಶ

ಈ ದೇಶದಲ್ಲಿ ಈ ಕರಿ ಟೋಪಿ ಜನ ಹೆಚ್ಚಿದ್ದಾರೆ, ಅವರ ಬಗ್ಗೆ ನೀವು ಹುಶಾರಾಗಿರಬೇಕು ಎಂದು ಎಐಸಿಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಪರೋಕ್ಷವಾಗಿ ಆರ್‌ಎಸ್ ಎಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ತಮ್ಮ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತ, ಭಾಷಣದುದ್ದಕ್ಕೂ ಆರೆಸ್ಸೆಸ್ಸ್‌ ಮತ್ತು ಬಿಜೆಪಿಯನ್ನು ಟೀಕಿಸಿದರು

 ಕಲಬುರಗಿ : ಈ ದೇಶದಲ್ಲಿ ಈ ಕರಿ ಟೋಪಿ ಜನ ಹೆಚ್ಚಿದ್ದಾರೆ, ಅವರ ಬಗ್ಗೆ ನೀವು ಹುಶಾರಾಗಿರಬೇಕು ಎಂದು ಎಐಸಿಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ ಖರ್ಗೆ ಪರೋಕ್ಷವಾಗಿ ಆರ್‌ಎಸ್ ಎಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ತಮ್ಮ ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡುತ್ತ, ಭಾಷಣದುದ್ದಕ್ಕೂ ಆರೆಸ್ಸೆಸ್ಸ್‌ ಮತ್ತು ಬಿಜೆಪಿಯನ್ನು ಟೀಕಿಸಿದರು. ಕಾಲಾ ಟೋಪಿ ಎಂದು ಹಿಂದಿಯಲ್ಲಿ ಹೇಳುತ್ತ ಲೇವಡಿ ಮಾಡಿದರಲ್ಲದೆ ಕರಿ ಟೋಪಿ ಧಾರಿಗಳನ್ನು ಅವರನ್ನ ನೀವು ಬದಲಾಯಿಸಬೇಕು, ಇಲ್ಲದಿದ್ದರೇ ಅವರು ಬಹಳ ಜನರನ್ನ ಬದಲಾಯಿಸುತ್ತಾರೆಂದು ಎಂದರು.

ತಮ್ಮನ್ನು ಯಾಕೆ ಗಂಟು ಬಿದ್ದಿದ್ದೀರಿ?

ವಂದೇ ಮಾತರಂ ಬಗ್ಗೆ ನನ್ನ, ಸೋನಿಯಾ ಬಗ್ಗೆ ಹತ್ತತ್ತು ಬಾರಿ ವಿಡಿಯೋ ಹಾಕ್ಕುತ್ತಾರೆ. ಏನು ತೋರಿಸಿದ್ರೂ ಸತ್ಯ ಮುಚ್ಚಿಡಲಾಗದು ಎಂದು ಮಲ್ಲಿಕಾರ್ಜುನ ಖರ್ಗೆ ಮೋದಿ- ಷಾ ವಿರುದ್ಧ ವಾಗ್ದಾಳಿ ನಡೆಸಿದರು. ನಾವು ದೇಶದ್ರೋಹಿಗಳಾ ? ಅವರು ದೇಶದ್ರೋಹಿಗಳಾ ? ಎಂಬುದು ಇತಿಹಾಸ ಹೇಳುತ್ತದೆ. ಅವರೇ ದೇಶದ್ರೋಹಿಗಳು, ದೇಶಕ್ಕಾಗಿ ಎಲ್ಲವನ್ನು ಮಾಡಿದ್ದು ನಾವೇ. ಇಂದು ನಮ್ಮನ್ನೆ ನೀವ್ಯಾರು ಅಂತಾ ಕೇಳ್ತಿದಾರೆ. ನೆಹರು ದೇಶದೆಲ್ಲಡೆ ಶಾಲೆಗಳನ್ನ ತೆರೆದ್ರು. ಆದರೆ ಮೋದಿ ಶಾ ಒಂದು ಶಾಲೆಗಳನ್ನು ತೆರೆದಿಲ್ಲ

ಮೋದಿ ಬಂದ ಮೇಲೆ ಡಿಮಾನಿಟೈಷನ್ ಮಾಡಿ ದೇಶ ಹಾಳು

ಮೋದಿ ಬಂದ ಮೇಲೆ ಡಿಮಾನಿಟೈಷನ್ ಮಾಡಿ ದೇಶ ಹಾಳು ಮಾಡಿದರು. 500 ಕಿ.ಮೀ ಉದ್ದ ಬುಲೆಟ್ ಟ್ರೈನ್‌ಗಾಗಿ 1 ಲಕ್ಷ ಕೋಟಿ ಖರ್ಚು ಮಾಡುತ್ತಿದ್ದಾರೆ. ಇದು ಯಾರ ಹಣ? ಬಡವರ ಹಣ ತಾನೆ ? ಅದೇ ಒಂದು ಲಕ್ಷ ಕೋಟಿಯಲ್ಲಿ ಐದು ಸಾವಿರ ಕಿಮೀ ರೈಲು ಮಾರ್ಗ ಮಾಡಬಹುದು, ಬುಲೆಟ್ ಟ್ರೈನ್ ಕಾಮಗಾರಿ ಖರ್ಚು ಇದೀಗ 3 ಲಕ್ಷ ಕೋಟಿ ತಲುಪಿದೆ. ಇದು ಇವರ ಆರ್ಥಿಕ ನೀತಿ ಎಂದು ಟೀಕಿಸಿದರು.

ದೇಶದಲ್ಲಿ ಸಾವಿರಾರು ವರ್ಷಗಳಿಂದ ಅಸ್ಪೃಶ್ಯತೆ ಇದೆ, ನನ್ನಂತವನ ಮೇಲೆ ಅಸ್ಪೃಶ್ಯತೆ ಪರಿಣಾಮ ಬಿರುವ ಹಾಗೇ ಮಾಡಿದಿರಿ. ನನಗೆ ಯಾಕೆ ಗಂಟು ಬಿದ್ದಿರಿ ? ಎಂದ ಖರ್ಗೆ ಪ್ರಶ್ನಿಸಿದರು. ಸಕ್ಕರೆ ಬೆಲೆ ಏರಿಕೆಯಾಗುತ್ತಿದೆ. ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದೆ, ಮೊದಲು ಬೆಲೆ ಏರಿಕೆ ಕಡಿಮೆ ಆಗುವ ಕೆಲಸ ಮಾಡಿ. ಆಮೇಲೆ ವಂದೇ ಮಾತರಂ ಗೀತೆ ಬಗ್ಗೆ ಚರ್ಚೆ ಮಾಡೋಣ. ಮೋದಿ ಶಾ ದೇಶದಲ್ಲಿ ಮನುಸ್ಮೃತಿ ಪುನಃ ಸ್ಥಾಪಿಸಲು ಹೊರಟಿದ್ದಾರೆಂದು ಟೀಕಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಕಾವಲುಗಾರನೇ ಮತ ಕದ್ದರೆ ಹೇಗೆ?
ಓಟ್‌ ಚೋರಿ ವಿರುದ್ಧ ದೆಹಲಿಯಲ್ಲಿ ಕೆಪಿಸಿಸಿ ಧರಣಿ