ಕನ್ನಡಪ್ರಭ ವಾರ್ತೆ ಪಾವಗಡ
ತಂದೆ ತಾಯಿ ಇಲ್ಲದ ವೀರ್ಲಗೊಂದಿ ಗ್ರಾಮದ ಕೆ.ಚಂದ್ರಶೇಖರ್ ಹಾಗೂ ಕೆ.ಶ್ರೀದೇವಮ್ಮ ಅವರ ಪುತ್ರಿ ಕೆಂಚನ್ನಗಾರಿ ಸೌಂದರ್ಯ ವಿಜ್ಞಾನ ವಿಭಾಗದಲ್ಲಿ ತಾಲೂಕಿಗೆ ಪ್ರಥಮ ಸ್ಥಾನಗಳಿಸಿದ್ದು ಭೌತಶಾಸ್ತ್ರ 100, ರಸಾಯನ ಶಾಸ್ತ್ರ 100 ಸೇರಿದಂತೆ 600ಕ್ಕೆ 568 (ಶೇ,95)ಆಂಕಗಳಿಸಿ ತಾಲೂಕಿಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಪಾವಗಡ ಪಟ್ಟಣದ ಗಂಗಾಧರ್ ಹಾಗೂ ಪ್ರಮೀಳ ಅವರ ಪುತ್ರಿ ಇದೇ ಕಾಲೇಜಿನ ವಿಜ್ಞಾನ ವಿಭಾಗದ ಯುವನಿಕ ಎಂಬ ವಿದ್ಯಾರ್ಥಿನಿ ಭೌತಶಾಸ್ತ್ರ 100ಹಾಗೂ ರಸಾಯನ ಶಾಸ್ತ್ರದ ವಿಷಯದಲ್ಲಿ 100ರಷ್ಟು ಆಂಕಪಡೆದು 600ಕ್ಕೆ 651.(ಶೇ,93.5)ಆಂಕಗಳಿಸುವ ಮೂಲಕ ತಾಲೂಕಿಗೆ ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
2024-25 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ತಾಲೂಕಿನಲ್ಲಿಯೇ ಅತಿ ಹೆಚ್ಚು ಅಂಕ ಮೂಲಕ ಕಾಲೇಜಿಗೆ ಕೀರ್ತಿ ತಂದ ವಿದ್ಯಾರ್ಥಿಗಳನ್ನು ಸ್ವಾಮಿ ವಿವೇಕಾನಂದ ಪಿಯು ಕಾಲೇಜಿನ ಆಡಳಿತ ಮಂಡಳಿ,ಪ್ರಾಂಶುಪಾಲ,ಉಪಪ್ರಾಂಶುಪಾಲ,ಹಾಗೂ ಸಿಬ್ಬಂದಿ ವರ್ಗದವರಿಂದ ಅಭಿನಂದನೆ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.