ಹಕ್ಕು ಪತ್ರ ವಿತರಣೆ ಭರವಸೆ ನೀಡಿದ ಅಧಿಕಾರಿ

KannadaprabhaNewsNetwork |  
Published : Dec 15, 2023, 01:30 AM IST
14ಬಿಎಲ್‌ಎಚ್5 | Kannada Prabha

ಸಾರಾಂಶ

ಹಕ್ಕು ಪತ್ರ ವಿತರಣೆ ಭರವಸೆ ನೀಡಿದ ಅಧಿಕಾರಿ

ಕನ್ನಡಪ್ರಭ ವಾರ್ತೆ ಬೈಲಹೊಂಗಲಸಿಟಿ ಸರ್ವೆ ನಕ್ಷೆ ಪ್ರಕಾರ ಶುಕ್ರವಾರದಿಂದ ಸರ್ವೆ ಕಾರ್ಯ ಕೈಕೊಂಡು, ಪರಿಶೀಲನೆ ನಡೆಸಿ ಮೇಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. ನಂತರ ಹಕ್ಕು ಪತ್ರ ವಿತರಣೆಗೆ ಕ್ರಮ ಜರುಗಿಸಲಾಗುವುದು ಎಂದು ಕೊಳಚೆ ನಿರ್ಮೂಲನಾ ನಿಗಮದ ಅಭಿಯಂತರ ಅಕ್ಷಯ, ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ನಿವಾಸಿಗಳಿಗೆ ಭರವಸೆ ನೀಡಿದರು. ಮನೆಗಳ ಹಕ್ಕುಪತ್ರ ವಿತರಿಸುವಂತೆ ಹರಳಯ್ಯ ಕಾಲನಿ ನಿವಾಸಿಗಳು ಎ.ಸಿ ಕಾರ್ಯಾಲಯದ ಎದುರು ನಡೆಸುತ್ತಿರುವ ಅಹೋ ರಾತ್ರಿ ಧರಣಿ ಸ್ಥಳಕ್ಕೆ ಭೇಟಿ ನೀಡಿ ಅವರು ಭರವಸೆ ನೀಡಿದರು. ಈ ವೇಳೆ ಮುಖಂಡ ಪರುಶರಾಮ ರಾಯಭಾಗ ಮಾತನಾಡಿ, ನಮಗೆ ಹಕ್ಕು ಪತ್ರ ಸಿಗುವರೆಗೆ ಪ್ರತಿಭಟನೆ ಮುಂದುವರೆಸುತ್ತೇವೆ. ಈಗಾಗಲೇ ಅಧಿಕಾರಿಗಳು ಸಾಕಷ್ಟು ಭರವಸೆ ನೀಡಿದ್ದರೂ ಕ್ರಮ ಜರುಗಿಲ್ಲ ಎಂದರು. ಈ ವೇಳೆ ಸಿಟಿ ಸರ್ವೆ ಭೂಮಾಪಕಿ ಎಸ್.ಎಸ್. ಮೇಲಿನಮನಿ, ಪುರಸಭೆ ಕಂದಾಯ ಅಧಿಕಾರಿ ಎಸ್.ಆರ್‌. ಹಳ್ಳೂರ, ಸಂತೋಷ ನರಗುಂದ, ರಾಜು ಅಗಾಸಿ, ಲಕ್ಷ್ಮಣ ಕಳಮಕರ, ಯಶವಂತ ರಾಯಬಾಗ, ನಾಗರಾಜ ಹಕಾತಿ, ನಾರಾಯಣ ಕಳಮಕರ, ದಿಲಾವರ ಅಕ್ಕಿ, ಅಲ್ಲಾಭಕ್ಷ ಫನಿಬಂದ, ಭರಮಪ್ಪ ತೊರಗಲ್ಲ, ಉಮೇಶ ದೊಡಮನಿ, ಮಂಜು ರಾಯಬಾಗ, ಜಯರಾಬಿ ಅನ್ಸಾರಿ, ಖುರ್ಷಿದಬಾನು ಸೈಯ್ಯದ, ಕಮಾಲಬಿ ಸೈಯ್ಯದ, ಯಲ್ಲವ್ವ ಪಾಟೀಲ, ಯಾಸ್ಮಿನ ಖಾನ, ರೂಪಾ ದೊಡಮನಿ, ರೇಷ್ಮಾ ಮುಗಟಖಾ, ಈರಮ್ಮ ದಳವಾಯಿ ಮುಂತಾದವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರ್ಮಲಾನಂದನಾಥ ಶ್ರೀಗಳ ಮುತ್ತಿನ ಪಲ್ಲಕ್ಕಿ ಉತ್ಸವ
ಭಾರತೀಯ ವಿಜ್ಞಾನಿಗಳ ಕೊಡುಗೆ ಗೌರವಿಸಿ: ಮಜ್ಜಿಗೆಪುರ ಕೆ.ಶಿವರಾಮು